twitter
    For Quick Alerts
    ALLOW NOTIFICATIONS  
    For Daily Alerts

    ಬಾಡಿಗೆ ಮನೆ ರಾದ್ಧಾಂತದ ಬಗ್ಗೆ ಕಡೆಗೂ ಸತ್ಯ ಬಾಯ್ಬಿಟ್ಟ ನಟ ಯಶ್.!

    By Harshitha
    |

    ''ನಂ.755, 5ನೇ ಕ್ರಾಸ್, 3 ನೇ ಹಂತ, ಬನಶಂಕರಿಯಲ್ಲಿರುವ ಮನೆಗೆ ನಟ ಯಶ್ ಬಾಡಿಗೆ ಕಟ್ಟುತ್ತಿಲ್ಲ. ಗಾಂಧಿನಗರದಲ್ಲಿ ಗೆಲ್ಲುವ ಕುದುರೆ ಆಗಿದ್ದರೂ, ಯಶ್ ತಿಂಗಳಿಗೆ ಸರಿಯಾಗಿ ಬಾಡಿಗೆ ಕೊಡಲ್ಲ. ಮನೆಯನ್ನೂ ಖಾಲಿ ಮಾಡಲ್ಲ. 23 ಲಕ್ಷ ರೂಪಾಯಿ ಬಾಡಿಗೆ ಉಳಿಸಿಕೊಂಡಿದ್ದಾರೆ ನಟ ಯಶ್'' ಎಂದು ಮನೆ ಮಾಲೀಕರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಲದಕ್ಕೆ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಕೂಡ ಹೂಡಿದರು.

    ಮೂರು ವರ್ಷದಿಂದ ನಡೆಯುತ್ತಿರುವ ಈ ಬಾಡಿಗೆ ವಿವಾದದ ಕುರಿತಂತೆ ನಿನ್ನೆ ಸಿಟಿ ಸಿವಿಲ್ ಕೋರ್ಟ್ ತೀರ್ಪು ನೀಡಿದೆ. ಬಾಕಿಯಿರುವ ಬಾಡಿಗೆ 9 ಲಕ್ಷ 60 ಸಾವಿರ ರೂಪಾಯಿಯನ್ನ ಪಾವತಿ ಮಾಡಿ, ಮೂರು ತಿಂಗಳೊಳಗೆ ನಟ ಯಶ್ ಮನೆ ಖಾಲಿ ಮಾಡಬೇಕು. ಇತ್ತ ಮನೆ ಮಾಲೀಕರು ಕೂಡ ಯಶ್ ಕುಟುಂಬ ನೀಡಿದ್ದ 4 ಲಕ್ಷ ಅಡ್ವಾನ್ಸ್ ಹಿಂದಿರುಗಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.

    ಹಾಗಾದ್ರೆ, ನಟ ಯಶ್ ಒಂಬತ್ತು ಲಕ್ಷ ಬಾಡಿಗೆ ಉಳಿಸಿಕೊಂಡಿದ್ರಾ.? ಕೋಟಿ ಕೋಟಿ ಸಂಭಾವನೆ ಪಡೆಯುವ ಯಶ್ ಗೆ ಮನೆ ಬಾಡಿಗೆ ಯಾವ ಲೆಕ್ಕ ಅಂತ ನೀವು ಮಾತನಾಡಿಕೊಳ್ಳಬಹುದು. ಆದ್ರೆ, ವಾಸ್ತವ ಅದಲ್ಲ.!

    ಬಾಡಿಗೆ ದುಡ್ಡು ಪಡೆದಿದ್ದರೂ, ಮನೆ ಮಾಲೀಕರು ಯಶ್ ಹಾಗೂ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರಂತೆ. ಹಾಗಂತ ಸ್ವತಃ ಯಶ್ ಬಾಯ್ಬಿಟ್ಟಿದ್ದಾರೆ. ಮನೆ ಮಾಲೀಕರು ಮಾಡಿರುವ ಅನ್ಯಾಯವನ್ನ ಫೇಸ್ ಬುಕ್ ನಲ್ಲಿ ಹೊರಹಾಕಿದ್ದಾರೆ ನಟ ಯಶ್.

