»   » 'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆಲುವಿಗೆ 'ರಿಯಲ್' ಕಾರಣ ಇವರೇ.!

'ರಾಜಕುಮಾರ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಗೆಲುವಿಗೆ 'ರಿಯಲ್' ಕಾರಣ ಇವರೇ.!

Posted By: Naveen
Subscribe to Filmibeat Kannada

ನಿರ್ದೇಶಕ 'ಸಂತೋಷ್ ಆನಂದ್ ರಾಮ್' ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ಸದ್ಯ ಇವರ ನಿರ್ದೇಶನದಲ್ಲಿ ಬಂದ 'ರಾಜಕುಮಾರ' ಸಿನಿಮಾ 50 ದಿನ ಪೂರೈಸಿ, 50 ಕೋಟಿ ಗಳಿಕೆ ಮಾಡಿ ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದಿದೆ.

ಬ್ಯಾಕ್ ಟು ಬ್ಯಾಕ್ ಎರಡು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಸಂತೋಷ್ ಆನಂದ್ ರಾಮ್ ಗೆಲುವಿಗೆ ಮೂಲ ಕಾರಣ ರಾಕಿಂಗ್ ಸ್ಟಾರ್ ಯಶ್ ಅಂತೆ. ಇದನ್ನ ಸ್ವತಃ ಸಂತೋಷ್ ಆನಂದ್ ರಾಮ್ ಹೇಳಿಕೊಂಡಿದ್ದಾರೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ರಾಜಕುಮಾರ' ಸಿನಿಮಾಗಳು ಸಂತೋಷ್ ಆನಂದ್ ರಾಮ್ ಬತ್ತಳಿಕೆಯಿಂದ ಬಂದಿತ್ತು. ಇಡೀ ಕನ್ನಡ ಚಿತ್ರರಂಗವೇ ತನ್ನತ್ತ ನೋಡುವಂತೆ ಮಾಡಿದ ಈ ನಿರ್ದೇಶಕ ಈಗ ತನ್ನ ಗೆಲುವಿಗೆ ಯಶ್ ಕಾರಣ ಅಂತ ಹೇಳಿದ್ದಾರೆ. ಮುಂದೆ ಓದಿ...

'ಸಂತೋಷ'ದ ಮಾತು

ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಗೆಲುವಿಗೆ ರಾಕಿಂಗ್ ಸ್ಟಾರ್ ಯಶ್ ಕಾರಣ ಅಂತ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಯಶ್ ಬಗ್ಗೆ ಮನಮುಟ್ಟುವ ಮಾತುಗಳನ್ನ ಹಂಚಿಕೊಂಡಿದ್ದಾರೆ.

8 ವರ್ಷಗಳ ಹಿಂದೆ

ನಿನ್ನೆಗೆ (ಮೇ15) ಸರಿಯಾಗಿ ಎಂಟು ವರ್ಷಗಳ ಹಿಂದೆ ಸಂತೋಷ್ ಆನಂದ್ ರಾಮ್ ಕೆಲಸ ಬಿಟ್ಟಿದ್ದರಂತೆ. ಇನ್ಫೋಸಿಸ್ ನಂತಹ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ತಮ್ಮ ಸಿನಿಮಾ ಕನಸಿಗಾಗಿ ಕೆಲಸಕ್ಕೆ ಗುಡ್ ಬಾಯ್ ಹೇಳಿದ್ದರು.

ಅದೇ 'ಮೇ 15'ಕ್ಕೆ ಯಶ್ ಪರಿಚಯ

ಸಿನಿಮಾರಂಗದಲ್ಲಿ ಸಾಧಿಸುವ ಹಠ ಹೊಂದಿದ್ದ ಸಂತೋಷ್ ಆನಂದ್ ರಾಮ್ ಗೆ ಯಶ್ ಪರಿಚಯ ಆಗಿದ್ದು, ಅದೇ 'ಮೇ15' 2013 ರಲ್ಲಿ. ಆಗ ಯಶ್ ನಟನೆಯ 'ಗಜಕೇಸರಿ' ಸಿನಿಮಾದ ಸಂಭಾಷಣೆ ಬರೆಯುವುದಕ್ಕೆ ಅವಕಾಶ ಸಿಕ್ಕಿತು.

'ಡ್ರೀಮರ್ ಟು ಡೈರೆಕ್ಟರ್'

''ನಿರ್ದೇಶಕನಾಗುವ ಕನಸು ನನಸಾಗಿದ್ದು ಯಶ್ ಅವರಿಂದ. ನಾನು 'ಡ್ರೀಮರ್ ಟು ಡೈರೆಕ್ಟರ್' ಆಗಿದ್ದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಅಂತಹ ದೊಡ್ಡ ಸಿನಿಮಾದ ಮೂಲಕ. ನನ್ನ ಹೆಸರಿನ ಹಿಂದಿನ ಖುಷಿ ಯಶ್'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

ನನ್ನ ಯಶಸ್ಸಿಗೆ 'ಯಶ್' ಕಾರಣ

''ನನ್ನ ಜೀವನದ ಎಲ್ಲ ರೀತಿಯ ಏಳು ಬೀಳುಗಳಲ್ಲಿ ನನ್ನ ಹಿಂದೆ ಇದ್ದವರು ಯಶ್. ನನ್ನ ಚಿತ್ರರಂಗದ ಯಶಸ್ಸಿಗೆ ನನ್ನ ಸಾಧನೆಗೆ ನಿಜವಾದ ಕಾರಣ ಅವರೆ'' - ಸಂತೋಷ್ ಆನಂದ್ ರಾಮ್, ನಿರ್ದೇಶಕ

ಚಿರಋಣಿ

''ನನ್ನ ಈ ಎಲ್ಲ ಸಾಧನೆಯ ಹಿಂದೆ ಇರುವ ನಿಮಗೆ (ಯಶ್) ನಾನು ಚಿರಋಣಿ. ಥ್ಯಾಂಕ್ ಯೂ... ಅಂಡ್ ಲವ್ ಯೂ...'' - ಸಂತೋಷ್ ಆನಂದ್ ರಾಮ್, ನಿರ್ದೇಶಕ.

ಒಟ್ಟಿಗೆ ಸಿನಿಮಾ?

ಸಂತೋಷ್ ಆನಂದ್ ರಾಮ್ ಮತ್ತು ಯಶ್ ನಡುವಿನ ತೆರೆ ಮೇಲಿನ ಜುಗಲ್ ಬಂದಿ ಮತ್ತು ತೆರೆ ಹಿಂದಿನ ಸ್ನೇಹ ಚೆನ್ನಾಗಿದೆ. ದೊಡ್ಡ ಯಶಸ್ಸಿನ ಬಳಿಕ ಮತ್ತೆ ಈ ಇಬ್ಬರು ಒಟ್ಟಿಗೆ ಸಿನಿಮಾ ಮಾಡಲಿ ಎನ್ನುವುದು ಅನೇಕ ಅಭಿಮಾನಿಗಳ ಆಸೆಯಾಗಿದೆ.

English summary
Kannada Director Santhosh Ananddram has taken his Facebook account to reveal the person behind his success journey.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada