ನಿರ್ದೇಶಕರೇ ಕೇಳಿಸಿಕೊಳ್ಳಿ... ದರ್ಶನ್ ಜೊತೆಗೆ ಸಿನಿಮಾ ಮಾಡಲು ಯಶ್ ರೆಡಿ!

By Harshitha

Recommended Video

ಚಾಲೆಂಜಿಂಗ್ ಸ್ಟಾರ್ ಬಗ್ಗೆ ರಾಕಿಂಗ್ ಸ್ಟಾರ್ ಮಾತು | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಚೆನ್ನಾಗಿಯೇ ಇದ್ದರು. 'ರಾಟೆ' ಆಡಿಯೋ ರಿಲೀಸ್ ಟೈಮ್ ನಲ್ಲಿ ಒಂದೇ ವೇದಿಕೆ ಹಂಚಿಕೊಂಡಿದ್ದರು. ಅಂಬರೀಶ್ ಹುಟ್ಟುಹಬ್ಬದ ಪಾರ್ಟಿಯಲ್ಲೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದಾದ್ಮೇಲೆ ಅದೇನಾಯ್ತೋ ಗೊತ್ತಿಲ್ಲ, ಯಶ್ ಹಾಗೂ ದರ್ಶನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸು ಗುಸು ಕೇಳಿಬಂತು.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ಯಶ್ ಹೇಳಿದ್ದ 'ಹವಾ' ಡೈಲಾಗ್ ಗೆ 'ಜಗ್ಗುದಾದಾ' ಚಿತ್ರದಲ್ಲಿ ದರ್ಶನ್ ಕೌಂಟರ್ ಕೊಟ್ಟಿದ್ದಾರೆ ಅಂತ ಯಾರೋ ತಳುಕು ಹಾಕಿದರು. ಅಲ್ಲಿಂದ ಕಿಚ್ಚು ಇನ್ನೂ ಹೆಚ್ಚಾಯ್ತು ಅಂತ ಹೇಳುವವರೂ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ತಾರಕಕ್ಕೆ ಏರುತ್ತಿದ್ದಂತೆಯೇ, ''ನಾವೆಲ್ಲರೂ ಒಂದೇ. ನಾನು ಎಲ್ಲರ ಫ್ಯಾನ್. ನಮ್ಮ ನಮ್ಮಲ್ಲಿ ತಂದಿಡಬೇಡಿ'' ಎಂದು ಯಶ್ ಹೇಳಿದ್ದರು. ಈ ನಡುವೆ 'ಕುರುಕ್ಷೇತ್ರ' ಚಿತ್ರದ ಬಗ್ಗೆಯೂ ಯಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಇದೀಗ ಎಲ್ಲವೂ ತಣ್ಣಗಾಗಿರುವಾಗಲೇ, ಅಭಿಮಾನಿಯೊಬ್ಬರು ಯಶ್ ಮುಂದೆ ಒಂದು ಪ್ರಶ್ನೆ ಇಟ್ಟರು. ಅದಕ್ಕೆ ಯಶ್ ಕೊಟ್ಟ ಉತ್ತರ ಏನು.? ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಫೇಸ್ ಬುಕ್ ಲೈವ್ ನಲ್ಲಿ ನಟ ಯಶ್

ಫೇಸ್ ಬುಕ್ ಲೈವ್ ನಲ್ಲಿ ನಟ ಯಶ್

ತಮ್ಮ ಬಾಡಿಗೆ ಮನೆ ರಂಪಾಟದ ಬಗ್ಗೆ ಸ್ಪಷ್ಟನೆ ನೀಡಲು ನಟ ಯಶ್ ಫೇಸ್ ಬುಕ್ ಲೈವ್ ಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳ ಪ್ರಶ್ನೆಗಳಿಗೂ ಯಶ್ ಉತ್ತರಿಸುತ್ತಿದ್ದರು. ಆಗ ಅಭಿಮಾನಿಯೊಬ್ಬರು ''ಡಿ ಬಾಸ್ ಜೊತೆ ಒಂದು ಮೂವಿ ಮಾಡಿ'' ಎಂದು ಯಶ್ ಗೆ ಹೇಳಿದರು.