    ಬಾಡಿಗೆ ವಿವಾದದ ಕುರಿತು ಫೇಸ್ ಬುಕ್ ನಲ್ಲಿ ನಟ ಯಶ್ ಏನೇನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ...

    ನನ್ನ ಹೃದಯ ಕಲ್ಲಾಗಿದೆ

    ನನ್ನ ಹೃದಯ ಕಲ್ಲಾಗಿದೆ

    ''ಅನವಶ್ಯಕ ವಿಷಯಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ ಅಂದುಕೊಂಡೇ ನಾನು ಜೀವನ ಸಾಗಿಸುತ್ತಾ ಬಂದಿದ್ದೇನೆ. ನನ್ನ ಬಗ್ಗೆ ಅಪವಾದ, ಕಳಂಕಗಳು ಆಗಾಗ ಕೇಳಿ ಬರುತ್ತಲೇ ಇದೆ. ಒಬ್ಬ ಕಲಾವಿದ ಪಬ್ಲಿಕ್ ಲೈಫ್ ನಲ್ಲಿ ಇದ್ದಾಗ, ಚಿಕ್ಕ ಚಿಕ್ಕ ವಿಷಯಗಳೂ ಕೂಡ ದೊಡ್ಡದಾಗಿ ಬಿಂಬಿತವಾಗುತ್ತದೆ. ಅದರಿಂದ ಯಾರಿಗೆ ಏನು ಉಪಯೋಗವೋ ಗೊತ್ತಿಲ್ಲ. ಆದ್ರೆ, ಕೆಲವು ಬಾರಿ ಕೆಲವು ವಿಚಾರಗಳನ್ನ ಅವಾಯ್ಡ್ ಮಾಡಿದ್ದೇನೆ. ಸುಮ್ನಿರೋದನ್ನೇ ದುರ್ಬಳಕೆ ಮಾಡಿಕೊಂಡಾಗ ತಪ್ಪು ಅನಿಸುತ್ತೆ. ಚಿಕ್ಕವಯಸ್ಸಿಂದಲೂ ನಾನು ಕಷ್ಟಗಳನ್ನು ನೋಡಿ ಬಂದಿರುವುದರಿಂದ ನನ್ನ ಹೃದಯ ಕಲ್ಲಾಗಿದೆ. ಹೀಗಾಗಿ, ಯಾರು ನನ್ನ ಬಗ್ಗೆ ಏನೇ ಅಂದುಕೊಂಡರೂ, ನನಗೇನೂ ಪರಿಣಾಮ ಬೀರುವುದಿಲ್ಲ'' - ನಟ ಯಶ್

    3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ3 ತಿಂಗಳಲ್ಲಿ ಮನೆ ಖಾಲಿ ಮಾಡ್ಬೇಕು: ಯಶ್ ಗೆ ಸಿವಿಲ್ ಕೋರ್ಟ್ ಆದೇಶ

    ಇಷ್ಟು ದಿನ ಸುಮ್ನೆ ಇದ್ದದ್ದು ಯಾಕೆ.?

    ಇಷ್ಟು ದಿನ ಸುಮ್ನೆ ಇದ್ದದ್ದು ಯಾಕೆ.?

    ''ನಾನು ಬಾಡಿಗೆ ಕಟ್ಟಿಲ್ಲ, ಮೋಸ ಮಾಡಿದ್ದೇನೆ, ದಬ್ಬಾಳಿಕೆ ಮಾಡಿದ್ದೇನೆ ಎಂಬ ವಿಷಯಗಳು ಬಂತು. ಆಗಲೇ ನಾನು ಪ್ರತಿಕ್ರಿಯೆ ಕೊಡಬೇಕಿತ್ತು. ಆದ್ರೆ, ನಾನು ಹಾಗೆ ಮಾಡಲಿಲ್ಲ. ಈ ವಿಚಾರ ಚರ್ಚೆಯ ವಸ್ತು ಆಗಬಾರದು ಎಂಬ ಕಾರಣಕ್ಕೆ ನಾನು ಸುಮ್ಮನಿದ್ದೆ'' - ನಟ ಯಶ್

    'ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!''ಯಶ್ ಇಮೇಜ್ ಗೆ ಡ್ಯಾಮೇಜ್ ಮಾಡುವ ಕೆಲಸವಿದು!'

