ಅಂಬಿ ಏನು ಅಂತ ಮಂಡ್ಯಗೆ ಗೊತ್ತು, ಮಗನಾಗಿ ಅಮ್ಮನ ನಿರ್ಧಾರಕ್ಕೆ ಬದ್ಧ ಎಂದ ಯಶ್

ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಟಿ ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಪತ್ನಿ ತಮ್ಮ ನಿರ್ಧಾರವನ್ನ ಬಹಿರಂಗಪಡಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಯಶ್ ''ಕಲಾವಿದನಾಗಿ ನಾನು ಬಂದಿಲ್ಲ ಮನೆಮಗನಾಗಿ ಬಂದಿದ್ದೀನಿ'' ಎಂದು ಹೇಳುವ ಮೂಲಕ ಸುಮಲತಾ ಅವರ ಜೊತೆ ನಾನಿದ್ದೀನಿ ಎಂದು ಘೋಷಿಸಿದರು.

ಸುಮಲತಾ ಅವರ ಜೊತೆ ಚಿತ್ರರಂಗದಿಂದ ಯಾರೆಲ್ಲ ಬರ್ತಾರೆ ಎನ್ನುವ ಕುತೂಹಲ ಮಂಡ್ಯ ಜನರಲ್ಲಿತ್ತು. ಇಂದು ಇದಕ್ಕೆಲ್ಲ ತೆರೆ ಎಳೆದ ಸುಮಲತಾ, ರಾಕಿ ಬಾಯ್ ಕೂಡ ಜೊತೆ ಇದ್ದಾರೆ ಎಂದು ತೋರಿಸಿದರು. ಹಾಗಿದ್ರೆ, ಯಶ್ ಸುದ್ದಿಗೋಷ್ಠಿಯಲ್ಲಿ ಏನೆಲ್ಲ ಮಾತನಾಡಿದ್ರು? ಮುಂದೆ ಓದಿ.....

ಮನೆಮಗನ ಸ್ಥಾನ ನೀಡಿದ್ದಾರೆ

ಮನೆಮಗನ ಸ್ಥಾನ ನೀಡಿದ್ದಾರೆ

''ಇಲ್ಲಿ ಕಲಾವಿದನಾಗಿ ಬಂದಿಲ್ಲ, ಮನೆಮಗನಾಗಿ ಬಂದಿದ್ದೇನೆ'' ಎನ್ನುತ್ತಲೇ ಮಾತು ಆರಂಭಿದ ಯಶ್ 'ಕಲಾವಿದನಾಗುವುದಕ್ಕಿಂತ ಮೊದಲೆ ಅಂಬರೀಶ್ ಅವರು ಚೆನ್ನಾಗಿ ಗೊತ್ತು. ಅಂಬರೀಶ್ ಅವರು ನನಗೆ ಸಾಕಷ್ಟು ಸಹಾಯ ಮಾಡಿದ್ದಾರೆ, ಅಷ್ಟೆಯಲ್ಲ ಅತಿಯಾದ ಪ್ರೀತಿ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಕುಟುಂಬದ ಪರ ನಿಲ್ಲೋದು ನನ್ನ ಕರ್ತವ್ಯ'' ಎಂದು ಹೇಳಿದರು.

ಅಂಬಿ ಏನು ಅಂತ ಮಂಡ್ಯ ಜನರಿಗೆ ಗೊತ್ತು

ಅಂಬಿ ಏನು ಅಂತ ಮಂಡ್ಯ ಜನರಿಗೆ ಗೊತ್ತು

''ಅಂಬರೀಶ್ ಏನು ಎನ್ನುವುದು ಇಡೀ ಮಂಡ್ಯ ಜನಕ್ಕೆ ಗೊತ್ತು. ಎಲ್ಲರ ಪ್ರೀತಿ ಗಳಿಸುವುದು ಅಷ್ಟು ಸಾಮಾನ್ಯ ಅಲ್ಲ. ಮಂಡ್ಯ ಅಂದರೆ ಅಂಬಿ ಅಂತ ನಾನು ಅಂದುಕೊಂಡಿರುವುದು, ಅಂಬಿ ಅಂದರೆ ಮಂಡ್ಯ ಅಂತ ಎಲ್ಲರಿಗೂ ಗೊತ್ತು. ಮಂಡ್ಯ ಜನ ಅಂಬರೀಶ್ ಅವರಿಗೆ ತೋರಿಸಿದ ಪ್ರೀತಿಯನ್ನು ಅವರ ಕುಟುಂಬ ಮೇಲೂ ತೋರಿಸುತ್ತಾರೆ. ಮಂಡ್ಯ ಜನತೆ ಅಂಬರೀಶ್ ಕುಟುಂಬವನ್ನು ಕೈ ಬಿಡಲ್ಲ ಎಂಬ ನಂಬಿಕೆ ಇದೆ. ಸುಮಲತಾ ಅವರಿಗೆ ಶಕ್ತಿ ಇದೆ ಹಾಗೂ ಯೋಗ್ಯತೆ ಇದೆ ಜನರ ಸೇವೆ ಮಾಡ್ತಾರೆ''

ಅಮ್ಮನ ನಿರ್ಧಾರಕ್ಕೆ ನಾನು ಬದ್ಧ

ಅಮ್ಮನ ನಿರ್ಧಾರಕ್ಕೆ ನಾನು ಬದ್ಧ

''ನಾನು ಯಾವಾಗಲು ಸುಮಲತಾ ಅವರ ಜೊತೆ ಇರುತ್ತೇನೆ. ಇಲ್ಲಿ ರಾಜಕೀಯ ಅನ್ನೋದು ಬರಲ್ಲ, ತಾಯಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಮಕ್ಕಳಾಗಿ ಅವರ ಪರ ಇರ್ತೀವಿ ಅಷ್ಟೆ. ಎಲ್ಲಿಯವೆರೆಗೂ ಹೆಜ್ಜೆ ಇಡ್ತಾರೋ ಅಲ್ಲಿಯವರೆಗೂ ಇರ್ತೀನಿ, ಪ್ರಚಾರ ಕೂಡ ಮಾಡುತ್ತೇನೆ. ಮಂಡ್ಯ ಜನರ ಸೇವೆ ಮಾಡಲು ಸಿದ್ಧರಾಗಿದ್ದಾರೆ. ಮಂಡ್ಯ ಜನಕ್ಕೆ ಏನು ಬೇಕೋ ಅದನ್ನು ಖಂಡಿತ ಸುಮಲತಾ ಅವರು ಮಾಡ್ತಾರೆ''

ನಂಬಿಕೆ ಮುಖ್ಯವಾಗುತ್ತೆ

ನಂಬಿಕೆ ಮುಖ್ಯವಾಗುತ್ತೆ

ಈ ವೇಳೆ ಸುಮಲತಾ ಅವರನ್ನ ಯಶ್ ಬೆಂಬಲಿಸಿದ್ರೆ ಉಳಿದ ಪಕ್ಷದಲ್ಲಿರುವ ಅಭಿಮಾನಿಗಳಿಗೆ ಬೇಸರವಾಗುವುದಿಲ್ಲವಾ ಎಂಬ ಪ್ರಶ್ನೆ ಸಹ ಎದ್ದಿತ್ತು. ಇದಕ್ಕೆ ಉತ್ತರ ನೀಡಿದ ಯಶ್ ''ಸುಮಲತಾ ಉತ್ತಮ ಕೆಲಸ ಮಾಡ್ತಾರೆ ಅಂತ ನಂಬಿದ್ದೇನೆ. ನನ್ನನ್ನು ನಂಬಿದವರು ಅವರನ್ನು ನಂಬುತ್ತಾರೆ'' ಎಂದರು. 'ಇಲ್ಲಿ ಪಕ್ಷ ಸಿದ್ಧಾಂತ ಎಲ್ಲವನ್ನು ಮೀರಿ ಉತ್ತಮ ಅಭ್ಯರ್ಥಿಗೆ ಮತ ಹಾಕಿ ಎಂದು' ಕೇಳಿಕೊಂಡರು.

More from Filmibeat

English summary
Sumalatha Ambareesh, wife of late Congress leader Ambareesh to contest from Mandya as an independent candidate. Yash join hands with sumalatha ambarish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X