ಮನೆ ಖಾಲಿ ಮಾಡಲು ಅವಕಾಶ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಯಶ್ ತಾಯಿ

Recommended Video

ಮನೆ ವಿವಾದಕ್ಕೆ ಸಂಬಂಧಿಸಿದಂತೆ ಯಶ್ ಅವರ ತಾಯಿ ಪುಷ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ..?

ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಯಶ್ ಅವರ ತಾಯಿ ಪುಷ್ಪ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಹಾಸನದಲ್ಲಿ ಮನೆ ಕೆಲಸ ನಡೆಯುತ್ತಿದೆ, ಕಾಮಗಾರಿ ಪೂರ್ಣವಾಗಲು ಕನಿಷ್ಠ 6 ತಿಂಗಳು ಸಮಯ ಬೇಕಾಗುತ್ತೆ. ಅಲ್ಲಿಯವರೆಗೂ ಬನಶಂಕರಿಯ ಮನೆಯಲ್ಲೇ ಉಳಿಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯ ವಿಚಾರಣೆ ಮುಂದಿನ ವಾರ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸೆಪ್ಟಂಬರ್ ತಿಂಗಲ್ಲಿ ಬಾಡಿಗೆ ಮನೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ಡಿಸೆಂಬರ್ ತಿಂಗಳೊಳಗೆ ಬಾಕಿ ಬಾಡಿಗೆ ಹಣ ಪಾವತಿಸಲು ಆದೇಶ ನೀಡಿತ್ತು.

Yash mother appeal to high court

ಬಾಕಿ ಉಳಿಸಿಕೊಂಡ ಒಟ್ಟು ಬಾಡಿಗೆ 23,27,283 ರೂಪಾಯಿ ಪಾವತಿಸಿದರೆ ಮಾರ್ಚ್ ವರೆಗೂ ಕಾಲಾವಕಾಶ ನೀಡಲಾಗುತ್ತೆ ಎಂದು ಕೋರ್ಟ್ ತಿಳಿಸಿತ್ತು. ಅದರಂತೆ ಪುಷ್ಪಾ, ಬಾಡಿಗೆ ಬಾಕಿ 25 ಲಕ್ಷ ರೂ. ಹೈಕೋರ್ಟ್‌ನಲ್ಲಿ ಠೇವಣಿ ಇರಿಸಿದ್ದರು.

ಇದೀಗ, ಮಾರ್ಚ್ 31ರ ಸಮಯ ಹತ್ತಿರವಾಗಿದೆ. ಹೀಗಾಗಿ, ಯಶ್ ಅವರ ತಾಯಿ ಕಾಲಾವಕಾಶ ಕೇಳಿ ಕೋರ್ಟ್ ಮೊರೆ ಹೋಗಿದ್ದಾರೆ.

ಏನಿದು ಪ್ರಕರಣ:

2010ರ ಅಕ್ಟೋಬರ್ 16 ರಿಂದ ಕತ್ರಿಗುಪ್ಪೆಯಲ್ಲಿರುವ ಮುನಿಪ್ರಸಾದ್ ಮಾಲಿಕತ್ವದ ನಿವಾಸದಲ್ಲಿ ವಾಸವಿರುವ ಯಶ್ ಮತ್ತು ಅವರ ಕುಟುಂಬ ಸಮಯಕ್ಕೆ ಸರಿಯಾಗಿ ಬಾಡಿಗೆ ಕಟ್ಟದೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ, ಇವರ ಆರೋಪ ಸುಳ್ಳು ಎಂದು ಯಶ್ ಕುಟುಂಬ ಹೇಳಿತ್ತು. ಬಳಿಕ, ಬಾಕಿ ಉಳಿದಿರುವ ಬಾಡಿಗೆ ಹಣ ಪಾವತಿ ಮಾಡಿ ಮನೆ ಖಾಲಿ ಮಾಡಿಸಿಕೊಡಿ ಎಂದು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮುನಿಪ್ರಸಾದ್ ಕೇಸ್ ದಾಖಲು ಮಾಡಿದ್ದರು. ಅಲ್ಲಿಂದ ಹೈಕೋರ್ಟ್ ಗೂ ಹೋದರು. ಬಳಿಕ, ಹೈಕೋರ್ಟ್ ಯಶ್ ಅವರಿಗೆ ಮನೆ ಖಾಲಿ ಮಾಡುಂತೆ ಸೂಚನೆ ನೀಡಿತ್ತು.

More from Filmibeat

English summary
Kannada actor Yash mother pushpa has appeal to high court regarding vacating house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X