    ಸತ್ಯ ಬಾಯ್ಬಿಟ್ಟ ಯಶ್

    ಸತ್ಯ ಬಾಯ್ಬಿಟ್ಟ ಯಶ್

    ''ಸತ್ಯ ಹೇಳ್ತೀನಿ ಕೇಳಿ... ಪ್ರತಿ ತಿಂಗಳು ಮಿಸ್ ಮಾಡದೆ ನಾನು ಬಾಡಿಗೆ ಕೊಟ್ಟಿದ್ದೇನೆ. ಮನೆ ಮಾಲೀಕರು ಕೂಡ ನಮ್ಮ ಜೊತೆಗೆ ಬಹಳ ಚೆನ್ನಾಗಿ ಇದ್ದರು. ಆ ಮನೆ ನನಗೆ ಲಕ್ಕಿ ಅಂತ ಕೆಲವು ಪ್ರೋಗ್ರಾಂಗಳಲ್ಲಿ ನಾನು ನೋಡಿದೆ. ಆದ್ರೆ, ಅಂತಹ ಮೂಢನಂಬಿಕೆಗಳು ನನಗೆ ಇಲ್ಲ. ನಾನು ಯಾವ್ಯಾವ ಮನೆಗಳಲ್ಲಿ ಇದ್ನೋ, ಆ ಎಲ್ಲ ಮನೆಗಳಲ್ಲೂ ಹಿಟ್ ಸಿನಿಮಾ ಕೊಟ್ಟಿದ್ದೇನೆ. ನಿಜ ಹೇಳ್ಬೇಕಂದ್ರೆ, ಈ ಮನೆ ಬಿಟ್ಟ ಮೇಲೆ 'ರಾಜಾಹುಲಿ', 'ರಾಮಾಚಾರಿ' ಸಿನಿಮಾ ಬಂದಿದ್ದು. ಆ ಎರಡೂ ಹಿಟ್ ಸಿನಿಮಾಗಳೇ.! ಒಂದು ಮನೆಯಿಂದ ಸಿನಿಮಾ ಹಿಟ್ ಆಗುತ್ತೆ ಅಂತ ನಂಬುವ ವೀಕ್ ವ್ಯಕ್ತಿ ನಾನಲ್ಲ. ನನ್ನ ಕೆಲಸ, ನನ್ನ ಪರಿಶ್ರಮದಿಂದ ಗೆಲ್ತೀನಿ, ಗೆಲ್ಲುತ್ತಿದ್ದೇನೆ ಎಂಬ ನಂಬಿಕೆ ಇಟ್ಟುಕೊಂಡಿರುವ ವ್ಯಕ್ತಿ ನಾನು'' - ನಟ ಯಶ್

    ಗಾದೆ : ಗಾದೆ : "ದಡ್ಡರು ಮನೆ ಕಟ್ತಾರೆ, ಬುದ್ಧಿವಂತರು ಅಲ್ಲಿ ವಾಸಿಸುತ್ತಾರೆ"

    ಇಷ್ಟದ ಮನೆ

    ಇಷ್ಟದ ಮನೆ

    ''ಆ ಮನೆ ನನಗೆ ಬಹಳ ಇಷ್ಟವಾದ ಮನೆ ನಿಜ. ನಾನು ಎಲ್ಲೆಲ್ಲಿದ್ದೆ, ಅಲ್ಲೆಲ್ಲ ನನಗೆ ಒಳ್ಳೊಳ್ಳೆಯ ನೆನಪುಗಳಿವೆ. ಆ ಮನೆ ಮಾಲೀಕರು ಡಾಕ್ಟರ್ಸ್. ಒಂದೆರಡು ಬಾರಿ ನಾನು ಅವರನ್ನ ಮೀಟ್ ಮಾಡಿದ್ದೇನೆ ಅಷ್ಟೇ'' - ನಟ ಯಶ್

