Yash: 'ಒಂದು ದಿನ ಹೀರೊ ಆಗೇ ಆಗುತ್ತೇನೆ ಅಂತ ಗೊತ್ತಿತ್ತು'!

ರಾಕಿಂಗ್ ಸ್ಟಾರ್ ಯಶ್‌ರನ್ನು ಸೆಲ್ಫ್ ಮೇಡ್ ಸ್ಟಾರ್ ಅಂತಲೇ ಕರೆಯುತ್ತಾರೆ. ಯಾಕೆಂದರೆ ಯಾವುದೇ ಗಾಡ್ ಫಾದರ್ ಇಲ್ಲದೆ. ಯಾರ ದೊಡ್ಡ ಮಟ್ಟದ ಸಹಾಯವೂ ಇಲ್ಲದೆ ಬೆಳೆದು ಬಂದ ನಟ ಯಶ್. ಈಗ ಕನ್ನಡ ಚಿತ್ರರಂಗದ ಉತ್ತುಂಗದಲ್ಲಿ ಇರುವ ಸ್ಟಾರ್ ನಟ. 'ಕೆಜಿಎಫ್' ಚಿತ್ರದ ಮೂಲಕ ಹೊಸ ಇತಿಹಾಸ ಹುಟ್ಟು ಹಾಕಿದ ನಟ ಯಶ್.

ಯಶ್ ಸಿನಿಮಾ ಜರ್ನಿಯನ್ನು ನೋಡಿದರೆ ಅದು ಎರಡು ಭಾಗವಾಗಿ ನಮಗೆ ಕಾಣುತ್ತದೆ. ಒಂದು 'ಕೆಜಿಎಫ್‌'ಗೂ ಮೊದಲು, ಮತ್ತೊಂದು ಕೆಜಿಎಫ್ ನಂತ್ರ. ಯಾಕೆಂದರೆ 'ಕೆಜಿಎಫ್' ಚಿತ್ರಕ್ಕೂ ಮೊದಲು ಯಶ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದರು. ಆದರೆ ಕೆಜಿಎಫ್ ಬಳಿಕ ಯಶ್ ಸ್ಟಾರ್‌ಗಿರಿಯ ತೂಕ ಹೆಚ್ಚಾಗಿದೆ.

ವಿಶ್ವಕ್ಕೆ ಯಶ್ ಪ್ರತಿಭೆಯ ಪ್ರದರ್ಶನ ಆಗಿದೆ. ಹಾಗಂತ 'ಕೆಜಿಎಫ್' ಚಿತ್ರದ ಯಶಸ್ಸಿನ ಕ್ರೆಡಿಟ್ ಕೇವಲ ಯಶ್‌ಗೆ ಮಾತ್ರ ಕೊಡಲು ಸಾಧ್ಯವಿಲ್ಲ. ಆದರೆ ಈ ಚಿತ್ರಕ್ಕೆ ಯಶ್ ನಾಯಕ ಆಗಿದ್ದಕ್ಕೆ ಅವರ ಸಿನಿಮಾ ವೃತ್ತಿ ಜೀವನ ಮತ್ತಷ್ಟು ಉತ್ತುಂಗಕ್ಕೆ ಏರಿದೆ. ಆದರೆ ಇದೆಲ್ಲಾ ಸುಮ್ಮನೇ, ಲಕ್ ಬೈ ಚಾನ್ಸ್ ಆಗಿಲ್ಲ. ಈ ಗುರಿಯನ್ನು ಮುಟ್ಟಲೇ ಬೇಕೆಂದು ನಟ ಯಶ್ ಪಣ ತೊಟ್ಟು ಸಾಧಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಹೀರೊ ಆಗಲು ಎಂದೋ ನಿರ್ಧರಿಸಿದ್ದ ಯಶ್!

ಹೀರೊ ಆಗಲು ಎಂದೋ ನಿರ್ಧರಿಸಿದ್ದ ಯಶ್!

ನಟ ರಾಕಿಂಗ್ ಸ್ಟಾರ್ ಯಶ್ ಸಾಲು, ಸಾಲು ಸಿನಿಮಾಗಳನ್ನು ಸಾಕಷ್ಟು ವರ್ಷಗಳ ಬಳಿಕ ಒಬ್ಬ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಯಶ್ ಒಬ್ಬ ಸ್ಟಾರ್ ಹೀರೊ ಆಗಿ ಬೆಳಿದು ಬಂದ ಕತೆಯೇ ರೋಚಕ. ಯಶ್ ಬೆಳವಣಿಗೆ ಎಲ್ಲರ ಕಣ್ಣ ಮುಂದೆ ಇದೆ. ಇತ್ತೀಚೆಗೆ ಮುಂಬೈನಲ್ಲಿ 'ಕೆಜಿಎಫ್ 2' ಚಿತ್ರದ ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾತನಾಡಿದ್ದು "ನಾನು ಮುಂದೊಂದು ದಿನ ಹೀರೊ ಆಗೇ ಆಗುತ್ತೇನೆ ಎನ್ನುವ ನಂಬಿಕೆ ಇತ್ತು" ಎಂದಿದ್ದಾರೆ. ಯಶ್ ಈ ಹೇಳಿಕೆ ವೈರಲ್ ಆಗುತ್ತಿದೆ.

ನವೀನ್ ಕುಮಾರ್, ಯಶ್ ಆದ ಕಥೆ!

ನವೀನ್ ಕುಮಾರ್, ಯಶ್ ಆದ ಕಥೆ!

ಯಶ್ ಜೀವನದ ಕಥೆಯನ್ನು ಮಾದರಿ ಕಥೆ ಎನ್ನಬಹುದು. ಯಾಕೆಂದರೆ ಯಶ್‌ಗೆ ಆರಂಭದಲ್ಲಿ ಸಿನಿಮಾ ಪಯಣ ಸುಖಕರವಾಗಿ ಇರಲಿಲ್ಲ. ಯಾರು ಅವರಿಗೆ ರೆಡ್ ಕಾರ್ಪೆಟ್ ಹಾಸಿರಲಿಲ್ಲ. ಕಿರುತೆರೆಯ ಧಾರಾವಾಹಿಗಳಲ್ಲಿ ಹೀರೊ ಆಗಿ ಅಭಿನಯಿಸಿ ನಂತರ ಒಂದೆರಡು ಚಿತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ನಟಿಸಿ, 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು. ಆದರೆ 'ರಾಕಿ' ಚಿತ್ರದೊಂದಿಗೆ ಮೊದಲ ಬಾರಿಗೆ ನಾಯಕ ನಟನಾಗಿ ಮೊದಲ ಹೆಜ್ಜೆ ಇಟ್ಟರು. ಮಂಡ್ಯದ ಹಳ್ಳಿ ಹುಡುಗ ನವೀನ್ ಕಮಾರ್, ಪ್ಯಾಟೆಗೆ ಬಂದು ಯಶ್ ಆಗಿ ಈಗ ಸ್ಟಾರ್ ನಟನಾಗಿದ್ದಾರೆ.

'ಕೆಜಿಎಫ್ 2' ಚಿತ್ರದ ಅಬ್ಬರದ ಪ್ರಚಾರ!

'ಕೆಜಿಎಫ್ 2' ಚಿತ್ರದ ಅಬ್ಬರದ ಪ್ರಚಾರ!

ಸದ್ಯ 'ಕೆಜಿಎಫ್ 2' ಚಿತ್ರತಂಡ ಅಬ್ಬರದ ಪ್ರಚಾರದಲ್ಲಿ ಮುಳುಗಿದೆ. ಸಿನಿಮಾ ರಿಲೀಸ್ ಹತ್ತಿರ ಆಗುತ್ತಿದ್ದ ಹಾಗೆ ಸಿನಿಮಾ ತಂಡ ಪ್ರಚಾರ ಶುರು ಮಾಡಿದ್ದು, ಅದಕ್ಕಾಗಿ ಪ್ಯಾನ್ ಇಂಡಿಯಾ ಸುತ್ತುತ್ತಾ ಇದೆ. ದೆಹಲಿ ಬಳಿಕ ಈಗ ಚಿತ್ರತಂಡ ಮುಂಬೈನಲ್ಲಿ ಮಾಧ್ಯಮಗಳ ಜೊತೆಗೆ ಚಿತ್ರದ ಬಗ್ಗೆ ಮಾತನಾಡುತ್ತಿದ್ದು, 'ಕೆಜಿಎಫ್ 2' ಪ್ರಚಾರದಲ್ಲಿ ತೊಡಗಿದೆ. ಇದೇ ವೇಳೆ ಯಶ್ ತಮ್ಮ ಸಿನಿ ಬದುಕಿನ ಹಲವು ಸತ್ಯಗಳನ್ನು ಬಿಚ್ಚಿಡುತ್ತಿದೆ.

ಎಲ್ಲೆಲ್ಲೂ 'ಕೆಜಿಎಫ್ 2' ಚಿತ್ರದ ಹವಾ!

ಎಲ್ಲೆಲ್ಲೂ 'ಕೆಜಿಎಫ್ 2' ಚಿತ್ರದ ಹವಾ!

ಸದ್ಯ 'ಕೆಜಿಎಫ್ 2' ಚಿತ್ರಕ್ಕೆ ದಿನಗಣನೆ ಶುರುವಾಗಿದೆ. ಈಗೇನಿದ್ದರೂ ಎಲ್ಲರ ಕಣ್ಣು ಈ ಚಿತ್ರದ ಮೇಲೆ ಇದೆ. 'ಕೆಜಿಎಫ್ ಚಾಪ್ಟರ್ 1' ಗೆಲುವು 'ಕೆಜಿಎಫ್ 2' ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಹಾಗಾಗಿ ಈ ಚಿತ್ರದ ಮೂಲಕ ನಟ ಯಶ್ ಹೇಗೆ ತಮ್ಮ ಯಶಸ್ಸನ್ನು ಮುಂದುವರೆಸಿಕೊಂಡು ಹೋಗುತ್ತಾರೆ ನೋಡಬೇಕು.

More from Filmibeat

English summary
Yash New Statement In Mumbai, I Believe That I Will Become Hero One Day, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X