ಹಾಲಿವುಡ್ ನಿರ್ದೇಶಕನ ಜೊತೆ ಸಿನಿಮಾ: ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

'ರಾಮಾಯಣ' ಹಾಗೂ 'ಟಾಕ್ಸಿಕ್' ಸಿನಿಮಾಗಳ ಮೂಲಕ ಹಾಲಿವುಡ್ ಅಂಗಳಕ್ಕೆ ಜಿಗಿಯುತ್ತಿದ್ದಾರೆ ಯಶ್. ಈ ಮೂಲಕ ಭಾರತ ಹಾಗೂ ಪಾಶ್ಚಿಮಾತ್ಯ ಸಿನಿಮಾ ಪ್ರಪಂಚಗಳನ್ನು ಒಟ್ಟುಗೂಡಿಸುವ ಪ್ರಯತ್ನ ನಡೀತಿದೆ. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಮುಂದೆ ನೇರವಾಗಿ ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಿರಾ? ಎನ್ನುವ ಪ್ರಶ್ನೆಗೆ ಯಶ್ ಪ್ರತಿಕ್ರಿಯಿಸಿದ್ದಾರೆ.

ಲಾಸ್ ವೇಗಾಸ್‌ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ನಟ ಯಶ್ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಭಾಗಿ ಆಗಿದ್ದರು. ಸಾಕಷ್ಟು ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದರು. 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. 'ಟಾಕ್ಸಿಕ್' ಚಿತ್ರದ ಗ್ರಾಫಿಕ್ಸ್ ಕೆಲಸಗಳನ್ನು ನಮಿತ್ ಮಲ್ಹೋತ್ರಾ ಒಡೆತನದ ಸಂಸ್ಥೆ ನಿಭಾಯಿಸುತ್ತಿದೆ. ಜೂನ್ 4ಕ್ಕೆ ಸಿನಿಮಾ ತೆರೆಗೆ ಬರಲಿದೆ.

Yash hints at Hollywood move while promoting Toxic and Ramayana

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರ್ತಿದೆ. ಮೊದಲ ಭಾಗದ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೀತಿದೆ. 2ನೇ ಭಾಗದ ಚಿತ್ರೀಕರಣ ಕೂಡ ಆರಂಭವಾಗಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್ ಬಣ್ಣ ಹಚ್ಚಿದ್ದಾರೆ. ರಾವಣನಾಗಿ ನಟಿಸುವುದರ ಜೊತೆಗೆ ಈ ಪೌರಾಣಿಕ ಚಿತ್ರ ನಿರ್ಮಾಣಕ್ಕೂ ರಾಕಿಂಗ್ ಸ್ಟಾರ್ ಕೈಜೋಡಿಸಿದ್ದಾರೆ.

ಈ ಎರಡೂ ಚಿತ್ರಗಳಿಗೆ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಬ್ರಿಟೀಷ್ ಕಲಾವಿದರು ನಟಿಸಿದ್ದಾರೆ. ಹಾಲಿವುಡ್ ನಿರ್ದೇಶಕನ ಸಿನಿಮಾದಲ್ಲಿ ಕೆಲಸ ಮಾಡುವ ಬಗ್ಗೆ ಯಶ್ ಮೌನ ಮುರಿದಿದ್ದಾರೆ. screendaily.com ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಶನದಲ್ಲಿ 'ರಾಮಾಯಣ' ಹಾಗೂ 'ಟಾಕ್ಸಿಕ್' ಚಿತ್ರಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳಿಗೆ ಯಶ್ ಉತ್ತರಿಸಿದ್ದಾರೆ.

