Don't Miss!
- News ಕಾಂಗ್ರೆಸ್ ಜನರಿಗೆ ಹೋಲ್ಸೆಲ್ ಮೋಸ ಮಾಡುತ್ತಿದೆ: ಮಾಜಿ ಸಿಎಂ
- Sports ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್ಸ್ನಲ್ಲಿ ವಿರಾಟ್ ಕೊಹ್ಲಿಯ 50ನೇ ಏಕದಿನ ಶತಕ!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಂಗು ರಂಗಿನ ಬೆಳಕಿನಲ್ಲಿ ಹೆಜ್ಜೆ ಹಾಕಿ ಮನಸೂರೆಗೊಂಡ ಪುಟಾಣಿ ಮಾಡೆಲ್ಸ್
ಯಶ್ ಇಂಟರ್ ನ್ಯಾಷನಲ್ ಫ್ಯಾಷನ್ ವೀಕ್ನಲ್ಲಿ ಮಿಸ್ಟರ್, ಮಿಸ್, ಮಿಸೆಸ್ ಮಾಡೆಲ್ಗಳ ನಡುವೆ ಪುಟಾಣಿ ಮಾಡೆಲ್ಸ್ ಮುದ್ದಾದ ರ್ಯಾಂಪ್ ವಾಕ್ ನಿಂದ ನೆರೆದಿದ್ದವರ ಕಣ್ಮನ ತಣಿಸಿದರು.
ನಗರದ ದಿ ಸಂಭ್ರಮ್ ರೂಕ್ ರೆಸಾರ್ಟ್ನಲ್ಲಿ ನಡೆದ ಮಿಸ್ಟರ್, ಮಿಸ್, ಮಿಸೆಸ್, ಲಿಟಲ್ ಪ್ರಿನ್ಸ್, ಪ್ರಿನ್ಸೆಸ್ ಇಂಟರ್ ನ್ಯಾಷನಲ್-2021 ಫೈನಲ್ ಆವೃತ್ತಿಯಲ್ಲಿ ಕಂಡುಬಂದ ದೃಶ್ಯವಿದು.
ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಸಂಗೀತದ ಅಲೆಗೆ ತಕ್ಕಂತೆ ಎಲ್ಲಾ ಮಾಡೆಲ್ ಗಳು ಹೆಜ್ಜೆ ಹಾಕುವ ದೃಶ್ಯ ಜನರನ್ನು ಮಂತ್ರಮುಗ್ಧಗೊಳಿಸಿತು. ವೈವಿಧ್ಯಮಯ ವಸ್ತ್ರಗಳಲ್ಲಿ ಮುದ್ದು ಮುದ್ದಾಗಿ ಹೆಜ್ಜೆ ಇಡುತ್ತಾ ವೇದಿಗೆ ಬಂದ ಮಕ್ಕಳು ಸಂಗೀತದ ನಾದಕ್ಕೆ ತಕ್ಕಂತೆ ಬಳುಕುವ ಹೆಜ್ಜೆ ಹಾಕಿದರು.
ಮದುವೆಯಾದ ಮೇಲೆ ಫ್ಯಾಷನ್ ಲೋಕ ನಮಗಲ್ಲ ಎಂದು ತಿಳಿದ ಎಷ್ಟೋ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ರೂಪದಲ್ಲಿ ವೇದಿಕೆ ಮೇಲೆ ಬಂದ ಮಹಿಳೆಯರು ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು. ದೆಹಲಿ, ಅಸ್ಸಾಂ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ.. ಹೀಗೆ ವಿವಿಧ ರಾಜ್ಯಗಳ ಸುಮಾರು 75ಕ್ಕೂ ಹೆಚ್ಚು ಸ್ಪರ್ಧಿಗಳು ರ್ಯಾಂಪ್ ವಾಕ್ ಮಾಡಿದರು.
