ರಾಕಿ ಭಾಯ್ ಜೊತೆ 'ಅಧೀರ' ಸಂಜಯ್ ದತ್ ಪ್ರತ್ಯಕ್ಷ
Recommended Video
ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸುತ್ತಿದ್ದಾರೆ. ಮೊದಲ ಅಧ್ಯಾಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಅಧೀರನ ಪಾತ್ರದಲ್ಲಿ ಖಳನಾಯಕ್ ಬಣ್ಣ ಹಚ್ಚಿದ್ದಾರೆ.
ಈಗಾಗಲೇ ಕೆಜಿಎಫ್ ಚಿತ್ರತಂಡ ಸೇರಿಕೊಂಡಿರುವ ಸಂಜಯ್ ದತ್ ಚಿತ್ರೀಕರಣ ಆರಂಭಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಅವರು ಜೊತೆಯಿದ್ದ ಫೋಟೋ ವೈರಲ್ ಆಗಿತ್ತು.
ಈಗ ಸಂಜಯ್ ದತ್ ಅವರ ಇನ್ನೊಂದು ಫೋಟೋ ಕಣ್ಣಿಗೆ ಬಿದ್ದಿದೆ. ಈ ಸಲ ರಾಕಿ ಭಾಯ್ ಜೊತೆ ಅಧೀರ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಅಧೀರ ಪ್ರಮುಖ ಭಾಗವಾಗಿದ್ದು, ಅದಕ್ಕಾಗಿ ಸಂಜಯ್ ದತ್ ಅವರನ್ನ ಕರೆತರಲಾಗಿದೆ.

ಸಂಜಯ್ ದತ್ ಕೂಡ ಕೆಜಿಎಫ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾದ ಮೇಕಿಂಗ್ ಬಗ್ಗೆ ಥ್ರಿಲ್ ಆಗಿದ್ದರು. ಅಧೀರನ ಪಾತ್ರದ ಕುರಿತು ಕೇಳಿ ಅಚ್ಚರಿ ವ್ಯಕ್ತಪಡಿಸಿದ್ದರು. ಅಧೀರ ತುಂಬಾ ಇಷ್ಟ ಆದ ಕಾರಣ ಈ ಪಾತ್ರ ಮಾಡಲು ಮುಂದಾಗಿದ್ದೇನೆ ಎಂದು ಸ್ವತಃ ದತ್ ಹೇಳಿಕೊಂಡಿದ್ದರು.
ಯಶ್ ಎದುರು ಸಂಜತ್ ದತ್ ಅಬ್ಬರಿಸಲಿದ್ದು, ಇವರಿಬ್ಬರ ಜುಗಲ್ ಬಂಧಿ ನೋಡಲು ಸ್ಯಾಂಡಲ್ ವುಡ್ ಪ್ರೇಕ್ಷಕರು ಕಾಯುತ್ತಿದ್ದಾರೆ. ಇನ್ನುಳಿದಂತೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿದ ಭಾಗದಲ್ಲೂ ಉಳಿದುಕೊಳ್ಳಲಿದೆ. ಇನ್ನೊಂದು ವಿಶೇಷ ಪಾತ್ರದಲ್ಲಿ ರವೀನಾ ಟಂಡನ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದು ಇನ್ನು ಖಚಿತವಾಗಿಲ್ಲ.
ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ವಿಜಯ್ ಕಿರಗಂದೂರ್ ನಿರ್ಮಿಸಲಿದ್ದಾರೆ. ರವಿ ಬಸ್ರೂರು ಸಂಗೀತವಿದೆ. ಭುವನ್ ಗೌಡ ಛಾಯಾಗ್ರಹಣವಿದೆ. ಮುಂದಿನ ವರ್ಷದ ಮಧ್ಯದಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











