ಯಶ್ ಸುಮ್ಮನೆ ಪ್ರಚಾರ ಮಾಡುತ್ತಿಲ್ಲ: ಷರತ್ತು ಹಾಕಿ ಬಂದಿದ್ದಾರೆ

By Pavithra

Recommended Video

ಇದು ಯಶ್ ಚುನಾವಣಾ ಪ್ರಚಾರದ ರಹಸ್ಯ | Filmibeat Kannada

ರಾಜಕೀಯಕ್ಕೆ ನಾನು ಬರುವುದಿಲ್ಲ. ನನ್ನ ಕ್ಷೇತ್ರ ಸಿನಿಮಾ. ಆದರೆ ಜನಸಾಮಾನ್ಯರಿಗೆ ನಾನು ಸಹಾಯ ಮಾಡುತ್ತೇನೆ. ನಮ್ಮ ಕೈಲಾಗುವ ಸಹಾಯವನ್ನ ಮಾಡಬೇಕು ಎನ್ನುವ ಮಾತುಗಳನ್ನ ಹೇಳಿದ್ದ ಚಂದನವನದ ರಾಜಹುಲಿ ರಾಕಿಂಗ್ ಸ್ಟಾರ್ ಯಶ್ ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.

ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದೆ. ಯಶ್ ಅವರಿಗೆ ಆಪ್ತರಾಗಿರುವ ವ್ಯಕ್ತಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಲು ಮುಂದಾಗಿದ್ದಾರೆ. ಮೈಸೂರಿನ ಕೆ ಆರ್ ನಗರದಲ್ಲಿ ಸಾ ರಾ ಮಹೇಶ್ ಅವರ ಪರವಾಗಿ ರೋಡ್ ಶೋ ಮಾಡುವ ಮೂಲಕ ಪ್ರಚಾರ ಕೆಲಸ ಆರಂಭಿಸಿದ್ದಾರೆ.

ಯಶ್ ಅವರಿಗೆ ಪರಿಚಯವಿದ್ದರೇ ಸಾಕ, ಬಂದು ಪ್ರಚಾರ ಮಾಡುತ್ತಾರಾ? ಅಥವಾ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ತಿಳಿದರೆ ಅವರೇ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಮುಂದಾಗುತ್ತಾರಾ? ಇಂತಹ ಪ್ರಶ್ನೆಗಳು ಜನರ ತಲೆಯಲ್ಲಿ ಓಡಾಡುತ್ತಿರುತ್ತವೆ. ಆದರೆ ಅದ್ಯಾವುದು ಅಲ್ಲ. ಯಶ್ ಪ್ರಚಾರದಲ್ಲಿ ಭಾಗಿ ಆಗಬೇಕು ಎಂದರೆ ಒಂದಿಷ್ಟು ಷರತ್ತುಗಳಿವೆ. ಅದಕ್ಕೆಲ್ಲದಕ್ಕೂ ಒಪ್ಪಿದರೆ ಮಾತ್ರ ಯಶ್ ಪ್ರಚಾರದಲ್ಲಿ ಭಾಗಿ ಆಗುತ್ತಾರೆ. ಅದರ ಜೊತೆಯಲ್ಲಿ ಪ್ರಚಾರ ಮಾಡಿದರೆ ಯಶ್ ಗೂ ಉಪಯೋಗವಿದೆ. ಏನದು ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

ಚುನಾವಣಾ ಪ್ರಚಾರದಲ್ಲಿ ರಾಕಿಂಗ್ ಸ್ಟಾರ್

ಚುನಾವಣಾ ಪ್ರಚಾರದಲ್ಲಿ ರಾಕಿಂಗ್ ಸ್ಟಾರ್

ರಾಕಿಂಗ್ ಸ್ಟಾರ್ ಯಶ್ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ. ಇಂದಿನಿಂದ ಸುಮಾರು ಒಂದು ವಾರಗಳ ಕಾಲ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ ಇಂದು ಕೆ ಆರ್ ನಗರದಲ್ಲಿ ಸಾರಾ ಮಹೇಶ್ ಅವರಿಗೆ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಪ್ರಚಾರ ಮಾಡಲು ಶರತ್ತು ಹಾಕಿದ ರಾಕಿಂಗ್ ಸ್ಟಾರ್