ಕೊರೋನಾದಿಂದ ಮಂಕಾಗಿದಿದ್ದ ಫ್ಯಾಷನ್ ಲೋಕ ಮತ್ತೆ ಝಗಮಗಿಸಲು ಶುರುವಾಗಿದೆ. ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಆತಂಕದ ಮಧ್ಯೆಯೇ ಎಲ್ಲ ಸುರಕ್ಷತೆಗಳನ್ನು ಕೈಕೊಂಡು ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇಲ್ಲಿ ಬರುತ್ತಿರುವ ಎಲ್ಲಾ ಮಕ್ಕಳ ಪೋಷಕರು ಲಸಿಕೆ ಪಡೆದಿರುವ ಬಗ್ಗೆ ಖಾತ್ರಿ ಪಡಿಸಿಕೊಂಡಿದ್ದೇವೆ ಎನ್ನುತ್ತಾರೆ ಕಾರ್ಯಕ್ರಮ ಆಯೋಜಕರಾದ ಯಶ್.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ಹಾಗೂ ರೂಪದರ್ಶಿ ಶುಭ ರಕ್ಷಾ, 'ಎಲ್ಲಾ ವರ್ಗದವರೂ ಭಾಗವಹಿಸುವಂತಹ ಅವಕಾಶ ಈ ಶೋ ನಲ್ಲಿ ನೀಡಲಾಗಿದೆ. ಮದುವೆಯಾದವರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಈ ವೇದಿಕೆ ಸಹಾಯವಾಗಲಿದೆ. ಸಾಕಷ್ಟು ಜನರ ಬದುಕಿಗೆ ಭರವಸೆಯನ್ನು ಮೂಡಿಸಲಿದೆ' ಎಂದು ಹೇಳಿದರು.
ವಿಜೇತರಾದವರಿಗೆ ಆಯೋಜಕ ಯಶ್ ಹಾಗೂ ಅತಿಥಿಗಳು ಕ್ರೌನ್ ತೊಡಿಸಿದರು. ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಸಂತೋಷ್ ರೆಡ್ಡಿ, ಸೀಮಾ ಇದ್ದರು.
ವಿಜೇತರು
ಮಿಸ್ಟರ್ ಎಂಡ್ ಮಿಸ್ ಇಂಟರ್ನ್ಯಾಷನಲ್ ಕಿರೀಟ ಜೇಮ್ಸ್ ಪೌಲ್ ಹಾಗೂ ಎಸ್. ರೇಖಾ ಅವರಿಗೆ ಒಲಿದರೆ, ಮಿಸೆಸ್ ಇಂಟರ್ನ್ಯಾಷನಲ್ ಕಿರೀಟ ನೇಹಾ ಪಾಲಾಗಿದೆ. ಇನ್ನು ಲಿಟಲ್ ಪ್ರಿನ್ಸ್ ಎಂಡ್ ಪ್ರಿನ್ಸೆಸ್ ಇಂಟರ್ನ್ಯಾಷನಲ್ ವಿಭಾಗದಲ್ಲಿ 3 ರಿಂದ 6 ವರ್ಷದ ಮಕ್ಕಳ ವರ್ಗದಲ್ಲಿ ಜತಿನ್ ತೇಜ್ ಹಾಗೂ ಪ್ರಾಧ್ಯಾನ್ಯಗೆ ಕಿರೀಟ ಲಭಿಸಿದರೆ, 7 ರಿಂದ 12 ವರ್ಷದ ವರ್ಗದಲ್ಲಿ ಮೋಕ್ಷ್ ಹಾಗೂ ಮೋನಿಷಾ ಮುಡಿಗೇರಿದೆ ಕಿರೀಟ. ಮಿಸ್ ಟೀನ್ ಇಂಟರ್ನ್ಯಾಷನಲ್ ಕಿರೀಟ ಧಾತ್ರಿ ಅವರಿಗೆ ಒಲಿದಿದೆ.