    ಸ್ವಂತ ಮನೆಗೆ ಹೋಗುವ ಮುನ್ನ ಇದ್ದ ಮನೆ

    ಸ್ವಂತ ಮನೆಗೆ ಹೋಗುವ ಮುನ್ನ ಇದ್ದ ಮನೆ

    ''ನಾನೊಂದು ಮನೆ ಕಟ್ಟುತ್ತಿದ್ದೆ. ಅಲ್ಲಿಗೆ, ಶಿಫ್ಟ್ ಆಗುವ ಮುನ್ನ ನಾವು ಈ ಮನೆಯಲ್ಲಿ ಬಾಡಿಗೆಗೆ ಇದ್ವಿ ಅಷ್ಟೇ'' - ನಟ ಯಶ್

    ಕೀ ಕೊಡುವ ಟೈಮ್ ನಲ್ಲಿ ಜಗಳ ಆಗಿದೆ

    ಕೀ ಕೊಡುವ ಟೈಮ್ ನಲ್ಲಿ ಜಗಳ ಆಗಿದೆ

    ''ಆ ಮನೆ ಖಾಲಿ ಮಾಡಿ, ಅವರಿಗೆ ಕೀ ಕೊಡುವ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಮನೆ ಖಾಲಿ ಮಾಡುವಾಗ, ಮನೆಗೆ ನಮ್ಮ ತಾಯಿ ಪೇಂಟ್ ಮಾಡಿಸುತ್ತಾ ಕೂತಿದ್ದರು. ನಾನು ಯಾಕೆ ಅಂತ ಕೇಳಿದಾಗ, ಮನೆ ವಾಪಸ್ ಕೊಡುವಾಗ ನೀಟ್ ಆಗಿ ಕೊಡಬೇಕು ಅಂತ ನನ್ನ ತಾಯಿ ಹೇಳಿದ್ದರು. ಹೀಗಾಗಿರುವಾಗ, ಮನೆ ಮಾಲೀಕರಿಗೆ ಕೀ ಕೊಡಲು ಹೋದಾಗ ಜಗಳ ಆಗಿದೆ. ಮನೆಯ ಇಂಟೀರಿಯರ್ ವಿಚಾರಕ್ಕೆ ಸಂಬಂಧ ಪಟ್ಟಂತೆ ನನ್ನ ತಾಯಿ ಹಾಗೂ ಮನೆ ಮಾಲೀಕರ ನಡುವೆ ಗಲಾಟೆ ನಡೆದಿದೆ. ಮನೆ ಮಾಲೀಕರು ತೀರಾ ಹೀನಾಯವಾಗಿ ಮಾತನಾಡಿದ್ದಾರೆ. ಓಡಿಸ್ತೀವಿ, ಖಾಲಿ ಮಾಡಿಸ್ತೀವಿ, ಮಾಧ್ಯಮಗಳ ಮುಂದೆ ಹೋಗ್ತೀವಿ... ಅಂತಹ ಮಾತುಗಳನ್ನೆಲ್ಲ ಶುರು ಮಾಡಿದ್ದು ಮನೆ ಮಾಲೀಕರು. ಅದನ್ನ ಕೇಳಿ ನನ್ನ ತಾಯಿ ಬೇಸರ ಮಾಡಿಕೊಂಡರು. ನನಗೂ ನೋವಾಯ್ತು. ನಾನು ಕೂಡ ಸುಮ್ಮನಿದ್ದೆ'' - ನಟ ಯಶ್

    ನನಗೂ ಹಠ ಬಂತು

    ನನಗೂ ಹಠ ಬಂತು

    ''ಆಮೇಲೆ ಓನರ್ ಸಹೋದರ ಬಂದು ಮಾತನಾಡಿ, ಬೇಸರ ಮಾಡಿಕೊಳ್ಳಬೇಡಿ ಅಂದರು. ನಾವು ಖಾಲಿ ಮಾಡ್ತೀವಿ ಅಂದಾಗ ಮಾಧ್ಯಮದ ಮುಂದೆ ಹೋದರು. ಪೊಲೀಸ್ ಸ್ಟೇಷನ್ ಗೆ ಕಂಪ್ಲೇಂಟ್ ಕೊಟ್ಟು, ಬಾಡಿಗೆ ಕಟ್ಟಿಲ್ಲ ಅಂತ ಡ್ಯಾಮೇಜ್ ಮಾಡಿದರು. ಅವತ್ತಿಂದ ನನಗೂ ಹಠ ಬಂತು'' - ನಟ ಯಶ್

    ನನಗೆ ಆ ಸ್ಥಿತಿ ಬಂದಿಲ್ಲ

    ನನಗೆ ಆ ಸ್ಥಿತಿ ಬಂದಿಲ್ಲ

    ''ಒಂದೇ ಒಂದು ತಿಂಗಳು ಕೂಡ ಬಾಡಿಗೆ ಮಿಸ್ ಮಾಡಿಲ್ಲ. ಮನೆ ಖಾಲಿ ಮಾಡುವ ಟೈಮ್ ನಲ್ಲಿ ನಾಲ್ಕು ಲಕ್ಷ ಅಡ್ವಾನ್ಸ್ ನಾವು ಕೊಟ್ಟಿದ್ರಲ್ಲಿ, ಬಾಡಿಗೆ ಹಿಡಿದುಕೊಳ್ಳುತ್ತೇವೆ ಎಂಬ ಮಾತು ಅವರಿಂದಲೇ ಬಂದಿದ್ದು. ಜನ ನನಗೆ ನಲವತ್ತು ಸಾವಿರ ಕಟ್ಟೋಕೆ ಆಗದಷ್ಟು ಸ್ಥಿತಿಯಲ್ಲಿ ಇಟ್ಟಿಲ್ಲ. ದೇವರು ನನಗೆ ಆ ಸ್ಥಿತಿ ಕೊಟ್ಟಿಲ್ಲ. ಕೊಡುವುದೂ ಇಲ್ಲ ಅಂತ ನಾನು ನಂಬಿದ್ದೇನೆ'' - ನಟ ಯಶ್

    ಅವರ ಮಾತು ಸುಳ್ಳು ಅಂತ ಪ್ರೂವ್ ಆಗಿದೆ

    ಅವರ ಮಾತು ಸುಳ್ಳು ಅಂತ ಪ್ರೂವ್ ಆಗಿದೆ

    ''ಇಷ್ಟೆಲ್ಲ ಆದ್ಮೇಲೆ, ಯಾರ್ಯಾರು ಇದಕ್ಕೆಲ್ಲ ಕುಮ್ಮಕ್ಕು ಕೊಟ್ಟಿದ್ದಾರೆ. ಅವರ ಉದ್ದೇಶ ಏನು ಅಂತೆಲ್ಲ ನನಗೆ ಗೊತ್ತಾಯಿತು. 23 ಲಕ್ಷ ರೂಪಾಯಿ ಬಾಡಿಗೆ ಕೊಟ್ಟಿಲ್ಲ ಅಂತ ಅವರು ಮೊದಲು ಕಂಪ್ಲೇಂಟ್ ಕೊಟ್ಟಿದ್ದಾರೆ. ಇವತ್ತು ಕೋರ್ಟ್ ನಲ್ಲಿ ತೀರ್ಪು ಬಂದಿದೆ. ಒಂಬತ್ತು ಲಕ್ಷ 60 ಸಾವಿರ ರೂಪಾಯಿ ಮಾತ್ರ ಬಾಡಿಗೆ ಕಟ್ಟಬೇಕು ಅಂತ ಕೋರ್ಟ್ ಹೇಳಿದೆ. ಯಾಕಂದ್ರೆ, ಉಳಿದ ಮೊತ್ತಕ್ಕೆ ಬ್ಯಾಂಕ್ ನಲ್ಲಿ ವಹಿವಾಟು ಮಾಡಿರುವ ದಾಖಲೆ ನಮ್ಮ ಬಳಿ ಇದೆ. ಅವರು ಹೇಳಿರುವುದು ಸುಳ್ಳು ಅಂತ ಪ್ರೂವ್ ಆಗಿದೆ. 9 ಲಕ್ಷದಲ್ಲಿ 4 ಲಕ್ಷ ಓನರ್ ನಮಗೆ ಅಡ್ವಾನ್ಸ್ ಹಿಂದಿರುಗಿಸಬೇಕು, ಉಳಿದ ಐದು ಲಕ್ಷ ರೂಪಾಯಿಯನ್ನೂ ಅವರು ಕ್ಯಾಶ್ ಮೂಲಕ ಪಡೆದಿದ್ದಾರೆ. ಅದಕ್ಕೆ ದಾಖಲೆ ಇಲ್ಲ. ಹೀಗಾಗಿ ಅದನ್ನ ನಾವು ಕಟ್ಟಬೇಕು ಅಂತ ಕೋರ್ಟ್ ಹೇಳಿದೆ'' - ನಟ ಯಶ್