ಪ್ರಚಾರ ಮಾಡಲು ಶರತ್ತು ಹಾಕಿದ ರಾಕಿಂಗ್ ಸ್ಟಾರ್

ಯಶ್ ಸಾಮಾನ್ಯವಾಗಿ ಯಾವುದೇ ಕೆಲಸ ಮಾಡುವಾಗ ಅದರ ಹಿಂದೆ ಒಂದು ಉದ್ದೇಶವಿಟ್ಟುಕೊಂಡಿರುತ್ತಾರೆ. ಅದರಂತೆ ರಾಜಕೀಯ ಪ್ರಚಾರ ಮಾಡುವ ಮುನ್ನ ಒಂದಿಷ್ಟು ಷರತ್ತುಗಳನ್ನ ಹಾಕಿದ್ದಾರೆ.

ಜನರಿಗೆ ಒಳಿತಾಗಬೇಕು

ಜನರಿಗೆ ಒಳಿತಾಗಬೇಕು

ಸದ್ಯ ಯಶ್ ಪ್ರಚಾರ ಮಾಡಲು ಒಪ್ಪಿಕೊಂಡಿರುವ ವ್ಯಕ್ತಿಗಳು ಗೆದ್ದ ನಂತರ ಜನರಿಗೆ ಉಪಯೋಗ ಆಗುವ ಕೆಲಸಗಳನ್ನ ಮಾಡಬೇಕು. ಅಂತವರ ಪರವಾಗಿ ಮಾತ್ರ ಯಶ್ ಪ್ರಚಾರ.

ಒಂದು ವಾರ ಅಭ್ಯರ್ಥಿಗಳ ಪರ ಪ್ರಚಾರ

ಒಂದು ವಾರ ಅಭ್ಯರ್ಥಿಗಳ ಪರ ಪ್ರಚಾರ

ರಾಕಿಂಗ್ ಸ್ಟಾರ್ ಇದೇ ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಆಯ್ಕೆ ಮಾಡಿಕೊಂಡಿಲ್ಲ. ಕೆ ಆರ್ ನಗರದ ನಂತರ ಮೈಸೂರಿನಲ್ಲಿ ರಾಮ್ ದಾಸ್ ಪರವಾಗಿ ಪ್ರಚಾರ ಮಾಡುತ್ತಾರೆ. ನಾಳೆ ಜೆ ಡಿ ಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡುತ್ತಾರೆ.

ರಾಜಕೀಯ ಪ್ರಚಾರದಿಂದ ಲಾಭ

ರಾಜಕೀಯ ಪ್ರಚಾರದಿಂದ ಲಾಭ

ಯಶ್ ರಾಜಕೀಯ ಪ್ರಚಾರಕ್ಕಾಗಿ ಹಳ್ಳಿ ಹಳ್ಳಿಗಳು ಸುತ್ತುವುದರಿಂದ ಲಾಭವೂ ಆಗುತ್ತದೆ. ಯಶ್ ಆರಂಭ ಮಾಡಿರುವ ಯಶೋಮಾರ್ಗ ಸಂಸ್ಥೆಯ ಮೂಲಕ ಮತ್ತಷ್ಟು ಕೆಲಸಗಳನ್ನ ಮಾಡುವ ಯೋಜನೆಯಲ್ಲಿದ್ದಾರೆ. ಆದ್ದರಿಂದ ಯಾವ ಹಳ್ಳಿಗಳಲ್ಲಿ ಏನು ಸಮಸ್ಯೆ ಇದೆ ಎನ್ನುವುದನ್ನು ಈ ಮೂಲಕ ತಿಳಿದುಕೊಳ್ಳಲಿದ್ದಾರೆ.

More from Filmibeat

English summary
Kannada actor Rocking Star Yash has been election campaigning for a week. Yash has been campaigning for candidates who have agreed to their terms and those who have worked well for the people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X