'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಪಾತ್ರದ ಗುಟ್ಟು ರಟ್ಟು? ಪೋಸ್ಟರ್ ನೋಡಿ ಕಂಡುಹಿಡಿದುಬಿಟ್ರು ಫ್ಯಾನ್ಸ್

ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 15 ದಿನ ಬಾಕಿಯಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಶುರುವಾಗಿದೆ. ಟೀಸರ್‌ ಬಳಿಕ ಫಸ್ಟ್ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ಅಣಿಯಾಗಿದೆ. ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅದ್ವಾನಿ, ಹುಮಾ ಖುರೇಶಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ನಟಿಸಿರುವುದು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇರುವುದು ಗೊತ್ತಾಗುತ್ತಿದೆ.

ಚಿತ್ರದಲ್ಲಿ ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರಗಳಲ್ಲಿ ಯಶ್ ನಟಿಸಿದ್ದಾರೆ. ರಾಯನಿಗೆ ಜೋಡಿ ನಾಡಿಯಾ ಆಗಿ ಕಿಯಾರಾ ಅದ್ವಾನಿ ನಟಿಸಿದ್ದಾರೆ. 60-70ರ ದಶಕದ ಕಾಲಘಟ್ಟದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗ್ತಿದೆ. ಈಗಾಗಲೇ ಟೀಸರ್‌ಗಳಲ್ಲಿ ಅದರ ಸುಳಿವು ಸಿಕ್ಕಿದೆ. ಇನ್ನು ಚಿತ್ರದಲ್ಲಿ ರಾಯಲ್ ಸರ್ಕಸ್ ಪ್ರಮುಖ ಪಾತ್ರ ವಹಿಸಿದೆ. ಆ ಸರ್ಕಸ್‌ನಲ್ಲಿ ಸಾಹಸಮಯ ಪ್ರದರ್ಶನ ನೀಡುವ ಕಲಾವಿದೆ ನಾಡಿಯಾ ಆಗಿ ಕಿಯಾರಾ ಅದ್ವಾನಿ ನಟಿಸಿರುವುದು ಗೊತ್ತಾಗುತ್ತಿದೆ.

Yash Kiara Advani s Toxic Tabaahi glimpse hints that the actress playing a blind character

'ಟಾಕ್ಸಿಕ್' ಸಿನಿಮಾ ಮೂಲಕ ಕಿಯಾರಾ ಚಂದನವನಕ್ಕೆ ಪರಿಚಿತರಾಗುತ್ತಿದ್ದಾರೆ. ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ. ಸಾಕಷ್ಟು ತಯಾರಿ ನಡೆಸಿ ಈ ಪಾತ್ರದಲ್ಲಿ ಮಿಂಚಿದ್ದಾರೆ. ಟೀಸರ್‌ಗಳಲ್ಲಿ ಆಕೆಯ ದರ್ಶನ ಆಗಿಲ್ಲ. ಆದರೆ ಟ್ರೈಲರ್‌ನಲ್ಲಿ ಕಂಡಿತ ನಾಡಿಯಾ ಪಾತ್ರದ ಝಲಕ್ ಸಿಗಲಿದೆ. ಇನ್ನು ಚಿತ್ರದ 'ತಬಾಹಿ' ಸಾಂಗ್ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶಾಲ್ ಮಿಶ್ರಾ ಈ ಸಾಂಗ್ ಕಂಪೋಸ್ ಮಾಡಿ ಹಾಡಿದ್ದಾರೆ.

ರಾಯ ಹಾಗೂ ನಾಡಿಯಾ ನಡುವಿನ ರೊಮ್ಯಾಂಟಿಕ್ ಸಾಂಗ್ ಇದು. ಬೀಚ್‌ನಲ್ಲಿ ಯಶ್, ಕಿಯಾರಾ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಂಗ್ ಪೋಸ್ಟರ್‌ಗಳು ವೈರಲ್ ಆಗುತ್ತಿದೆ. ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸುತ್ತಾ ಕಿಯಾರಾರನ್ನು ಯಶ್ ಎದೆಗಪ್ಪಿಕೊಂಡು ಸುತ್ತಾಡುತ್ತಿರುವ ಪೋಸ್ಟರ್ ವೈರಲ್ ಆಗುತ್ತಿದೆ. ಅದರ ಬೆನ್ನಲ್ಲೇ ಕಿಯಾರ ಎದೆಗೆ ಒರಗಿ ಕೂತಿರುವ ಯಶ್ ಪೋಸ್ಟರ್ ಕೂಡ ಹೊರಬಂದು ಗಮನ ಸೆಳೆಯುತ್ತಿದೆ. ಈ ಫೋಟೊ ನೋಡಿ ಕಿಯಾರಾ ಮಾಡುತ್ತಿರುವ ನಾಡಿಯಾ ಪಾತ್ರದ ಬಗ್ಗೆ ಒಂದು ಸೀಕ್ರೆಟ್ ರಿವೀಲ್ ಆದಂತೆ ಕಾಣುತ್ತಿದೆ. ಅಭಿಮಾನಿಗಳು ಕಂಡುಹಿಡಿದುಬಿಟ್ಟಿದ್ದಾರೆ. ಅದು ಎಷ್ಟು ನಿಜ ಎನ್ನುವುದು ಸಿನಿಮಾ ಬಿಡುಗಡೆ ಬಳಿಕ ಗೊತ್ತಾಗಲಿದೆ.

