ದರ್ಶನ್ ಬಳಿಕ ಸುಮಲತಾ ಸಿಕ್ತು ಮನೆ ಮಗ ಯಶ್ ಬೆಂಬಲ!

Recommended Video

ನಾಲ್ಕು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದ ಯಶ್, ಸುಮಲತಾ..! | FILMIBEAT KANNADA

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಒಬ್ಬರ ನಂತರ ಒಬ್ಬರಂತೆ ಸ್ಯಾಂಡಲ್ ವುಡ್ ಕಲಾವಿದರು ಸುಮಲತಾಗೆ ಬೆಂಬಲ ಸೂಚಿಸುತ್ತಿದ್ದಾರೆ.

ಚುನಾವಣೆಯ ಬಗ್ಗೆ ಮಾತನಾಡುವ ವೇಳೆ ಸುಮಲತಾ ''ದರ್ಶನ್ ನನ್ನ ದೊಡ್ಡ ಮಗ ಹಾಗೂ ಯಶ್ ನನ್ನ ಮನೆ ಮಗ'' ಅವರು ಏನೇ ಸಹಾಯ ಕೇಳಿದರೂ ಮಾಡುತ್ತಾರೆ ಎಂದಿದ್ದರು. ಅದೇ ರೀತಿ ದರ್ಶನ್ ಸುಮಲತಾ ಅವರ ಪರ ನಿಂತಿದ್ದರು.

ನಟ ದರ್ಶನ್ ನಂತರ ಇದೀಗ ಯಶ್ ಸಹ ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ಸೂಚಿಸಲಿದ್ದಾರೆ ಎನ್ನಲಾಗಿದೆ. ನಿನ್ನೆ ಇದೇ ವಿಚಾರವಾಗಿ ಯಶ್ ರನ್ನು ಸುಮಲತಾ ಭೇಟಿ ಮಾಡಿದ್ದಾರೆ. ಮುಂದೆ ಓದಿ...

ಸುಮಲತಾ‌ ಅಂಬರೀಶ್ ಗೆ ಯಶ್ ಸಾಥ್

ಸುಮಲತಾ‌ ಅಂಬರೀಶ್ ಗೆ ಯಶ್ ಸಾಥ್

ನಟಿ ಸುಮಲತಾ ಅಂಬರೀಶ್ ಕೆಲ ದಿನಗಳ ಹಿಂದೆ ಚುನಾವಣಾ ವಿಚಾರವಾಗಿ ದರ್ಶನ್ ರನ್ನು ಭೇಟಿ ಮಾಡಿದ್ದರು. ಅದರ ನಂತರ ನಿನ್ನೆ ರಾಕಿಂಗ್ ಸ್ಟಾರ್ ಯಶ್ ರನ್ನು ಸಹ ಭೇಟಿ ಮಾಡಿದ್ದಾರೆ. ನಿನ್ನೆ ಬೆಂಗಳೂರು ಪ್ರೆಸ್ಟಿಜ್ ಅಪಾರ್ಟ್ ಮೆಂಟ್ ನಲ್ಲಿ ಯಶ್ ಹಾಗೂ ಸುಮಲತಾ ಭೇಟಿಯಾಗಿದ್ದು, ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ್ದಾರೆ.

ಮಂಡ್ಯದಲ್ಲಿ ಪ್ರಚಾರ

ಮಂಡ್ಯದಲ್ಲಿ ಪ್ರಚಾರ

ನಿನ್ನೆ ಸುಮಾರು ನಾಲ್ಕು ಗಂಟೆಗಳ ಕಾಲ ಲೋಕಸಭಾ ಚುನಾವಣೆ ಬಗ್ಗೆ ಯಶ್ ಮತ್ತು ಸುಮಲತಾ ಚರ್ಚೆ ಮಾಡಿದ್ದಾರೆ. ಈ ವೇಳೆ ಯಶ್ ರಿಂದ ಕೆಲ ಸಲಹೆಯನ್ನು ಸುಮಲತಾ ಪಡೆದಿರಬಹುದು. ಮಂಡ್ಯದಲ್ಲಿ ತಮ್ಮ ಪರ ಪ್ರಚಾರ ಮಾಡಲು ತಿಳಿಸಿರಬಹುದು. ಇತ್ತ ಯಶ್ ಕೂಡ ಸುಮಲತಾ ಮಾತಿಗೆ ಸಮ್ಮತಿ ನೀಡಿರಬಹುದು.

ದರ್ಶನ್ ಹೇಳಿದ್ದೇನು?

ದರ್ಶನ್ ಹೇಳಿದ್ದೇನು?

ಈ ಹಿಂದೆ ಸುಮಲತಾ ಪರ ಮಾತನಾಡಿದ್ದ ದರ್ಶನ್ ''ಅಂಬರೀಶ್ ಅಪ್ಪಾಜಿಯವರು ಯಾವಾಗ ಚುನಾವಣೆಯಲ್ಲಿ ನಿಂತಿದ್ದರೊ ಆಗಲು ನಾನು ಹೋಗಿದ್ದೇನೆ. ಇದು ನಮ್ಮ ಕರ್ತವ್ಯ. ಸುಮಲತಾ ಅಮ್ಮ ಪ್ರಚಾರಕ್ಕೆ ಕರೆದರೆ ಹೋಗುತ್ತೇನೆ. ಎಷ್ಟೊ ಜನ ಸ್ನೇಹಿತರಿಗೂ ಚುನಾವಣೆಗಳಲ್ಲಿ ಪ್ರಚಾರ ಮಾಡಿ ಕೊಟ್ಟಿದ್ದೇನೆ. ಹಾಗೆಯೇ ಈಗಲೂ ಹೋಗಿ ಬರುತ್ತೇನೆ.'' ಎಂದು ಹೇಳಿದ್ದರು.

ನಟ ಚರಣ್ ರಾಜ್ ಪ್ರತಿಕ್ರಿಯೆ

ನಟ ಚರಣ್ ರಾಜ್ ಪ್ರತಿಕ್ರಿಯೆ

ನಟ ಚರಣ್ ರಾಜ್ ಸಹ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ''ನನಗೆ ಅವರ ವೈಯಕ್ತಿಕ ವಿಷಯದ ಬಗ್ಗೆ ತಿಳಿದಿಲ್ಲ. ನಾನು ಪೇಪರ್ ಗಳಲ್ಲಿ ಈ ಬಗ್ಗೆ ಸುದ್ದಿ ನೋಡಿದೆ. ಸುಮಲತಾ ಅವರು ಅಂಬರೀಶ್ ಅಣ್ಣನ ದಾರಿಯಲ್ಲಿ ಹೋಗುತ್ತಿದ್ದಾರೆ. ನಾನು ಅಂಬರೀಶ್ ಅಣ್ಣನ ಮನೆಯಲ್ಲಿ ಊಟ ಮಾಡಿದ್ದೇನೆ. ನನಗೆ ಸುಮಲತಾ ಅವರು ಯಾವತ್ತೆ.. ಯಾವ ಸಮಯದಲ್ಲಿಯೇ ಕರೆದರೂ ಖಂಡಿತ ನಾನು ಹೋಗಿ ಅವರಿಗೆ ಸಪೋರ್ಟ್ ಮಾಡುತ್ತೇನೆ.'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Lok Sabha Election 2019: Kannada actor Yash Raj is ready to do election campaign for actress Sumalatha in Lok Sabha Election. Actress Sumalatha and actor Nikhil kumar likely to participate in Mandya constituency.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X