ಕಲಾವಿದೆಯ ಕೈಯಲ್ಲಿ ಅರಳಿದ 'ರಾಕಿ ಭಾಯ್' ಯಶ್
ಕರ್ನಾಟಕದಲ್ಲಿ ಕೆಜಿಎಫ್ ಕ್ರೇಜ್ ಜೋರಾಗಿದೆ. ಸಿನಿಮಾ ರಿಲೀಸ್ ಆದ್ಮೇಲಂತೂ ಯಶ್ ಗೆ ಫಿದಾ ಆದವರು ಅದೇಷ್ಟೋ ಜನ. ಕೆಜಿಎಫ್ ನೋಡ್ಕೊಂಡು ಬಂದು ರಾಕಿ ಭಾಯ್ ಮೇಲೆ ಲವ್ವಾಗಿದೆ ಅಂತ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸ್ಟೇಟಸ್ ಹಾಕಿರುವ ಅಭಿಮಾನಿಗಳು ಹೆಚ್ಚಾಗಿದ್ದಾರೆ.
ಆದ್ರೆ, ಇಲ್ಲೊಬ್ಬ ಕಲಾವಿದೆ ವಿಶೇಷವಾಗಿ ಗಮನ ಸೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರ ಭಾವಚಿತ್ರವನ್ನ ತಮ್ಮ ಕಲೆಯಲ್ಲಿ ಅರಳಿಸಿದ್ದಾರೆ.
ಸಾಮಾನ್ಯವಾಗಿ ಸ್ಕೆಚ್, ಪೆನ್ಸಿಲ್ ಡ್ರಾಯಿಂಗ್, ಪೋಸ್ಟರ್ ಡಿಸೈನ್ ನೋಡಬಹುದು. ಆದ್ರೆ, ಈ ಕಲಾವಿದೆ ನೆಲದ ಮೇಲೆ ಬಣ್ಣಗಳನ್ನ ಬಳಸಿ, 'ರಾಕಿ ಭಾಯ್'ಗೆ ಜೀವ ನೀಡಿದ್ದಾರೆ.
ಬಟ್, ಈ ಚಿತ್ರವನ್ನ ಎಲ್ಲಿ ಬಿಡಿಸಿದ್ದರು, ಯಾವಾಗ ಬಿಡಿಸಿದ್ದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆ ಗಳಿಸಿಕೊಂಡಿದೆ.

ಅಂದ್ಹಾಗೆ, ಯಶ್ ಅವರ ಈ ಚಿತ್ತಾರವನ್ನ ಬಿಡಿಸಿದ ಕಲಾವಿದೆಯ ಹೆಸರು ಮಹೇಶ್ವರಿ. ಬೀದರ್ ಮೂಲದವರು ಎಂದು ತಿಳಿದಿದೆ.
ಇನ್ನು ಕೆಜಿಎಫ್ ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಗಿತ್ತು. ಯಶ್, ಶ್ರೀನಿಧಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.


Click it and Unblock the Notifications











