ಸೆಂಚುರಿ ಬಾರಿಸಿದ ಕೆಜಿಎಫ್, ಸಂತಸದಲ್ಲಿ ಚಿತ್ರತಂಡ
Recommended Video

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಕೆಜಿಎಫ್ ಸಿನಿಮಾಗೆ ಶತಕದ ಸಂಭ್ರಮ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಕೆಜಿಎಫ್ ಶತದಿನ ಪೂರೈಸಿ ಮುನ್ನುಗ್ಗುತ್ತಿದೆ.
ಕೆಜಿಎಫ್ ಕಳೆದ ವರ್ಷ ಡಿಸೆಂಬರ್ 21 ರಂದು ವಿಶ್ವದಾದ್ಯಂತ ರಿಲೀಸ್ ಆಗಿತ್ತು. ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗಿ ಅಬ್ಬರಿಸಿದ್ದ ಆ ದಿನ ಸ್ಯಾಂಡಲ್ ವುಡ್ ಪಾಲಿಗೆ ಮಹತ್ವದ ದಿನವಾಗಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ, ಪ್ರಶಾಂತ್ ನೀಲ್ ಸಾರಥ್ಯದೊಂದಿಗೆ ಬಂದ 'ಕೆಜಿಎಫ್' ಗೆ ಕನ್ನಡಿಗರು ಮಾತ್ರವಲ್ಲದೇ ಇಡೀ ಭಾರತೀಯ ಸಿನಿರಸಿಕರು ತಲೆಬಾಗಿದ್ದರು.
ರಾಕಿ ಭಾಯ್ ಪಾತ್ರ, ಖಳ ನಟರ ಆರ್ಭಟ, ತಾಯಿ ಮಗನ ಸೆಂಟಿಮೆಂಟ್, ಅನಂತ್ ನಾಗ್ ಮತ್ತು ಮಾಳವಿಕಾ ಅವರ ನಿರೂಪಣೆ ಶೈಲಿ, ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಕ್ಯಾಮರಾ ಕೈಚಳಕ, ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ ಹೀಗೆ 'ಕೆಜಿಎಫ್' ಚಿತ್ರದ ಪ್ರತಿಯೊಂದು ಅಂಶವು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿತ್ತು.

ಕನ್ನಡ ಮಾತ್ರವಲ್ಲಿದೆ 5 ಭಾಷೆಯಲ್ಲಿ 'ಕೆಜಿಎಫ್' ಅಬ್ಬರಿತ್ತು. ಅಲ್ಲದೆ ಗಳಿಕೆ ವಿಚಾರದಲ್ಲೂ ಕೋಟಿ ಕೋಟಿ ಬಾಚಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.
ನೂರರ ಸಂಭ್ರಮದಲ್ಲಿರುವ ಚಿತ್ರತಂಡ ಈ ಸಂತಸವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದೆ ಹೊಂಬಾಳೆ ಪ್ರೊಡಕ್ಷನ್.
ಸದ್ಯ ಶತಕದ ಗಡಿದಾಟಿರುವ 'ಕೆಜಿಎಫ್' ಕಿರುತೆರೆಯ ಮೇಲು ಅಬ್ಬರಿಸಲು ಸಿದ್ಧವಾಗಿದೆ. ಇಂದು ಮತ್ತು ನಾಳೆ ಎರಡು ದಿನ ಕಲರ್ಸ್ ಚಾನೆಲ್ ನಲ್ಲಿ 'ಕೆಜಿಎಫ್' ಪ್ರಸಾರವಾಗುತ್ತಿದೆ. ಇನ್ನು 'ಕೆಜಿಎಫ್ ಪಾರ್ಟ್-2' ಕೂಡ ಚಿತ್ರೀಕರಣ ನಡೆಯುತ್ತಿದೆ. ಮೊದಲ ಭಾಗ ನೋಡಿದ ಪ್ರೇಕ್ಷಕರು ಪಾರ್ಟ್-2 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.


Click it and Unblock the Notifications











