'ಜೀರೋ' ಎದುರು 'ಕೆಜಿಎಫ್' ಬರ್ತಿರೋದಕ್ಕೆ ಕಾರಣ ಕೊಟ್ಟ ರಾಕಿಂಗ್ ಸ್ಟಾರ್

Recommended Video

KGF Kannada Movie : ಕೆಜಿಎಫ್ ಸಿನಿಮಾ ಹಾಗು ಜೀರೋ ಹಿಂದಿ ಸಿನಿಮಾ ರಿಲೀಸ್ ಬಗೆಗಿನ ಗೊಂದಲಕ್ಕೆ ಯಶ್ ಉತ್ತರ

ಸುಮಾರು ಮೂರು ವರ್ಷದಿಂದ ಮೇಕಿಂಗ್. ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ಡೆಡಿಕೇಷನ್, ಟೆಕ್ನಿಷಿಯನ್ ಗಳ ಹಾರ್ಡ್ ವರ್ಕ್, ನಿರ್ಮಾಪಕರ ಧೈರ್ಯ, ಕಲಾವಿದರ ಉತ್ಸಾಹ ಹೀಗೆ ಇವರೆಲ್ಲರೂ ಸೇರಿ ಕೆಜಿಎಫ್ ಎಂಬ ಮಹಾ ಸಿನಿಮಾ ನಿರ್ಮಾಣವಾಗಿದೆ. ಹೀಗಾಗಿ, ಸಿನಿಮಾ ಅಷ್ಟೊಂದು ದುಬಾರಿ, ಹಾಗೂ ಅಷ್ಟೊಂದು ಸದ್ದು ಮಾಡಲು ಕಾರಣವಾಗಿದೆ.

ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು ಕೆಜಿಎಫ್ ಸೌಂಡ್ ಮಾಡಲು ಮತ್ತೊಂದು ಪ್ರಮುಖ ಕಾರಣ. ಉಳಿದ ಭಾಷೆಗೆ ಹೋಲಿಸಿಕೊಂಡರೇ ಬಾಲಿವುಡ್ ನಲ್ಲಿ ಕೆಜಿಎಫ್ ಗೆ ಪ್ರತಿಷ್ಠೆಯಾಗಿದೆ. ಯಾಕಂದ್ರೆ, ಕೆಜಿಎಫ್ ಬಿಡುಗಡೆ ದಿನವೇ ಶಾರೂಖ್ ಖಾನ್ ಅಭಿನಯದ 'ಜೀರೋ'' ತೆರೆಕಾಣುತ್ತಿದೆ.

ಬಿಟೌನ್ ಮಂದಿ ಇದರಿಂದ ಸ್ವಲ್ಪ ಅಚ್ಚರಿಯಿಂದ ನೋಡುತ್ತಿದ್ದಾರೆ. ಕಿಂಗ್ ಖಾನ್ ಎದುರು ಕೆಜಿಎಫ್ ಸಿನಿಮಾ ಯಾಕೆ ತರ್ತಿದ್ದಾರೆ ಎಂದು ಲೆಕ್ಕಾಚಾರ ಹಾಕ್ತಿದ್ದಾರೆ. ಈ ಬಗ್ಗೆ ಯಶ್ ಮಾತನಾಡಿದ್ದಾರೆ. ಶಾರೂಖ್ ಸಿನಿಮಾ ಎದುರು ಕೆಜಿಎಫ್ ಯಾಕೆ ಎಂದು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ.....

ನಾನೊಬ್ಬ ಶಾರೂಖ್ ಅಭಿಮಾನಿ

ನಾನೊಬ್ಬ ಶಾರೂಖ್ ಅಭಿಮಾನಿ

'ನಾನು ಕೂಡ ಶಾರೂಖ್ ಖಾನ್ ಅವರ ಅಭಿಮಾನಿ. ಅವರ ಸಿನಿಮಾಗಳನ್ನ ನೋಡಿದ್ದೇನೆ, ಅವರ ಸಿನಿಮಾಗಳು ನಮಗೆ ಸ್ಫೂರ್ತಿ' ಎಂದು ಹೇಳಿದ ಯಶ್, ಜೀರೋ ಚಿತ್ರ ನಮ್ಮ ಟಾರ್ಗೆಟ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು 'ಒಂದೇ ದಿನ ಎರಡು ಸಿನಿಮಾ ಬರಬಾರದು ಎಂದು ನಿಯಮವಿಲ್ಲವಲ್ಲ' ಎಂದು ಪ್ರಶ್ನಿಸಿದ್ದಾರೆ.

ಹಿಂದಿಯಲ್ಲಿ ಕಾಂಪಿಟೇಶನ್ ಹೆಚ್ಚಿದೆ

ಹಿಂದಿಯಲ್ಲಿ ಕಾಂಪಿಟೇಶನ್ ಹೆಚ್ಚಿದೆ

'ನಾವು ಯಾವುದೇ ಉದ್ದೇಶದಿಂದ ದಿನಾಂಕ ಘೋಷಣೆ ಮಾಡಿಲ್ಲ. ಐದು ಭಾಷೆಗೂ ಸೂಕ್ತವಾದ ದಿನಾಂಕವನ್ನ ನಿರ್ಧರಿಸಿದ್ದೇವೆ. ಹಿಂದಿಯಲ್ಲಿ ಸ್ವಲ್ಪ ಜಾಸ್ತಿಯೇ ಕಾಂಪಿಟೇಶನ್ ಇದೆ. ಎರಡೂ ಸಿನಿಮಾಗಳು ಚೆನ್ನಾಗಿದ್ರೆ, ಎರಡೂ ಚಿತ್ರವನ್ನ ನೋಡ್ತಾರೆ' ಎಂದು ರಾಕಿಂಗ್ ಉತ್ತರ ನೀಡಿದ್ರು.

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸದ್ದು ಮಾಡ್ಬೇಕು

ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸದ್ದು ಮಾಡ್ಬೇಕು

'ಈ ಹಿಂದೆ ನಿರ್ಧಾರ ಮಾಡಿದಂತೆ ಕೆಜಿಎಫ್ ಸಿನಿಮಾ ನವೆಂಬರ್ ಗೆ ಬರಬೇಕಿತ್ತು. ಆದ್ರೆ, ಹಿಂದಿಯಲ್ಲಿ ವಿತರಣೆ ಮಾಡುತ್ತಿರುವ ವಿತರಕರು ಮತ್ತಷ್ಟು ಸಮಯವಕಾಶ ಕೇಳಿದ್ರು. ಕನ್ನಡ ಚಿತ್ರರಂಗದ ಹಿರಿಮೆಯನ್ನ ಭಾರತದಲ್ಲಿ ಹೆಚ್ಚಿಸಬೇಕು ಎಂಬುದು ನಮ್ಮ ಆಸೆ. ಹಾಗಾಗಿ, ಎಲ್ಲ ವಿತರಕರಿಗೆ ಸೂಕ್ತವೆನಿಸುವ ದಿನಾಂಕವನ್ನ ನಿಗಧಿ ಮಾಡಿದ್ದೀವಿ' ಎಂದರು ಯಶ್.

ಶಾರೂಖ್ ಸೋತು, ಯಶ್ ಗೆದ್ರೆ.?

ಶಾರೂಖ್ ಸೋತು, ಯಶ್ ಗೆದ್ರೆ.?

ಶಾರೂಖ್ ಖಾನ್ ಅಭಿನಯದ 'ಜೀರೋ' ದೊಡ್ಡ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕುಬ್ಜನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಾರೂಖ್ ಮೇಲೆ ಅತಿಯಾದ ಭರವಸೆ ಇದೆ. ಹೀಗಾಗಿ, ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಎಂಬ ಮಾತಿದೆ. ಒಂದು ವೇಳೆ ಜೀರೋ ಫ್ಲಾಪ್ ಆಗಿ, ಕೆಜಿಎಫ್ ಹಿಟ್ ಆದ್ರೆ, ಯಶ್ ಹವಾ ಬಾಲಿವುಡ್ ನಲ್ಲಿ ರಾಕೆಟ್ ವೇಗದಲ್ಲಿ ಹೋಗುತ್ತೆ.

More from Filmibeat

English summary
Kannada actor yash has spoke about clash with shahrukh khan's zero.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X