'ಟಾಕ್ಸಿಕ್' ಸೆಟ್ ವೀಡಿಯೋ ಲೀಕ್; 1000 ಕೋಟಿ ರೂ. ಕಲೆಕ್ಷನ್ ಪಕ್ಕಾ ಎಂದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬೇಜಾನ್ ಹೈಪ್ ಕ್ರಿಯೇಟ್ ಮಾಡಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣ ನಡೀತಿದೆ. ಮುಂಬೈನಲ್ಲಿ ತಂಡ ಸದ್ಯ ಬೀಡುಬಿಟ್ಟಿದೆ. ಬೆಂಗಳೂರಿನಲ್ಲಿ ಕೂಡ ಸೆಟ್ ಹಾಕಿ ಚಿತ್ರೀಕರಣ ನಡೆಸಲಾಗಿತ್ತು. ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ 'ಟಾಕ್ಸಿಕ್' ಸಿನಿಮಾ ಸೆರೆ ಹಿಡಿಯಲಾಗುತ್ತಿದೆ. ಸದ್ಯ ಚಿತ್ರದ ಸೆಟ್ ವೀಡಿಯೋವೊಂದು ಲೀಕ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಸದ್ಯ ವೀಡಿಯೋ ನೋಡಿದವರು ಕಣ್ಣರಳಿಸಿದ್ದಾರೆ. ಬಹಳ ಮುನ್ನೆಚ್ಚರಿಕೆ ವಹಿಸಿ ಚಿತ್ರೀಕರಣ ನಡೆಸಲಾಗುತ್ತಿದೆ. ಆದರೂ ಸೆಟ್ ವೀಡಿಯೋ ಹೇಗೆ ಹೊರ ಬಂತು ಎನ್ನುವ ಅನುಮಾನ ಕಾಡುತ್ತಿದೆ.

Yash Nayanthara Kiara Advani starrer Toxic Movie set video leaked

ಚಿತ್ರಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಮಿಕನೊಬ್ಬ ತನ್ನ ಮೊಬೈಲ್‌ನಲ್ಲಿ ವೀಡಿಯೋ ಸೆರೆಹಿಡಿದು ಪೋಸ್ಟ್ ಮಾಡಿದ್ದಾನೆ. ಅದ್ಧೂರಿ ಸೆಟ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ಅಬ್ಬಬ್ಬಾ ಸೆಟ್ ಬಹಳ ಅದ್ಧೂರಿಯಾಗಿದೆ, ಸಿನಿಮಾ ಕೂಡ ಅಷ್ಟೇ ದೊಡ್ಡಮಟ್ಟದಲ್ಲಿ ತೆರೆಗೆ ಬರುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ಅನಾಯಾಸವಾಗಿ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎಂದು ಹೇಳುತ್ತಿದ್ದಾರೆ.

ಗೀತು ಮೋಹನ್ ದಾಸ್ 'ಟಾಕ್ಸಿಕ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 60-70ರ ದಶಕದ ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿ ಎನ್ನಲಾಗ್ತಿದೆ. ಅದಕ್ಕೆ ತಕ್ಕಂತೆ ದೊಡ್ಡ ದೊಡ್ಡ ಕಟ್ಟಡಗಳು, ಸಂತೆ ಬೀದಿ ರೀತಿಯ ಸೆಟ್ ಚಿತ್ರಕ್ಕಾಗಿ ಹಾಕಿರುವುದು ಗೊತ್ತಾಗುತ್ತಿದೆ. ಒಂದಷ್ಟು ಭಾಗಗಳಲ್ಲಿ ಗ್ರೀನ್ ಮ್ಯಾಟ್ ಹಾಕಿ ಚಿತ್ರೀಕರಣ ಮಾಡಿದ್ದಾರೆ.

300 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಆಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಮುಂದಿನ ವರ್ಷ ಮಾರ್ಚ್ 19ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನತಾರಾ ನಟಿಸಿದ್ದಾರೆ.

ಕಿಯಾರಾ ಅದ್ವಾನಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಹುಮಾ ಖುರೇಷಿ, ಅಕ್ಷಯ್ ಒಬೆರಾಯ್, ತಾರಾ ಸುತಾರಿಯಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇಂಗ್ಲೆಂಡ್ ಕಲಾವಿದರು ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಹಾಲಿವುಡ್ ತಂತ್ರಜ್ಞರ ಕೈಚಳಕದಲ್ಲಿ ಸಿನಿಮಾ ಮತ್ತಷ್ಟು ಅದ್ಭುತವಾಗಿ ರೂಪ ಪಡೆಯುತ್ತಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣ ಆಗ್ತಿದೆ. ಇನ್ನುಳಿದಂತೆ ದೇಶ, ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಮಾಡಲಾಗ್ತಿದೆ.

'KGF- 2' ಸಿನಿಮಾ ಬಿಡುಗಡೆಯಾಗಿ 3 ವರ್ಷ ಕಳೆದಿದೆ. ಅಭಿಮಾನಿಗಳು ಮತ್ತೆ ತೆರೆಮೇಲೆ ನೆಚ್ಚಿನ ನಟನನ್ನು ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹೆಚ್ಚು ಕಮ್ಮಿ 4 ವರ್ಷಗಳ ಬಳಿಕ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಲೇಟ್ ಆದರೂ ಲೇಟೆಸ್ಟ್ ಆಗಿ ಸಿನಿಮಾ ಪ್ರೇಕ್ಷಕರ ಮುಂದಿಡಲು ರಾಕಿಂಗ್ ಸ್ಟಾರ್ ಮನಸ್ಸು ಮಾಡಿದ್ದಾರೆ. ಈ ಬಾರಿ ಹೊಸ ತಂಡ ಕಟ್ಟಿಕೊಂಡು ತೆರೆಮೇಲೆ ದರ್ಬಾರ್ ನಡೆಸಲು ಹೊರಟಿದ್ದಾರೆ.

ಈ ಚಿತ್ರದಲ್ಲಿ ಕೂಡ ಯಶ್ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದೆ. ಯಶ್ ಸ್ಟೈಲ್, ಲುಕ್, ಮ್ಯಾನರಿಸಂ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾ ಕತೆಯೇನು? ಯಶ್ ಪಾತ್ರ ಹೇಗಿದೆ? ಎಂದು ನೋಡಲು ಕಾಯುತ್ತಿದ್ದಾರೆ.

More from Filmibeat

English summary
Toxic Movie set video goes viral
Read more about: yash toxic kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X