    ತಪ್ಪು ನಡೆಯುತ್ತಿದ್ದರೂ, ಸಹಿಸಿಕೊಂಡು ಇರಬೇಕಾ?

    ತಪ್ಪು ನಡೆಯುತ್ತಿದ್ದರೂ, ಸಹಿಸಿಕೊಂಡು ಇರಬೇಕಾ?

    ''ಬಾಡಿಗೆ ಕಟ್ಟದೆ, ನಮ್ಮನ್ನ ವರ್ಷಾನುಗಟ್ಟಲೆ ಮನೆಯಲ್ಲಿ ಇರಲು ಬಿಡ್ತಾರಾ.? ಆ ದಡ್ಡತನ ನನಗೆ ಇದ್ಯಾ.? ದಯವಿಟ್ಟು ನನ್ನನ್ನ ನಂಬಿ. ನಾನು ಯಾರಿಗೂ ಮೋಸ ಮಾಡಿಲ್ಲ. ನಾನು ಹೆದರಿಕೊಳ್ಳಬೇಕಾ.? ನಾನು ಕೊಟ್ಟಿರುವ ದುಡ್ಡನ್ನ ಕೊಟ್ಟಿಲ್ಲ ಅಂತ ಅವರು ಸುಳ್ಳು ಹೇಳಿದಾಗ, ನಾನು ಕಲಾವಿದ ಆದ ಕಾರಣಕ್ಕೆ ಸುಮ್ಮನೆ ಕೂರಬೇಕಾ.? ನಾನು ಒಳ್ಳೆಯವನು ಅಂತ ಅನಿಸಿಕೊಳ್ಳುವುದಕ್ಕೋಸ್ಕರ, ತಪ್ಪು ನಡೆಯುತ್ತಿದ್ದರೂ ಸಹಿಸಿಕೊಂಡು ಇರಬೇಕಾ.?'' - ನಟ ಯಶ್

    ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ

    ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ

    ''ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಮನೆ ಮಾಲೀಕರು ಅಮಾಯಕರೂ ಅಲ್ಲ. ಏಳೆಂಟು ಮನೆ ಇಟ್ಟುಕೊಂಡು ಬಹಳ ಚೆನ್ನಾಗಿದ್ದಾರೆ. ಒಂದು 'ಅಹಂ' ವಿಷಯಕ್ಕೆ ನಡೆಯುತ್ತಿರುವ ಗಲಾಟೆ ಇದು. ಇದರಲ್ಲಿ ನನ್ನ ತಪ್ಪು ಇದ್ದರೆ, ಕರೆಯಿಸಿ ನಾನು ಮಾತನಾಡಿ ಕ್ಷಮೆ ಕೇಳಬಹುದು. ಆದ್ರೆ, ನನಗೆ ಅವಮಾನ ಮಾಡಿ ಅವರು ಆರಾಮಾಗಿ ಇರಬಹುದು ಎಂಬ ಮನಃಸ್ಥಿತಿ ಇದ್ದರೆ ನಾನು ಬಿಡಬೇಕಾ.?'' - ನಟ ಯಶ್

    ಪ್ರಮಾಣ ಮಾಡಿ ಹೇಳಲಿ..

