ಹಾಲಿವುಡ್‌ನ ಕಬ್ಜಾ ಮಾಡುವ ಶಪಥ ಮಾಡಿದ ರಾಕಿ, ಬಹುದೊಡ್ಡ ಸಂಸ್ಥೆಗೆ ಗಾಳ ಹಾಕಿದ ಯಶ್..!

'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್.ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ. ಇದರ ನಡುವೆ ಯಶ್ ಹಾಲಿವುಡ್ ನಿರ್ಮಾಣ ಸಂಸ್ಥೆಯ ಜೊತೆ ಕೈ ಜೋಡಿಸುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಉತ್ತರದಿಂದ ದಕ್ಷಿಣದವರೆಗೆ ಕೇಳಿ ಬರುತ್ತಿದೆ.

ಹೌದು, ಟಾಕ್ಸಿಕ್ ಚಿತ್ರದ ಮೂಲಕ ಈ ಬಾರಿ ಹಾಲಿವುಡ್ಡನ್ನೇ ಅಲ್ಲಾಡಿಸುವ ಪ್ರಯತ್ನವನ್ನು ಮಾಡುತ್ತಿರುವ ಯಶ್ ಸದ್ಯ 1915ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು ಜಗತ್ಪಸಿದ್ಧಿ ಪಡೆದ 20th ಸೆಂಚುರಿ ಫಾಕ್ಸ್ ಸಂಸ್ಥೆಯ ಜೊತೆ ಕೈ ಜೋಡಿಸಲು ಹವಣಿಸುತ್ತಿದ್ದಾರೆ. ವಿದೇಶಗಳಲ್ಲಿ ತಮ್ಮ ಟಾಕ್ಸಿಕ್ ಚಿತ್ರವನ್ನು 20th ಸೆಂಚುರಿ ಫಾಕ್ಸ್ ಸಂಸ್ಥೆಯ ಮೂಲಕ ಬಿಡುಗಡೆ ಮಾಡಬೇಕೆನ್ನುವ ದಿಸೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

Yash is in discussions with 20th Century Fox for the international distribution of Toxic

ಇನ್ನೂ ಟಾಕ್ಸಿಕ್ ಚಿತ್ರದ ಕಥೆ-ನಿರೂಪಣೆ ಮತ್ತು ದೃಶ್ಯಾವಳಿ ಅಂತರಾಷ್ಟ್ರೀಯ ಮಟ್ಟದಲ್ಲಿದೆ ಎನ್ನುವುದು ಯಶ್ ಅಭಿಮತ. ಹೀಗಾಗಿಯೇ ತಮ್ಮ ಚಿತ್ರ ವಿಶ್ವದೆಲ್ಲೆಡೆ ತಲುಪಬೇಕೆಂದರೆ ಅದಕ್ಕೆ ಸೂಕ್ತವಾದ ವಿತರಕರು ಇರಬೇಕೆಂದು ಆಲೋಚನೆ ಮಾಡಿರುವ ಯಶ್ ಕೇವಲ 20th ಸೆಂಚುರಿ ಫಾಕ್ಸ್ ಸಂಸ್ಥೆಯ ಜೊತೆ ಮಾತ್ರವಲ್ಲ ಹಾಲಿವುಡ್‌ನ ಇನ್ನು ಹಲವು ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣೆ ಸಂಸ್ಥೆಗಳ ಜೊತೆ ಕೂಡ ಈ ಕುರಿತು ಮಾತನಾಡುತ್ತಿದ್ದಾರೆ.

ಆ ಪೈಕಿ 20th ಸೆಂಚುರಿ ಫಾಕ್ಸ್ ಯಶ್ ಜೊತೆ ಈ ಡೀಲ್ ಮಾಡಿಕೊಳ್ಳಲು ತುಸು ಹೆಚ್ಚು ಆಸಕ್ತಿಯನ್ನು ವಹಿಸಿದ್ದು ಎಲ್ಲವೂ ಅಂದುಕೊಂಡತೆ ಆದರೆ ಈ ವರ್ಷದ ಬೇಸಿಗೆ ರಜೆಯಲ್ಲಿ ಈ ಕುರಿತು ಅಧಿಕೃತವಾದ ಘೋಷಣೆ ಹೊರ ಬೀಳಲಿದೆ. ಟಾಕ್ಸಿಕ್ ಚಿತ್ರಕ್ಕೆ 20th ಸೆಂಚುರಿ ಫಾಕ್ಸ್ ಇಂಟರ್ ನ್ಯಾಶನಲ್ ಸ್ಪರ್ಶವನ್ನು ನೀಡುತ್ತಾ ಇಲ್ಲವಾ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಸಿಗಲಿದೆ.

ಇನ್ನುಳಿದಂತೆ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ನಯನತಾರಾ ಮತ್ತು ಹುಮಾ ಖುರೇಶಿ ಕೂಡ ಪ್ರಮುಖ ಪಾತ್ರಗಳಿಗೆ ಜೀವ ತುಂಬುತ್ತಿದ್ದಾರೆ. ಇನ್ನು ಅನಿಲ್ ಕಪೂರ್ ಕೂಡ ಟಾಕ್ಸಿಕ್ ಚಿತ್ರದಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಹಾಗೊಂದು ವೇಳೆ ಈ ಸುದ್ದಿ ನಿಜಾ ಆಗಿದ್ದೇ ಆದಲ್ಲಿ 41 ವರ್ಷದ ನಂತರ ಅನಿಲ್ ಕಪೂರ್ ಕನ್ನಡ ಚಿತ್ರರಂಗಕ್ಕೆ ಮರಳಿದಂತೆ ಆಗಲಿದೆ. ಅಕ್ಷಯ್ ಓಬೆರಾಯ್, ತಾರಾ ಸುತಾರಿಯಾ ಕೂಡ ಟಾಕ್ಸಿಕ್ ಚಿತ್ರದಲ್ಲಿದ್ದಾರೆ. ಇನ್ನು ಬ್ರಿಟಿಷ್ ನಟರಾದ ಡ್ಯಾರೆನ್ ಡಿಸಿಲ್ವಾ ಮತ್ತು ಬೆನೆಡಿಕ್ಟ್ ಗ್ಯಾರೆಟ್ 'ಟಾಕ್ಸಿಕ್' ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿಜಾ.. ಚಿತ್ರತಂಡವಾಗಲಿ ಯಶ್ ಆಗಲಿ ಟಾಕ್ಸಿಕ್ ಚಿತ್ರಕ್ಕೆ ಸಂಬಂಧಿಸಿದ ಈ ಎಲ್ಲ ಸುದ್ದಿಗಳ ಮೇಲೆ ಅಧಿಕೃತ ಮುದ್ರೆ ಇನ್ನೂ ಒತ್ತಿಲ್ಲವಾದರೂ, ಬೆಂಕಿ ಇಲ್ಲದೇ ಹೊಗೆಯಾಡಲು ಸಾಧ್ಯ ಇಲ್ಲ.

ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆಯ ಜೊತೆ ಸೇರಿ ಖುದ್ದು ಯಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಗೀತು ಮೋಹನ್ ದಾಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಚಿತ್ರ ಈ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಬೇರೆ ಭಾಷೆಗಳಿಗೆ ಕೂಡ ಡಬ್ ಆಗುವ ಸಾಧ್ಯತೆ ಇದೆ. ಒಟ್ನಲ್ಲಿ ಸದ್ಯ ಯಶ್ ತಮ್ಮ ಟಾಕ್ಸಿಕ್ ಚಿತ್ರಕ್ಕೆ ಹಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆಗಳ ಜೊತೆ ಕೈ ಜೋಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಯಶ್ ಯಶಸ್ವಿಯಾಗಿದ್ದೇ ಆದಲ್ಲಿ ಟಾಕ್ಸಿಕ್ ಚಿತ್ರದ ಮೂಲಕ ಕನ್ನಡದ ಕಂಪು ವಿಶ್ವದೆಲ್ಲೆಡೆ ಮತ್ತೊಬ್ಬ ಹರಡಲಿದೆ. ಇವರ ಈ ಪ್ರಯತ್ನ ಯಶಸ್ವಿಯಾಗಲಿ ಎನ್ನುವುದೇ ಎಲ್ಲರ ಹಾರೈಕೆ.

More from Filmibeat

Read more about: yash hollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X