»   » ಕೆರೆ ಹೂಳೆತ್ತಿದವರಿಗೆ 'ಕಾರ್ಮಿಕರ ದಿನ'ದ ಅಂಗವಾಗಿ ಯಶ್ ವಿಶೇಷ ಕೊಡುಗೆ!

ಕೆರೆ ಹೂಳೆತ್ತಿದವರಿಗೆ 'ಕಾರ್ಮಿಕರ ದಿನ'ದ ಅಂಗವಾಗಿ ಯಶ್ ವಿಶೇಷ ಕೊಡುಗೆ!

Posted By:
Subscribe to Filmibeat Kannada

'ನಾನೊಬ್ಬ ಕಲಾವಿದನಾಗಿ ದೇವರು ನನಗೆ ಎಷ್ಟು ಶಕ್ತಿ ಕೊಟ್ಟಿದ್ದಾನೋ ಅಷ್ಟರಲ್ಲಿ ರೈತರ ಕಲ್ಯಾಣಕ್ಕಾಗಿ ಶ್ರಮಿಸುವ ಪ್ರಯತ್ನ ಮಾಡುತ್ತಿದ್ದೇನೆ' ಎಂದು ಹೇಳುತ್ತಾ ರೈತರ ಅಭ್ಯುದಯಕ್ಕಾಗಿ ಸದಾ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ ನಟ ಯಶ್.[ಯಶ್ 'ಯಶೋಮಾರ್ಗ'ದಿಂದ ಮತ್ತೊಂದು ಶ್ಲಾಘನೀಯ ಕೆಲಸ]

ಅಲ್ಲದೇ ಕಾಯಕವೇ ಕೈಲಾಸವೆನ್ನುವ ಬಸವಣ್ಣನವರ ತತ್ವದಂತೆ ಸಮಾಜದ ಅಭಿವೃದ್ದಿ ಕೆಲಸಗಳಲ್ಲಿ, ಚಿತ್ರೀಕರಣದ ಬಿಜಿ ಶೆಡ್ಯೂಲ್ ನಿಂದ ಬಿಡುವು ಮಾಡಿಕೊಂಡು ತೊಡಗಿಕೊಳ್ಳುತ್ತಿರುತ್ತಾರೆ. ನಿನ್ನೆಯೂ(ಮೇ 1) ಸಹ ಯಶ್ ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗೊತ್ತಿ ಪ್ರತಿಯೊಬ್ಬ ವ್ಯಕ್ತಿಗೆ ಗೌರವ ಸೂಚಕವಾಗಿ ಆಚರಿಸುವ ವಿಶ್ವ ಕಾರ್ಮಿಕ ದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ. ಮುಂದೆ ಓದಿರಿ...

ಯಶ್ ರಿಂದ ವಿಶೇಷವಾಗಿ ಕಾರ್ಮಿಕರ ದಿನ ಆಚರಣೆ

ರೀಲ್ ಮಾತ್ರವಲ್ಲದೇ ರಿಯಲ್ ಲೈಫ್ ನಲ್ಲೂ ತಮ್ಮ ತತ್ವಗಳು, ಸಮಾಜ ಮುಖಿ ಕೆಲಸಗಳಿಂದ ಹೀರೋ ಆಗಿ ಮಿಂಚುತ್ತಿರುವ ನಟ ರಾಕಿಂಕ್ ಸ್ಟಾರ್ ಯಶ್ ನಿನ್ನೆ (ಮೇ 1) ಕಾರ್ಮಿಕರ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಮತ್ತು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ.[ಯಶ್ ಮಹತ್ತರ ಕಾರ್ಯಕ್ಕೆ ಸಿಕ್ಕಿದೆ ಮೊದಲ ಪ್ರತಿಫಲ]

ತಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನಾಚರಣೆ

ಯಶ್ ರವರು ಮೇ 1 ರಂದು ತಮ್ಮ ಯಶೋಮಾರ್ಗ ತಂಡ ಕೆರೆ ಹೂಳೆತ್ತುವ ಕಾಮಗಾರಿ ನಡೆಸುತ್ತಿರುವ ತಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನ ಆಚರಣೆ ಮಾಡಿದ್ದಾರೆ. 40 ಗ್ರಾಮಗಳಿಗೆ ಅನುಕೂಲ ಬಯಸಿ ತಲ್ಲೂರು ಕೆರೆ ಹೂಳೆತ್ತುವ ಕೆಲಸ ಮಾಡುತ್ತಿರುವ ಯಶೋಮಾರ್ಗ ತಂಡದೊಂದಿಗೆ ಯಶ್ ಆಚರಣೆ ಮಾಡಿದ ಕಾರ್ಮಿಕರ ದಿನಾಚರಣೆ ತುಂಬಾ ವಿಶೇಷವಾಗಿತ್ತು.[ಕನ್ನಡ ಚಿತ್ರರಂಗಕ್ಕೆ ಇಂಥ ಪ್ರೊಡ್ಯೂಸರ್ ಬೇಕು! ಯಶ್ ನಡೆಗೆ ಮೆಚ್ಚಲೇಬೇಕು!]

ಕಾರ್ಮಿಕರಿಗೆ ಯಶ್ ಸನ್ಮಾನ

ತಲ್ಲೂರು ಗ್ರಾಮದಲ್ಲಿ ಕಾರ್ಮಿಕರ ದಿನ ಆಚರಣೆ ಮಾಡಿದ ಯಶ್, ಅಲ್ಲಿನ ಕೆರೆ ಹೂಳೆತ್ತುವ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು, ಹಿಟಾಚಿ ಮತ್ತು ಟ್ರ್ಯಾಕ್ಟರ್ ಚಾಲಕರಿಗೆ ಹೊಸ ಬಟ್ಟೆ ವಿತರಣೆ ಮಾಡಿ ಹೂವಿನ ಹಾರಹಾಕಿ ಸನ್ಮಾನ ಮಾಡಿದ್ದಾರೆ.

ದುಡಿದು ತಿನ್ನುವ ಎಲ್ಲರೂ ಕಾರ್ಮಿಕರೇ!

ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಯಶ್, 'ಸಮಾಜದ ಅಭಿವೃದ್ದಿಯಲ್ಲಿ ಎಲ್ಲಾ ಕಾರ್ಮಿಕರ ಶ್ರಮವೂ ಅಡಗಿದೆ. ಅವರಿಲ್ಲದೇ ಯಾವುದೇ ಕೆಲಸವೂ ಸಾಧ್ಯವಿಲ್ಲ. ದುಡಿದು ತಿನ್ನುವ ಪ್ರತಿಯೊಬ್ಬರು ಕಾರ್ಮಿಕರೇ" ಎಂದು ಹೇಳಿದರು.

ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ

ವಿಶೇಷ ರೀತಿಯಲ್ಲಿ ಕಾರ್ಮಿಕರ ದಿನ ಆಚರಣೆ ಮಾಡಿ ಕಾರ್ಮಿಕರಿಗೆ ಗೌರವ ಸಲ್ಲಿಸಿದ ಯಶ್, ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿ ಶೇಕಡ 75 ರಷ್ಟು ಕೆಲಸ ಮುಗಿದಿದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಜೊತೆಗೆ ಕೆಲವು ಸಮಯ ಹಿಟಾಚಿ ಏರಿ ಕುಳಿತು, ಅದರಿಂದ ಹೂಳು ಬಾಚುವ ಕೆಲಸವನ್ನು ಮಾಡಿದರು.

English summary
Kannda Actor Rocking star yash Yash honored the workers as part of 'Laboure Day' at Tallur Village

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada