For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್'ಗೆ ಪ್ರಭಾಸ್ ವಿಶ್: ಒಟ್ಟಿಗೆ ಕಾಣಿಸಿದ ನ್ಯಾಷನಲ್ ಸ್ಟಾರ್ಸ್

  |
  ನೆನ್ನೆ ರಾತ್ರಿ ಮುಂಬೈ ನಲ್ಲಿ ಪ್ರಭಾಸ್ ರನ್ನ ಭೇಟಿ ಮಾಡಿದ ಯಶ್ | FILMIBEAT KANNADA

  ಸೌತ್ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಈಗ ದೇಶದೆಲ್ಲಡೆ ಕೇಳಿ ಬರುತ್ತಿರುವ ಹೆಸರು 'ಕೆ ಜಿ ಎಫ್'. ಈ ಅದ್ಭುತ ಸಿನಿಮಾದ ಮೂಲಕ ಕನ್ನಡ ನಟ ಯಶ್ ಭಾರತದಾದ್ಯಂತ ಹೆಸರು ಮಾಡುತ್ತಿದ್ದಾರೆ. ರಾಜಾಹುಲಿ ಈಗ ನ್ಯಾಷನಲ್ ಸ್ಟಾರ್ ಆಗಿದ್ದಾರೆ.

  ಯಶ್ ರೀತಿಯೇ 'ಬಾಹುಬಲಿ' ಸಿನಿಮಾ ಬಂದಾಗ ನಟ ಪ್ರಭಾಸ್ ಸಹ ಬಾಲಿವುಡ್ ವರೆಗೆ ತಮ್ಮ ಪ್ರಭಾವ ಬೀರಿದ್ದರು. ಟಾಲಿವುಡ್ ನಿಂದ ಬಂದು ನ್ಯಾಷನಲ್ ಸ್ಟಾರ್ ಆದರು. ಈಗ ಯಶ್ ಕೂಡ ಅದೇ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದ್ದಾರೆ.

  ಅಂದು ಬಂದಿದ್ದು ಸುಳ್ಳು, ಇಂದು ಹೇಳ್ತಿರೋದು ನಿಜ: ರಾಜಮೌಳಿ ಜೊತೆ ಯಶ್.!

  ಇನ್ನು ಕಾರಣಕ್ಕೋ ಏನೇ ಯಶ್ ರನ್ನ ಎರಡನೇ ಪ್ರಭಾಸ್ ಎಂದು ಕೆಲವು ಮಾಧ್ಯಮಗಳು ಕರೆದಿದ್ದವು. ಆದರೆ, ಇದೀಗ ಸೌತ್ ಸರದಾರರಾದ ಯಶ್ ಹಾಗೂ ಪ್ರಭಾಸ್ ಭೇಟಿ ಮಾಡಿದ್ದಾರೆ. 'ಕೆ ಜಿ ಎಫ್' ಸಿನಿಮಾಗೆ ಪ್ರಭಾಸ್ ಶುಭ ಹಾರೈಸಿದ್ದಾರೆ. ಮುಂದೆ ಓದಿ...

  ಯಶ್ - ಪ್ರಭಾಸ್ ಭೇಟಿ

  ಯಶ್ - ಪ್ರಭಾಸ್ ಭೇಟಿ

  ರಾಕಿಂಗ್ ಸ್ಟಾರ್ ಯಶ್ ಟಾಲಿವುಡ್ ನ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ರನ್ನು ಭೇಟಿ ಮಾಡಿದ್ದಾರೆ. ನಿನ್ನೆ ರಾತ್ರಿ ಮುಂಬೈನಲ್ಲಿ ಪ್ರಭಾಸ್ ರನ್ನ ಯಶ್ ಮೀಟ್ ಮಾಡಿದ್ದು, ಜೊತೆಗೆ ಊಟ ಮಾಡಿ ಕೆಲ ಕಾಲ ಸಿನಿಮಾಗಳ ಬಗ್ಗೆ ಮಾತುಕತೆ ಮಾಡಿದ್ದಾರೆ. 'ಕೆಜಿಎಫ್' ಬಗ್ಗೆ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದಾರೆ.

  'ಕೆಜಿಎಫ್' ಡೈಲಾಗ್ ಗಳ ಪಟ್ಟಿ : ಗಾಯಗೊಂಡಿರೋ ಸಿಂಹದ ಸಂಭಾಷಣೆಗಳಿವು

  ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿ

  ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿ

  'ಕೆಜಿಎಫ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಾಳೆ (ಡಿಸೆಂಬರ್ 9) ರಂದು ನಡೆಯಲಿದೆ. ಹೈದರಾಬಾದ್ ನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬರುವಂತೆ ಪ್ರಭಾಸ್ ರನ್ನ ಯಶ್ ಆಹ್ವಾನ ಮಾಡಿದ್ದಾರೆ. ವಿಶೇಷ ಅಂದರೆ, ನಿರ್ದೇಶಕ ರಾಜಮೌಳಿ ಸಹ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುತ್ತಿದ್ದಾರೆ.

  ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್

  ತೆಲುಗಿನಲ್ಲಿ 'ಕೆಜಿಎಫ್' ಕ್ರೇಜ್

  ತೆಲುಗಿನಲ್ಲಿ 'ಕೆಜಿಎಫ್' ಕ್ರೇಜ್

  ಕನ್ನಡವನ್ನು ಹೊರತು ಪಡಿಸಿದರೆ 'ಕೆಜಿಎಫ್' ಕ್ರೇಜ್ ತೆಲುಗಿನಲ್ಲಿ ಜೋರಾಗಿದೆ. ಸಿನಿಮಾದ ಎರಡೂ ಟ್ರೇಲರ್ ಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ತೆಲುಗು ಮಾಧ್ಯಮಗಳಲ್ಲಿ 'ಕೆಜಿಎಫ್' ಕಂಗೊಳಿಸುತ್ತಿದೆ. ಮಾಸ್ ಸಿನಿಮಾವನ್ನು ಇಷ್ಟ ಪಡುವ ಟಾಲಿವುಡ್ ಮಂದಿ 'ಕೆಜಿಎಫ್' ಚಿತ್ರಕ್ಕಾಗಿ ನಿರೀಕ್ಷೆ ಇಟ್ಟು ಕಾಯುತ್ತಿದ್ದಾರೆ.

  ಎರಡನೇ ಪ್ರಭಾಸ್ ಅಲ್ಲ

  ಎರಡನೇ ಪ್ರಭಾಸ್ ಅಲ್ಲ

  ಈ ಹಿಂದೆ ಯಶ್ ಅನ್ನ ಎರಡನೇ ಪ್ರಭಾಸ್ ಎಂದು ಕೆಲವು ಮಾಧ್ಯಮಗಳ ಕರೆದಿದ್ದವು. ಈ ಬಗ್ಗೆ ಮಾತನಾಡಿದ್ದ ಯಶ್ ''ನಾನು ಎರಡನೇ ಪ್ರಭಾಸ್ ಅಲ್ಲ, ಮೊದಲನೆಯ ಯಶ್'' ಎಂದು ನಗುತ್ತ ಉತ್ತರ ನೀಡಿದ್ದರು. ಈಗ ಯಶ್ ಕಾರ್ಯಕ್ರಮಕ್ಕೆ ಪ್ರಭಾಸ್ ಅತಿಥಿ ಆಗಿದ್ದಾರೆ.

  ಸೆನ್ಸಾರ್ ನಲ್ಲಿ ಪಾಸ್

  ಸೆನ್ಸಾರ್ ನಲ್ಲಿ ಪಾಸ್

  ಇನ್ನು 'ಕೆಜಿಎಫ್' ಸಿನಿಮಾದ ಸೆನ್ಸಾರ್ ಮುಗಿದಿದೆ. ಯು ಎ ಪ್ರಮಾಣ ಪತ್ರ ಪಡೆದಿರುವ 'ಕೆಜಿಎಫ್' ಸೆನ್ಸಾರ್ ನಲ್ಲಿಯೂ ಗೆದ್ದಿದೆ. ಯಾವುದೇ ಕಟ್ ಇಲ್ಲದೆ ಯು ಎ ಸರ್ಟಿಫಿಕೇಟ್ ಅನ್ನು ಚಿತ್ರಕ್ಕೆ ನೀಡಲಾಗಿದೆ. ಸಿನಿಮಾ ಇದೇ ತಿಂಗಳ 21 ರಂದು ಐದು ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.

  English summary
  Kannada actor Yash met actor Prabhas in Mumbai last night (December 7th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X