ಯಶ್ ಕೊಟ್ಟ ಪ್ರತಿಕ್ರಿಯೆ ಏನು.?

ಯಶ್ ಕೊಟ್ಟ ಪ್ರತಿಕ್ರಿಯೆ ಏನು.?

''ಖಂಡಿತ ಮಾಡ್ತೀವಿ. ಆದ್ರೆ, ಆ ಥರದ ಒಂದು ಸ್ಕ್ರಿಪ್ಟ್ ಬರಬೇಕು. ಯಾವುದಾದರೂ ಸ್ಕ್ರಿಪ್ಟ್ ಚೆನ್ನಾಗಿದೆ ಅಂತಾದರೆ, ಖಂಡಿತವಾಗಲೂ ಮಾಡ್ತೀನಿ'' ಎಂದು ಯಶ್ ಪ್ರತಿಕ್ರಿಯೆ ಕೊಟ್ಟರು.

ನಿರ್ದೇಶಕರೇ ಕೇಳಿಸ್ತಿದ್ಯಾ.?

ನಿರ್ದೇಶಕರೇ ಕೇಳಿಸ್ತಿದ್ಯಾ.?

ದರ್ಶನ್ ಜೊತೆ ತೆರೆಹಂಚಿಕೊಳ್ಳಲು ಯಶ್ ಅಂತೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆದ್ರೆ, ಅದು ಸಾಧ್ಯ ಆಗಬೇಕು ಅಂದ್ರೆ ಉತ್ತಮ ಸ್ಕ್ರಿಪ್ಟ್ ಮುಖ್ಯ. ಯಾರಾದರೂ ನಿರ್ದೇಶಕರು ಒಳ್ಳೆಯ ಕಥೆ ರೆಡಿ ಮಾಡಿಕೊಂಡು ಹೋದರೆ, ಖಂಡಿತ ಚಾಲೆಂಜಿಂಗ್ ಸ್ಟಾರ್ ಹಾಗೂ ರಾಕಿಂಗ್ ಸ್ಟಾರ್ ರನ್ನ ತೆರೆಮೇಲೆ ಒಂದು ಮಾಡಬಹುದು.

ಅಭಿಮಾನಿಗಳಿಗೆ ಹಬ್ಬವೇ ಸರಿ

ಅಭಿಮಾನಿಗಳಿಗೆ ಹಬ್ಬವೇ ಸರಿ

ಹಾಗ್ನೋಡಿದ್ರೆ, 'ಚಕ್ರವರ್ತಿ' ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಗಾಸಿಪ್ ಹರಿದಾಡಿದಾಗ ದರ್ಶನ್ ಫ್ಯಾನ್ಸ್ ಹಾಗೂ ಯಶ್ ಅಭಿಮಾನಿಗಳು ಸಂತಸ ಪಟ್ಟಿದ್ದರು. ಆದ್ರೆ, ಸಿನಿಮಾದಲ್ಲಿ ನಟಿಸಿರುವುದು ಯಶ್ ಅಲ್ಲ ಯಶಸ್ ಅಂದ್ಮೇಲೆ ನಿರಾಸೆ ಪಟ್ಟಿದ್ದರು. ಮುಂದೆ ದರ್ಶನ್ ಹಾಗೂ ಯಶ್ ಒಟ್ಟಿಗೆ ಸಿನಿಮಾ ಮಾಡಿದರೆ, ಅಭಿಮಾನಿಗಳಿಗೆ ಅದಕ್ಕಿಂತ ಖುಷಿ ಮತ್ತೊಂದು ಇದ್ಯಾ.?

More from Filmibeat

English summary
Rocking Star Yash is ready to do a movie with Challenging Star Darshan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X