»   » ದರ್ಶನ್ ಮತ್ತು ಯಶ್ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ.! ಅದೆಲ್ಲವೂ ಸುಳ್ಳು.!

ದರ್ಶನ್ ಮತ್ತು ಯಶ್ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬಿಸಬೇಡಿ.! ಅದೆಲ್ಲವೂ ಸುಳ್ಳು.!

Posted By:
Subscribe to Filmibeat Kannada

''ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಸುಮ್ಮನೆ ಗಾಳಿ ಸುದ್ದಿ ಹಬ್ಬಿಸಬೇಡಿ.. ಅದೆಲ್ಲವೂ ಸುಳ್ಳು.!'' - ಹೀಗಂತ ನಾವು ಹೇಳುತ್ತಿಲ್ಲ. ತಲೆಬುಡವಿಲ್ಲದ ಸುಳ್ಳು ಸುದ್ದಿಗಳನ್ನ ಕೇಳಿ ಕೇಳಿ ಕಿರಿಕಿರಿಗೊಂಡಿರುವ ನಿಮ್ಮೆಲ್ಲರ ಪ್ರೀತಿಯ 'ದಾಸ' ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರತಂಡ ಹೇಳಿದ ಮಾತದು.

ಅವರು ಹಾಗೆ ಹೇಳುವುದಕ್ಕೂ ಒಂದು ಕಾರಣ ಇದೆ... ಆ ಕಾರಣ ಏನು.? ದರ್ಶನ್ ಹಾಗೂ ಯಶ್ ಬಗ್ಗೆ ಕೇಳಿಬರುತ್ತಿರುವ ಸುದ್ದಿ ಏನು.? ಸತ್ಯಾಸತ್ಯತೆ ನಾವು ಬಿಚ್ಚಿಡ್ತೀವಿ.. ಮುಂದೆ ಓದಿ...


ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಹುಟ್ಟುಹಾಕಿದ ಸುದ್ದಿ ಇದು.!

'ಬಾಕ್ಸ್ ಆಫೀಸ್ ಸುಲ್ತಾನ್' ದರ್ಶನ್ ಅಭಿನಯದ 'ಚಕ್ರವರ್ತಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಶೇಷ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು.[ನಿಮ್ಮನ್ನೆಲ್ಲ ನಿಬ್ಬೆರಗಾಗಿಸುವ ನ್ಯೂಸ್ ಇದು.! ಅದು ದರ್ಶನ್ ಕುರಿತು.!]


ಯಾವ ಮಟ್ಟಕ್ಕೆ ಅಂದ್ರೆ...

'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಹಾಗೂ ರವಿಚಂದ್ರನ್ ಒಂದಾದ ಹಾಗೆ... 'ಮುಕುಂದ ಮುರಾರಿ' ಚಿತ್ರದಲ್ಲಿ ಸುದೀಪ್ ಹಾಗೂ ಉಪೇಂದ್ರ ಒಟ್ಟಿಗೆ ನಟಿಸಿದ ಹಾಗೆ... 'ಬುಲ್ ಬುಲ್' ಚಿತ್ರದಲ್ಲಿ ಅಂಬರೀಶ್ ಹಾಗೂ ದರ್ಶನ್ ತೆರೆ ಹಂಚಿಕೊಂಡ ಹಾಗೆ... 'ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ಅಂಬರೀಶ್ ಕಾಂಬಿನೇಷನ್ ಇದ್ದ ಹಾಗೆ 'ಚಕ್ರವರ್ತಿ' ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ದರ್ಶನ್ ಹಾಗೂ ಯಶ್ ತೆರೆಮೇಲೆ ಒಂದಾಗಲಿದ್ದಾರೆ. ರಾಕಿಂಗ್ ಸ್ಟಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ರವರನ್ನ ಒಂದುಗೂಡಿಸಿದ ಸಿನಿಮಾ 'ಚಕ್ರವರ್ತಿ' ಅಗಲಿದೆ ಎಂದು ಗಾಂಧಿನಗರದಲ್ಲಿ ಗುಸುಗುಸು ಆರಂಭವಾಗಿತ್ತು.[ಅಭಿಮಾನಿಗಳ ಅಭಿಮಾನ ಕಂಡು ಮನದಾಳ ತೆರೆದಿಟ್ಟ ದರ್ಶನ್]


ಆದ್ರೆ ಇದೆಲ್ಲ ಸುಳ್ಳು.!

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಹಾಗೂ ಯಶ್ ಒಟ್ಟಿಗೆ ನಟಿಸುತ್ತಿರುವುದು ನಿಜವೇ.? ಕನ್ಫರ್ಮ್ ಮಾಡಿಕೊಳ್ಳೋಣ ಅಂತಲೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ದರ್ಶನ್ ಆಪ್ತರಿಗೆ ಹಾಗೂ 'ಚಕ್ರವರ್ತಿ' ತಂಡಕ್ಕೆ ಕರೆ ಮಾಡಿತ್ತು. ಆಗಲೇ, ಸತ್ಯಾಸತ್ಯತೆ ಬಯಲಾಗಿದ್ದು.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!]


'ಚಕ್ರವರ್ತಿ' ಚಿತ್ರದಲ್ಲಿ ಇಲ್ಲ ಯಶ್.!

''ಚಕ್ರವರ್ತಿ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಿಲ್ಲ'' ಅಂತ ದರ್ಶನ್ ಆಪ್ತರು ಹಾಗೂ 'ಚಕ್ರವರ್ತಿ' ಚಿತ್ರತಂಡ ಸ್ಪಷ್ಟಪಡಿಸಿದೆ.


'ಚಕ್ರವರ್ತಿ' ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆಯಲಾಗಿದೆ.!

'ಚಕ್ರವರ್ತಿ' ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದು ದಿನಗಳೇ ಉರುಳಿವೆ. ಡಬ್ಬಿಂಗ್ ಹಂತದಲ್ಲಿ ಇರುವ 'ಚಕ್ರವರ್ತಿ' ಬಗ್ಗೆ ಈ ಗಾಸಿಪ್ ಹಬ್ಬಲು ಕಾರಣ... 'ಯಶಸ್ ಸೂರ್ಯ'


ಯಶ್ ಅಲ್ಲ ಯಶಸ್ ಸೂರ್ಯ ಅಭಿನಯಿಸಿದ್ದಾರೆ.!

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ರವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಯಶಸ್ ಸೂರ್ಯ ಅಭಿನಯಿಸಿದ್ದಾರೆ.


ಕನ್ ಫ್ಯೂಶನ್ ಆಗಿರುವುದು ಇಲ್ಲಿ

'ಚಕ್ರವರ್ತಿ' ಚಿತ್ರದಲ್ಲಿ ಯಶಸ್ ಸೂರ್ಯ ರವರದ್ದು ಅತಿಥಿ ಪಾತ್ರ. ಡಾಕ್ಟರ್ ಪಾತ್ರ ನಿರ್ವಹಿಸಿರುವ ಯಶಸ್ ಸೂರ್ಯ ರವರನ್ನ ಯಾರೋ ಕನ್ ಪ್ಯೂಸ್ ಮಾಡಿಕೊಂಡು 'ಚಕ್ರವರ್ತಿ' ಚಿತ್ರದಲ್ಲಿ ಯಶ್ ಅಭಿನಯಿಸಿದ್ದಾರೆ ಅಂತ ಗುಲ್ಲೆಬ್ಬಿಸಿದ್ದಾರೆ ಅಷ್ಟೇ.!


'ಚಕ್ರವರ್ತಿ' ಚಿತ್ರದಲ್ಲಿ ಇದ್ದಾರೆ ತಾರೆಯರ ದಂಡು

'ಚಕ್ರವರ್ತಿ' ಚಿತ್ರದಲ್ಲಿ ದರ್ಶನ್ ಜೊತೆ ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್ ಮತ್ತು ಆದಿತ್ಯ ಕೂಡ ಅಭಿನಯಿಸಿದ್ದಾರೆ. ಇವರೆಲ್ಲರ ಜೊತೆ ಯಶಸ್ ಸೂರ್ಯ ರವರಿಗೂ ಒಂದು ವಿಶಿಷ್ಟ ಪಾತ್ರ ಇದೆ.


ಯಶಸ್ ಸೂರ್ಯ ಕುರಿತು....

'ಶಿಶಿರ', 'ಶ್ರಾವಣಿ ಸುಬ್ರಮಣ್ಯ', 'ಚಿಂಗಾರಿ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ಯಶಸ್ ಸೂರ್ಯ ಅಭಿನಯಿಸಿದ್ದಾರೆ.


'ಚಕ್ರವರ್ತಿ' ಬಿಡುಗಡೆ ಯಾವಾಗ.?

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ 'ಚಕ್ರವರ್ತಿ' ಚಿತ್ರದ ಹಾಡುಗಳು ಮತ್ತು ಟ್ರೈಲರ್ ವೈರಲ್ ಆಗಿದೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.


English summary
Rocking Star Yash is not part of Challenging Star Darshan starrer 'Chakravarthy'. Kannada Actor Yashas Surya is playing Cameo in 'Chakravarthy'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada