ಯಶ್‌ಗೆ ಎಲ್ಲಾ ಥರದ ನಟನೆ ಬರಲ್ಲ, ಗಡ್ಡವಿಲ್ಲದೇ ಚೆನ್ನಾಗಿ ಕಾಣಲ್ಲ ಎಂದವರಿಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್!

ರಾಕಿಂಗ್ ಸ್ಟಾರ್ ಯಶ್. ಸದ್ಯ ನ್ಯಾಷನಲ್ ಸ್ಟಾರ್ ಆಗಿ ಇಡೀ ದೇಶದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡಿರುವ ನಟ. ಕನ್ನಡದ ಕಾಮಿಡಿ ಧಾರಾವಾಹಿಗಳಲ್ಲಿ ಸೈಡ್ ರೋಲ್ ಮಾಡುತ್ತಾ ನಟನೆ ಆರಂಭಿಸಿದ ಯಶ್ ಬಳಿಕ ಬೆಳ್ಳಿತೆರೆಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು ತನ್ನ ನಟನೆಯಿಂದ ಕನ್ನಡಿಗರ ಮನಗೆದ್ದು, ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು ರಾಕಿಂಗ್ ಸ್ಟಾರ್ ಎನಿಸಿಕೊಂಡರು.

ಹೀಗೆ ಕಿರುತೆರೆಯ ಸಣ್ಣಪುಟ್ಟ ಪಾತ್ರಗಳಿಗಾಗಿ ಬಣ್ಣ ಹಚ್ಚುತ್ತಿದ್ದ ಯಶ್ ನಟನೆಯ ಮುಂದಿನ ಚಿತ್ರಕ್ಕೀಗ ಇಡೀ ದೇಶವೇ ಕಾಯುತ್ತಿದ್ದು, ಯಶ್ ನಡೆದು ಬಂದ ಹಾದಿ ಹಲವರಿಗೆ ಮಾದರಿಯಾಗಿದೆ. ಹೀಗೆ ಕಷ್ಟದ ಹಾದಿಯನ್ನು ತುಳಿದು ಬೆಳೆದಿರುವ ಯಶ್ ಅವರು ಹೇಗೆಲ್ಲಾ ಯಶಸ್ಸು ಸಾಧಿಸಿದರು ಎಂಬುದು ಕನ್ನಡ ಸಿನಿ ರಸಿಕರಿಗೆ ಹಾಗೂ ಕರ್ನಾಟಕದ ಜನತೆಗೆ ಚೆನ್ನಾಗಿ ತಿಳಿದಿದ್ದು, ಬೇರೆ ರಾಜ್ಯದ ಬಹುತೇಕ ಜನತೆಗೆ ಈ ಬಗ್ಗೆ ಅಷ್ಟೇನೂ ಮಾಹಿತಿ ಇಲ್ಲ.

Yash is an overnight star and He does not know acting; Netizens troll KGF star

ಹೌದು, ಯಶ್ ಕೆಜಿಎಫ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ನಟ ಎಂದು ಹಲವು ಹಿಂದಿ ಸಿನಿ ರಸಿಕರು ಟ್ರೋಲ್ ಮಾಡಿದ್ದ ಉದಾಹರಣೆಗಳಿವೆ. ಈಗಲೂ ಅಂತಹದ್ದೇ ಟ್ರೋಲ್ ದೊಡ್ಡ ಮಟ್ಟದಲ್ಲಿ ಹರಿದಾಡಿದೆ. ಯಶ್ ಕೆಜಿಎಫ್ ಲುಕ್‌ನಲ್ಲಿ ಮಾತ್ರ ಚೆನ್ನಾಗಿ ಕಾಣುವುದು, ಗಡ್ಡ ತೆಗೆದರೆ ಯಶ್ ಅಷ್ಟೇನೂ ಚೆನ್ನಾಗಿ ಕಾಣುವುದಿಲ್ಲ, ಹೀಗಾಗಿಯೇ ಯಶ್ ಕೆಜಿಎಫ್ ಚಿತ್ರೀಕರಣ ಮುಗಿದ ನಂತರವೂ ಅದೇ ಲುಕ್ ಉಳಿಸಿಕೊಂಡಿದ್ದಾರೆ ಎಂದೆಲ್ಲಾ ಟ್ರೋಲ್ ಮಾಡಿದ್ದಾರೆ.