Yash Kiara Advani s Toxic Tabaahi glimpse hints that the actress playing a blind character

'ಟಾಕ್ಸಿಕ್' ಚಿತ್ರದಲ್ಲಿ ಕಿಯಾರಾ ಅದ್ವಾನಿ ಅಂಧ ಯುವತಿ ಪಾತ್ರದಲ್ಲಿ ನಟಿಸುತ್ತಿರುವಂತೆ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೀತಿದೆ. ಈ ಹಿಂದೆ ನಾಡಿಯಾ ಪಾತ್ರ ಪರಿಚಯಿಸಿ ಬಿಟ್ಟಿದ್ದ ಪೋಸ್ಟರ್ ಹಾಗೂ ಈಗ ಬಂದಿರುವ 'ತಬಾಹಿ' ಸಾಂಗ್ ಫೋಟೊದಲ್ಲಿ ಕಿಯಾರಾ ಕಣ್ಣುಗಳನ್ನು ಗಮನಿಸಿದರೆ ಈ ಬಗ್ಗೆ ಸುಳಿವು ಸಿಗುತ್ತಿದೆ. ಸಿನಿಮಾಗಳಲ್ಲಿ ವಿಶೇಷ ಚೇತನ ಪಾತ್ರಗಳನ್ನು ಸೃಷ್ಟಿಸುವುದು ಹೊಸದೇನು ಅಲ್ಲ. 'ಟಾಕ್ಸಿಕ್' ಚಿತ್ರದಲ್ಲಿ ಕೂಡ ಇಂತಾದೊಂದು ಪ್ರಯತ್ನ ಮಾಡಿದಂತೆ ಕಾಣುತ್ತಿದೆ. ನಟ, ನಟಿಯರಿಗೆ ಇದು ನಿಜಕ್ಕೂ ಸವಾಲಿನ ಪಾತ್ರವೇ ಸರಿ.

ನಾಡಿಯಾ ಪಾತ್ರದ ಪರಿಚಯದ ಪೋಸ್ಟರ್ ಬಿಟ್ಟಾಗ ಕಿಯಾರಾ ಪೋಸ್ಟ್ ವೈರಲ್ ಆಗಿತ್ತು. "ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ನನ್ನಿಂದ ಹೆಚ್ಚಿನದನ್ನು ಬೇಡಿದ ಪಾತ್ರ. ಪರಿವರ್ತನೆಗಿಂತ ಕಡಿಮೆ ಏನನ್ನೂ ಅನುಭವಿಸಲಿಲ್ಲ. ಈ ಪಾತ್ರಕ್ಕಾಗಿ ಕಠಿಣ ಪರಿಶ್ರಮ ಪಟ್ಟಿದ್ದೀನಿ. ಫಸ್ಟ್ ಲುಕ್ ಪೋಸ್ಟರ್‌ಗೆ ಇಷ್ಟೊಂದು ಪ್ರೀತಿ ಸಿಗುವುದನ್ನು ನೋಡುವುದೇ ಖುಷಿ. ಪದಗಳಿಗೆ ಮೀರಿದ ಕೃತಜ್ಞತೆ" ಎಂದು ಬರೆದುಕೊಂಡಿದ್ದರು.

ಇನ್ನು 'ಟಾಕ್ಸಿಕ್' ಚಿತ್ರದಲ್ಲಿ ನಟಿಸೋಕೆ ಕಿಯಾರಾ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಚಿತ್ರದಲ್ಲಿ ಆಕೆಯ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುವುದು ಗೊತ್ತಾಗುತ್ತಿದೆ. ಮಾರ್ಚ್ 19ಕ್ಕೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

More from Filmibeat

Read more about: toxic yash kiara advani
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X