    ಪ್ರಮಾಣ ಮಾಡಿ ಹೇಳಲಿ..

    ''ನಾನು ಬಾಡಿಗೆ ಕೊಟ್ಟಿಲ್ಲ ಅಂತ ಅವರು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ. ಇಂತಹ ಚಿಲ್ಲರೆ ಕೆಲಸ ಮಾಡುವ ವ್ಯಕ್ತಿ ನಾನಲ್ಲ. ಅವರಿಗೆ ಒಬ್ಬ ಮಗಳಿದ್ದಾಳೆ. ಆಕೆ ಮೇಲೆ ಪ್ರಮಾಣ ಮಾಡಿ ಹೇಳಲಿ, ನಾನು ಬಾಡಿಗೆ ಕೊಟ್ಟಿಲ್ಲ ಅಂತ. ಹಾಗ್ಮಾಡಿದ್ರೆ, ಅವರು ಹೇಳಿದ್ದನ್ನ ನಾನು ಕೇಳುತ್ತೇನೆ. ಈ ವಿಷಯ ಕೋರ್ಟ್ ನಲ್ಲೇ ತೀರ್ಮಾನ ಆಗಬೇಕು. ಅವರು ಸತ್ಯ ಒಪ್ಪಿಕೊಳ್ಳಬೇಕು'' - ನಟ ಯಶ್

    ಅದೃಷ್ಟದ ಮನೆ ಅಂತೇನಿಲ್ಲ

    ಅದೃಷ್ಟದ ಮನೆ ಅಂತೇನಿಲ್ಲ

    ''ಅದು ಯಶ್ ಗೆ ಅದೃಷ್ಟದ ಮನೆ. ಹೀಗಾಗಿ ಅವರು ಅದನ್ನ ಬಿಡುತ್ತಿಲ್ಲ ಅಂತ ಯಾರೋ ನಂಬಿಕೊಂಡಿದ್ದಾರೆ. ಅದು ಸತ್ಯ ಅಲ್ಲ. ಮನೆ ಇಲ್ಲದೆ ಬದುಕಿ ಬಂದವನು ನಾನು. ಆ ಮನೆಯಿಂದ ನನಗೇನೂ ಅದೃಷ್ಟ ಇಲ್ಲ. ನಾನು ಒಳ್ಳೆ ಸಿನಿಮಾ ಮಾಡಿದ್ರೆ ನೋಡ್ತೀರಾ, ಇಲ್ಲ ಅಂದ್ರೆ ನಾನು ಯಾವ ಮನೆಯಲ್ಲಿ ಇದ್ದರೇನು.?'' - ನಟ ಯಶ್

    ಸ್ವಾಭಿಮಾನ ಯಾವತ್ತೂ ಬಿಡಲ್ಲ

    ಸ್ವಾಭಿಮಾನ ಯಾವತ್ತೂ ಬಿಡಲ್ಲ

    ''ನಾನು ಹೇಗೆ ಕಲಾವಿದನೋ, ಹಾಗೆ ಮಗ ಕೂಡ. ನನ್ನ ತಂದೆ-ತಾಯಿಗೆ ಅವಮಾನ ಆದಾಗ, ನನ್ನ ಜನಪ್ರಿಯತೆಗೆ ಧಕ್ಕೆ ಆಗುತ್ತೆ ಅಂತ ಹೇಡಿತನದಿಂದ ಕೂರುವುದಿಲ್ಲ, ಡವ್ ಕೂಡ ಮಾಡಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದರೆ, ಜನಪ್ರಿಯತೆ ಬಿಡುವುದಕ್ಕೆ ನಾನು ರೆಡಿ. ಸ್ವಾಭಿಮಾನ ಬಿಟ್ಟು ಕೊಡುವುದಕ್ಕೆ ನಾನು ಯಾವತ್ತೂ ರೆಡಿ ಇಲ್ಲ'' - ನಟ ಯಶ್

    English summary
    Rocking Star Yash has taken his Facebook Account to clarify about his house rent controversy. Read this article to know what Yash said in his Facebook Live.
    Wednesday, April 18, 2018, 19:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X