For Quick Alerts
  ALLOW NOTIFICATIONS  
  For Daily Alerts

  ಫಾರ್ಮುಲಾ ಕಾರು ರೇಸರ್ ಜೊತೆ ನಟ ಯಶ್: ಯಾರು ಈ ಹ್ಯಾಮಿಲ್ಟನ್?

  |

  ನಟ ಯಶ್‌ ನಡೆಗಳು ಅಭಿಮಾನಿಗಳಲ್ಲಿ, ಸಿನಿ ಪ್ರೀಯರಲ್ಲಿ ಕುತೂಹಲ ಮೂಡಿಸುತ್ತಿವೆ. ಯಶ್ ಮುಂದಿನ ಸಿನಿಮಾ ಯಾವುದಾಗಿರಲಿದೆ ಎಂಬ ಕುತೂಹಲ ಮನೆ ಮಾಡಿರುವ ಬೆನ್ನಲ್ಲೆ ಯಶ್‌ ಹಾಲಿವುಡ್‌ನ ಖ್ಯಾತನಾಮರನ್ನು ಭೇಟಿ ಮಾಡುತ್ತಿರುವುದು ಸಣ್ಣ ಅನುಮಾನವನ್ನು ಹುಟ್ಟಿಸುತ್ತಿದೆ.

  ಯಶ್, ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿ ಒಬ್ಬರಾದ ಮೇಲೊಬ್ಬ ಖ್ಯಾತನಾಮರನ್ನು ಭೇಟಿ ಮಾಡುತ್ತಿದ್ದಾರೆ. ಈ ಭೇಟಿ ಕೇವಲ ಔಪಚಾರಿಕವೇ ಅಥವಾ ಯಶ್‌ರ ಮುಂದಿನ ಸಿನಿಮಾಕ್ಕೂ ಈ ಖ್ಯಾತನಾಮರಿಗೂ ಸಂಬಂಧವಿದೆಯೇ ಎಂಬ ಅನುಮಾನ ಮೂಡಿದೆ.

  ಕೆಲವು ದಿನಗಳ ಹಿಂದಷ್ಟೆ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ಕೊರಿಯೋಗ್ರಾಫರ್ ಜೆಜೆ ಪೆರ್ರಿಯನ್ನು ಭೇಟಿ ಮಾಡಿದ್ದರು. ಅಲ್ಲದೆ, ಶೂಟಿಂಗ್ ಯಾರ್ಡ್‌ ಒಂದರಲ್ಲಿ ಗನ್ ಶೂಟಿಂಗ್ ಮಾಡುತ್ತಾ ತಮ್ಮ ಗುರಿ, ವೇಗ, ನಿಖರತೆಗಳನ್ನು ಒರೆಗೆ ಹಚ್ಚಿದ್ದರು. ಜೆಜೆ ಪೆರ್ರಿಯಿಂದ ಪ್ರಶಂಸೆಗೂ ಕಾರಣರಾಗಿದ್ದರು. ಇದೀಗ ಮತ್ತೊಬ್ಬ ಖ್ಯಾತನಾಮರನ್ನು ಯಶ್ ಭೇಟಿ ಆಗಿದ್ದಾರೆ.

  ಜಗದ್ವಿಖ್ಯಾತ ರೇಸರ್ ಅನ್ನು ಭೇಟಿಯಾದ ಯಶ್

  ಜಗದ್ವಿಖ್ಯಾತ ರೇಸರ್ ಅನ್ನು ಭೇಟಿಯಾದ ಯಶ್

  ಫಾರ್ಮುಲಾ ಕಾರ್‌ ರೇಸಿಂಗ್‌ನ ದಂತಕತೆ ಎಂದೇ ಕರೆಯಲಾಗುವ ಲೀವಿಸ್ ಹ್ಯಾಮಿಲ್ಟನ್ ಜೊತೆ ನಟ ಯಶ್ ಕಾಣಿಸಿಕೊಂಡಿದ್ದಾರೆ. ಹ್ಯಾಮಿಲ್ಟನ್ ಅನ್ನು ಯಶ್ ಅಮೆರಿಕದ ಲಾಸ್ ಏಂಜಲ್ಸ್‌ನಲ್ಲಿ ಭೇಟಿಯಾಗಿದ್ದಾರೆ. ಆಪ್ತವಾಗಿ ಲೀವಿಸ್ ಹ್ಯಾಮಿಲ್ಟನ್ ಜೊತೆ ಯಶ್ ಫೋಟೊಕ್ಕೆ ಫೋಸು ನೀಡಿದ್ದು, ಚಿತ್ರದಲ್ಲಿ ಇನ್ನೂ ಇಬ್ಬರು ಯಶ್ ಹಾಗೂ ಲೀವಿಸ್ ಜೊತೆ ಇದ್ದಾರೆ.

  ಲೀವಿಸ್ ಹ್ಯಾಮಿಲ್ಟನ್ ಯಾರು?

  ಲೀವಿಸ್ ಹ್ಯಾಮಿಲ್ಟನ್ ಯಾರು?

  ಲೀವಿಸ್ ಹ್ಯಾಮಿಲ್ಟನ್ ಬ್ರಿಟನ್‌ನ ಫಾರ್ಮುಲಾ ಕಾರ್ ರೇಸರ್ ಆಗಿದ್ದು, ಮರ್ಸಿಡೀಸ್ ಪರವಾಗಿ ಫಾರ್ಮುಲಾ ರೇಸ್ ಮಾಡುತ್ತಾರೆ. ಜಗತ್ತಿನ ಅತ್ಯುತ್ತಮ ಫಾರ್ಮುಲಾ ರೇಸರ್‌ಗಳಲ್ಲಿ ಲೀವಿಸ್ ಹ್ಯಾಮಿಲ್ಟನ್ ಸಹ ಒಬ್ಬರು. ಹಲವು ಗೆಲುವುಗಳ ದಾಖಲೆಗಳು ಲೀವಿಸ್ ಹ್ಯಾಮಿಲ್ಟನ್ ಹೆಸರಿಗಿವೆ. ಈ ಫಾರ್ಮುಲಾ ರೇಸರ್‌ ಅನ್ನು ಯಶ್ ಭೇಟಿ ಆಗಿರುವುದು ಏಕೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ತಮ್ಮ ಮುಂದಿನ ಸಿನಿಮಾಕ್ಕೆ ತರಬೇತಿಯನ್ನೇನಾದರೂ ಪಡೆಯುತ್ತಿದ್ದಾರಾ ಯಶ್ ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

  ಹಾಲಿವುಡ್ ನಿರ್ದೇಶಕನನ್ನು ಭೇಟಿಯಾಗಿದ್ದರು

  ಹಾಲಿವುಡ್ ನಿರ್ದೇಶಕನನ್ನು ಭೇಟಿಯಾಗಿದ್ದರು

  ಕೆಲವು ದಿನಗಳ ಹಿಂದೆ ನಟ ಯಶ್, ಖ್ಯಾತ ಹಾಲಿವುಡ್ ಸ್ಟಂಟ್‌ಮ್ಯಾನ್ ಜೆಜೆ ಪೆರ್ರಿಯನ್ನು ಭೇಟಿ ಮಾಡಿದ್ದರು. ಜೆಜೆ ಪೆರ್ರಿ ಹಾಲಿವುಡ್‌ನ ಜನಪ್ರಿಯ ಸ್ಟಂಟ್ ಮ್ಯಾನ್ ಹಾಗೂ ಆಕ್ಷನ್ ನಿರ್ದೇಶಕ, ಇತ್ತೀಚೆಗೆ ಸಿನಿಮಾ ನಿರ್ದೇಶಕನಾಗಿಯೂ ಬಡ್ತಿ ಪಡೆದಿದ್ದಾರೆ. ಸೂಪರ್ ಹಿಟ್ ಹಾಲಿವುಡ್ ಸಿನಿಮಾಗಳಾದ 'ಐರನ್ ಮ್ಯಾನ್', 'ಅವತಾರ್', ಆಸ್ಕರ್ ವಿಜೇತ 'ಡಿಜಾಂಗೊ ಅನ್‌ಚೈನ್ಡ್', 'ಅರ್ಗೊ' ಸಿನಿಮಾಗಳಿಗೆ ಸ್ಟಂಟ್ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಇದೇ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿರುವ 'ಡೇ ಶಿಫ್ಟ್' ಸಿನಿಮಾ ನಿರ್ದೇಶನ ಸಹ ಮಾಡಿದ್ದಾರೆ.

  ಯಶ್ ಮುಂದಿನ ಸಿನಿಮಾ ಯಾವುದು?

  ಯಶ್ ಮುಂದಿನ ಸಿನಿಮಾ ಯಾವುದು?

  ಯಶ್ ಮುಂದಿನ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ಕುತೂಹಲ ಇದೆ. ನರ್ತನ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ನರ್ತನ್ ಹಾಗೂ ಯಶ್ ಕತೆಯ ವಿಷಯದಲ್ಲಿ ಪರಸ್ಪರ ಸಹಾನುಮತಕ್ಕೆ ಬಾರದೇ ಹೋದ ಕಾರಣದಿಂದ ಸಿನಿಮಾ ಮುಂದುವರೆಯಲಿಲ್ಲ. ಇನ್ನು ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸುತ್ತಾರೆ ಎನ್ನಲಾಯಿತು. ಆದರೆ ಅದೂ ಸಹ ಅಧಿಕೃತಗೊಂಡಿಲ್ಲ. ಈ ನಡುವೆ ಯಶ್ ಹಾಲಿವುಡ್‌ ಮೇಲೇನಾದರೂ ಕಣ್ಣಿಟ್ಟಿದ್ದಾರಾ ಎಂಬ ಅನುಮಾನ ಇತ್ತೀಚಿಗಿನ ಅವರ ನಡೆಯಿಂದ ವ್ಯಕ್ತವಾಗುತ್ತಿದೆ.

  English summary
  Actor Yash met Formula car racer Lewis Hamilton in USA. recently he met Hollywood stunt man and director JJ Perry.
  Friday, October 7, 2022, 14:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X