ಅಲ್ಲದೇ ಕೆಜಿಎಫ್ ರೀತಿಯ ಮಾಸ್ ಪಾತ್ರಗಳನ್ನು ಹೊರತುಪಡಿಸಿ ಉಳಿದ ಪಾತ್ರಗಳನ್ನು ಮಾಡುವುದಕ್ಕೆ ಯಶ್ ಅವರಿಗೆ ಅಷ್ಟೇನೂ ಗ್ರಿಪ್ ಇಲ್ಲ ಎಂದೂ ಸಹ ಹಿಂದಿಯ ಕೆಲ ಸಿನಿಕರು ಟೀಕಿಸಿದ್ದಾರೆ. ಹೀಗೆ ಹಲವರು ಟ್ವಿಟರ್ ವೇದಿಕೆಯಲ್ಲಿ ಈ ರೀತಿಯ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆಯೇ ವಿಷಯ ಚರ್ಚೆಗೆ ಒಳಪಟ್ಟಿದೆ. ಇದರ ಕುರಿತು ಹಿಂದಿಯ ಒಂದಷ್ಟು ಸಿನಿ ರಸಿಕರೇ ವಿರೋಧ ವ್ಯಕ್ತಪಡಿಸಿದ್ದು, ಯಶ್ ಬಗ್ಗೆ ಗೊತ್ತಿಲ್ಲದೇ ಮಾತನಾಡಬೇಡಿ, ಯಶ್ ಕೆಜಿಎಫ್ ಬರುವುದಕ್ಕೂ ಮುನ್ನ ಸ್ಟಾರ್ ಆದ ನಟ ಎಂದು ಟಾಂಗ್ ನೀಡಿದ್ದಾರೆ.

ಹೌದು, ಈ ಕುರಿತು ಹಿಂದಿಯ ಸಿನಿ ರಸಿಕನೋರ್ವ ಮಾಡಿರುವ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವು ಅನಕ್ಷರಸ್ಥರು ಯಶ್ ಗಡ್ಡವಿಲ್ಲದೇ ಚೆನ್ನಾಗಿ ಕಾಣಲ್ಲ ಎನ್ನುತ್ತಿದ್ದಾರೆ ಹಾಗೂ ನಟನೆ ಬರುವುದಿಲ್ಲ ಎಂದು ಅನುಮಾನ ಪಡುತ್ತಿದ್ದಾರೆ. ಅಂಥವರು ಯಶ್ ನಟಿಸಿದ್ದ ಮಿಸ್ಟರ್ ಅಡ್ ಮಿಸ್ಸಸ್ ರಾಮಾಚಾರಿ ವೀಕ್ಷಿಸಿ ಅವರ ನಟನೆ ಎಂತಹದ್ದು ಎಂಬುದು ತಿಳಿಯುತ್ತೆ ಎಂದು ಬರೆದುಕೊಂಡಿದ್ದಾರೆ.

Yash is an overnight star and He does not know acting; Netizens troll KGF star

ಈ ಟ್ವೀಟ್‌ಗೆ ಹಲವಾರು ರಿಪ್ಲೈಗಳು ಬಂದಿದ್ದು ಯಶ್ ಹಳೇ ಚಿತ್ರಗಳ ಬಗ್ಗೆ ಹಲವು ಹಿಂದಿ ನೆಟ್ಟಿಗರು ಉಲ್ಲೇಖಿಸಿದ್ದಾರೆ. ಅದರಲ್ಲೂ ಯಶ್ ನಟನೆಯ ಗೂಗ್ಲಿ ಚಿತ್ರದ ಬಗ್ಗೆ ಅನೇಕ ಕಾಮೆಂಟ್‌ಗಳು ಬಂದಿದ್ದು, ಯಶ್ ಕೆಜಿಎಫ್ ಚಿತ್ರ ಬರುವುದಕ್ಕಿಂತಲೂ ಮುಂಚಿನಿಂದಲೂ ಸ್ಟಾರ್ ಆಗಿದ್ರು, ನಿಮಗೆ ಅದು ಗೊತ್ತಿಲ್ಲ ಎಂದರೆ ನಿಮಗೆ ಸರಿಯಾದ ಸಿನಿಮಾ ಜ್ಞಾನ ಇಲ್ಲ ಎಂದರ್ಥ, ಒಬ್ಬರ ಬಗ್ಗೆ ಮಾತನಾಡುವ ಮುನ್ನ ಸರಿಯಾಗಿ ತಿಳಿದುಕೊಂಡು ಮಾತನಾಡಿ ಎಂದು ಯಶ್ ಪರ ಬ್ಯಾಟ್ ಬೀಸಿದ್ದಾರೆ.

More from Filmibeat

English summary
Yash is an overnight star and He does not know acting; Netizens troll KGF star. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X