Yash hints at Hollywood move while promoting Toxic and Ramayana

ಪಾಶ್ಚಿಮಾತ್ಯ ಸಿನಿಮಾ ನಿರ್ದೇಶಕರ ಜೊತೆ ಕೆಲಸ ಮಾಡಿದ್ದೀರಾ? ಎನ್ನುವ ಪ್ರಶ್ನೆಗೆ "ಇಲ್ಲ, ಆದ್ರೆ, ಜೆ.ಜೆ. ಪೆರ್ರಿ ಮತ್ತು ಗೈ ನಾರ್ರಿಸ್ ರೀತಿಯ ಸಾಹಸ ನಿರ್ದೇಶಕಕರ ಜೊತೆ ಕೆಲಸ ಮಾಡಿದ್ದೇನೆ. ನಾವು ಪಾಶ್ಚಿಮಾತ್ಯ ದೇಶಗಳಿಂದ ಬಹಳಷ್ಟು ತಂತ್ರಜ್ಞರನ್ನು ಕರೆತರುತ್ತಿದ್ದೇವೆ, ಅವರ ಪರಿಣತಿಯನ್ನು ಬಳಸಿಕೊಂಡು ನಮ್ಮ ಬರಹಗಾರರನ್ನು ಕರೆತರುತ್ತಿದ್ದೇವೆ. ಇತ್ತ ಹಾಲಿವುಡ್ ಅತ್ತ ಭಾರತ ಎರಡಕ್ಕೂ ಸೂಕ್ತ ಎನಿಸುವ ಕಾನ್ಸೆಪ್ಟ್ ಜೊತೆ ಹಾಲಿವುಡ್ ನಿರ್ದೇಶಕರು ಬಂದ್ರೆ, ಒಂದು ಕೈ ನೋಡೋಣ" ಎಂದು ಯಶ್ ಹೇಳಿದ್ದಾರೆ.

ನಾಲ್ಕೈದು ವರ್ಷಗಳ ಹಿಂದೆಯೇ ಜೆಜೆ ಪೆರ್ರಿ ಜೊತೆ ಯಶ್ ಕಾಣಿಸಿಕೊಂಡಿದ್ದರು. ಇಬ್ಬರೂ ಗನ್ ಹಿಡಿದು ಅಬ್ಬರಿಸಿದ್ದ ವಿಡಿಯೋ ವೈರಲ್ ಆಗಿತ್ತು. 'ಟಾಕ್ಸಿಕ್' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಲು ಬಹಳ ಹಿಂದೆಯೇ ಇಬ್ಬರೂ ತಯಾರಿ ನಡೆಸಿದ್ದರು. ಚಿತ್ರದಲ್ಲಿ ಅದ್ಭುತ ಸಾಹಸ ಸನ್ನಿವೇಶಗಳನ್ನು ಪೆರ್ರಿ ಕಂಪೋಸ್ ಮಾಡಿದ್ದಾರೆ.

'ಟಾಕ್ಸಿಕ್' ಚಿತ್ರವನ್ನು ದೊಡ್ಡಮಟ್ಟದಲ್ಲಿ ಪ್ರೈಂ ಮೀಡಿಯಾ ಸಂಸ್ಥೆ ಅಮೆರಿಕಾದಲ್ಲಿ ಬಿಡುಗಡೆ ಮಾಡಲಿದೆ. ಸಾವಿರಾರು ಸ್ಕ್ರೀನ್‌ಗಳಲ್ಲಿ ಕನ್ನಡ, ತೆಲುಗು, ತಮಿಳು, ತೆಲುಗು, ಹಿಂದಿ ವರ್ಷನ್‌ಗಳಲ್ಲಿ ಸಿನಿಮಾ ಅಲ್ಲಿ ಸದ್ದು ಮಾಡಲಿದೆ. ಆದರೆ ಇಂಗ್ಲೀಷ್ ವರ್ಷನ್ ಯಾರು ವಿತರಣೆ ಮಾಡುತ್ತಾರೆ ಎನ್ನುವ ಬಗ್ಗೆ ಚರ್ಚೆ ಮುಂದುವೆರೆದಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ನಿರ್ಮಾಣ ಮಾಡಿದ್ದಾರೆ.

ಪದೇ ಪದೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ದಿನಾಂಕ ಮುಂದೂಡುತ್ತಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಶತಾಯಗತಾಯ ಜೂನ್ 4ರಂದು ಸಿನಿಮಾ ತೆರೆಗಪ್ಪಳಿಸುವುದು ಖಚಿತವಾಗಿದೆ. ಚಿತ್ರದಲ್ಲಿ ತಂದೆ ಹಾಗೂ ಮಗನಾಗಿ ದ್ವಿಪಾತ್ರದಲ್ಲಿ ಯಶ್ ಅಬ್ಬರಿಸಿದ್ದಾರೆ.

Read more about: yash hollywood toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X