For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಪತ್ನಿ ರಾಧಿಕಾಗೆ ಮುತ್ತಿಟ್ಟ ಯಶ್: ಫೊಟೊ ವೈರಲ್

  |

  ನಟ ಯಶ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಸತತ ಐದು ವರ್ಷದ ಶ್ರಮ ದೊಡ್ಡ ಪ್ರತಿಫಲವನ್ನೇ ನೀಡಿದೆ. ಐದು ವರ್ಷಗಳಿಗೂ ಹೆಚ್ಚು ಕಾಲ ಅವರು ತಮ್ಮನ್ನು 'ಕೆಜಿಎಫ್' ಸಿನಿಮಾ ಸರಣಿಯಲ್ಲಿ ತೊಡಗಿಸಿಕೊಂಡಿದ್ದರು, ಸಿನಿಮಾ ಈಗ ಬಹುದೊಡ್ಡ ಹಿಟ್ ಆಗಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದೆ.

  ಯಶ್‌ ಶ್ರಮದ ಹಿಂದೆ ಪತ್ನಿ ರಾಧಿಕಾರ ತ್ಯಾಗವೂ ಇದೆ. ಯಶ್ ಸಿನಿಮಾ ಚಿತ್ರೀಕರಣದಲ್ಲಿ ಹಗಲು-ರಾತ್ರಿ ಬ್ಯುಸಿಯಾಗಿದ್ದಾಗ ಕುಟುಂಬವನ್ನು ತೂಗಿಸಿಕೊಂಡು ಹೋಗಿದ್ದು, ಯಶ್‌ರ ಗಮನ ಸಿನಿಮಾದಿಂದ ಹೊರಗೆ ಹೋಗದಂತೆ ಕಾಪಾಡುವಲ್ಲಿ ಪತ್ನಿಯ ಪಾತ್ರ ಹಿರಿದು.

  ಅದಕ್ಕೆಂದೇ ಕೆಜಿಎಫ್ 2 ಸಿನಿಮಾ ಬಿಡುಗಡೆ ಆದ ಕೂಡಲೇ ಕುಟುಂಬವನ್ನು ಪ್ರವಾಸಕ್ಕೆ ಕರೆದೊಯ್ದರು ಯಶ್. ಇದೀಗ 'ಕೆಜಿಎಫ್ 2' ಸಿನಿಮಾ ದೊಡ್ಡ ಹಿಟ್ ಆದ ಬೆನ್ನಲ್ಲೆ ಚಿತ್ರತಂಡ ಸತತ ಪಾರ್ಟಿಗಳನ್ನು ಮಾಡುತ್ತಿದ್ದು, ಯಶ್, ತಮ್ಮ ಕುಟುಂಬವನ್ನು ಪಾರ್ಟಿಗಳಿಗೆ ಕರೆದೊಯ್ದು ಖುಷಿಯ ಕ್ಷಣಗಳಲ್ಲಿ ಭಾಗಿಯಾಗುವಂತೆ ಮಾಡುತ್ತಿದ್ದಾರೆ.

  ಯಶ್, ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು ಅವರುಗಳು ಒಟ್ಟಿಗೆ ಪಾರ್ಟಿಯಲ್ಲಿ ಪರಸ್ಪರ ಖುಷಿ ಹಂಚಿಕೊಳ್ಳುತ್ತಿರುವ ಚಿತ್ರಗಳು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದವು. ಇದೀಗ ಯಶ್, ಪತ್ನಿ ರಾಧಿಕಾ ಪಂಡಿತ್‌ಗೆ ಮುತ್ತು ಕೊಡುತ್ತಿರುವ ಚಿತ್ರ ವೈರಲ್ ಆಗಿದೆ.

  ಗೋವಾದ ಕಡಲ ತೀರದಲ್ಲಿ ನಟ ಯಶ್ ತಮ್ಮ ಮುದ್ದಿನ ಪತ್ನಿಯನ್ನು ತಬ್ಬಿಕೊಂಡು ಕೆನ್ನೆಗೆ ಸಿಹಿ ಮುತ್ತು ಕೊಡುತ್ತಿರುವ ಚಿತ್ರ ವೈರಲ್ ಆಗಿದ್ದು, ಯಶ್ ತಮ್ಮ ಪತ್ನಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ. ಚಿತ್ರಗಳನ್ನು ರಾಧಿಕಾ ಪಂಡಿತ್‌ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ಯಶ್ ದೊಡ್ಡ ಸ್ಟಾರ್ ಆಗಿ, ಚಿತ್ರರಂಗದ ಬಣ್ಣದ ಲೋಕದಲ್ಲಿ ಮಿನುಗುವ ತಾರೆಯಾಗಿದ್ದರೂ ಸಹ ಪಕ್ಕಾ ಕೌಟುಂಬಿಕ ಮನುಷ್ಯ. ಯಶ್ ಅವರೇ ಒಮ್ಮೆ ಹೇಳಿಕೊಂಡಿದ್ದಂತೆ, ಚಿತ್ರೀಕರಣ ಇಲ್ಲದ ಸಮಯದಲ್ಲಿ ತಮ್ಮ ಮನೆಯಲ್ಲಿ ಕುಟುಂಬದ ಜೊತೆ ಕಾಲ ಕಳೆಯುವುದು ಅವರಿಗೆ ಬಹಳ ಇಷ್ಟವಂತೆ. ಯಾವುದೇ ಹಬ್ಬ-ಹರಿದಿನಗಳಾದರೂ ಕುಟುಂಬದ ಜೊತೆ ಸಂಪ್ರದಾಯಬದ್ಧವಾಗಿ ಆಚರಣೆ ಮಾಡುತ್ತಾರೆ ಯಶ್. ಕಳೆದ ಯುಗಾದಿ ಹಬ್ಬದಂದು ಯಶ್, ಪತ್ನಿ ಹಾಗೂ ಮಕ್ಕಳೊಡನೆ ನೆಲದ ಮೇಲೆ ಕೂತು ಬಾಳೆ ಎಲೆಯಲ್ಲಿ ಹೋಳಿಗೆ ತಿನ್ನುತ್ತಿದ್ದ ಚಿತ್ರ ಸಖತ್ ವೈರಲ್ ಆಗಿತ್ತು.

  ಇನ್ನು ಯಶ್ ಹಾಗೂ ರಾಧಿಕಾ ಪರಸ್ಪರ ಪ್ರೀತಿಸಿ ಮದುವೆಯಾದವರು. 'ನಂದಗೋಕುಲ' ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದರು. ಬಳಿಕ 'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಇಬ್ಬರೂ ಒಟ್ಟಿಗೆ ಸಿನಿಮಾ ರಂಗ ಪ್ರವೇಶಿಸಿದರು. ಆ ನಂತರ ಇಬ್ಬರೂ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯಾಗಿ ಗುರುತಿಸಿಕೊಂಡರು. ಬಹುವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2016 ರ ಡಿಸೆಂಬರ್ 09 ರಂದು ಅದ್ಧೂರಿಯಾಗಿ ವಿವಾಹವಾದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಕನ್ನಡ ಚಿತ್ರರಂಗದ ಬಲು ಕ್ಯೂಟ್ ಕುಟುಂಬ ಇವರದ್ದು.

  English summary
  Yash kisses his wife Radhika Pandit. Photo went viral on social media. Both are cute couple of Sandalwood. Yash is a perfect family man.
  Wednesday, April 27, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X