ಕೆಜಿಎಫ್ ಆದ್ಮೇಲೆ ಯಶ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ಅವರೇನಾ?

ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ಸಕ್ಸಸ್ ಆಗುತ್ತಿದ್ದಂತೆ ಚಾಪ್ಟರ್ 2ಗೂ ಮೊದಲೇ ರಾಕಿಂಗ್ ಸ್ಟಾರ್ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಲಿದ್ದಾರೆ ಎಂದು ಅನೇಕ ಸುದ್ದಿಗಳು ವರದಿಯಾದವು. ತಮಿಳು, ತೆಲುಗು ಹಾಗೂ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಯಶ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂಬ ವರದಿಗಳಾದವು. ಆದರೆ, ಬೇರೆ ಯಾವ ಪ್ರಾಜೆಕ್ಟ್‌ ಓಕೆ ಎನ್ನದ ನಟ ಚಾಪ್ಟರ್ 2 ಮುಗಿದ ಮೇಲೆ ಮುಂದಿನ ಸಿನಿಮಾ ಎಂದುಬಿಟ್ಟರು.

Recommended Video

ನಿನ್ನೆ ಬೇಜಾರಾಗಿತ್ತು, ಇವತ್ತು ತುಂಬಾ ಖುಷಿಯಾಯ್ತು | Garuda Ram | Filmibeat Kannada

ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಯಶ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಷ್ಟೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್‌ಪಾನ್ಸ್ ಪಡೆದುಕೊಂಡಿದೆ. ಚಾಪ್ಟರ್ ರಿಲೀಸ್‌ಗೆ ಸಿದ್ಧವಾಗುತ್ತಿದೆ. ಈ ಕಡೆ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಚರ್ಚೆ ಹುಟ್ಟಿಕೊಂಡಿದೆ. ಅಷ್ಟಕ್ಕೂ, ರಾಕಿ ಭಾಯ್ ಮುಂದಿನ ಸಿನಿಮಾ ಯಾರ ಜೊತೆ? ಮುಂದೆ ಓದಿ...

'ಪ್ಯಾನ್ ಇಂಡಿಯಾ' ಸಿನಿಮಾ ಮಾಡೋದು ಪಕ್ಕಾ

'ಪ್ಯಾನ್ ಇಂಡಿಯಾ' ಸಿನಿಮಾ ಮಾಡೋದು ಪಕ್ಕಾ

ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ನಟ ಯಶ್ ಸಿನಿಮಾ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಬಹುದು ಎಂಬ ಲೆಕ್ಕಾಚಾರ ಇದ್ದರೆ ಅದು ನಿರಾಸೆಯಾಗಬಹುದು. ಗಾಂಧಿನಗರದಲ್ಲಿ ಚರ್ಚೆಯಾಗುತ್ತಿರುವ ಸುದ್ದಿಯ ಪ್ರಕಾರ, ಯಶ್ ಮುಂದಿನ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಅದಕ್ಕೆ ತಕ್ಕಂತೆ ನಿರ್ದೇಶಕ-ನಿರ್ಮಾಪಕರ ಜೊತೆ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕನ್ನಡದ ಯುವ ನಿರ್ದೇಶಕನ ಹೆಸರು ಮುಂಚೂಣಿಯಲ್ಲಿದೆ!

ಕನ್ನಡದ ಯುವ ನಿರ್ದೇಶಕನ ಹೆಸರು ಮುಂಚೂಣಿಯಲ್ಲಿದೆ!

'ಮಫ್ತಿ' ಸಿನಿಮಾ ಮುಗಿದ್ಮೇಲೆ ನಿರ್ದೇಶಕ ನರ್ತನ್ ಒಂದೆರಡು ಪ್ರಾಜೆಕ್ಟ್ ಟೇಕ್ ಆನ್ ಮಾಡಿದರೂ ಕಾರಣಾಂತರಗಳಿಂದ ಅದು ಮುಂದುವರಿಯಲಿಲ್ಲ. ಈ ಕಡೆ ರಾಕಿಂಗ್ ಸ್ಟಾರ್ ಗೆ ನರ್ತನ್ ಕಥೆ ಮಾಡಿದ್ದು, ಮುಂದಿನ ಚಿತ್ರವನ್ನು ರಾಕಿ ಭಾಯ್ ಜೊತೆಯಲ್ಲಿ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.

ಪರಭಾಷೆಯಿಂದ ಹೆಚ್ಚು ಬೇಡಿಕೆ!

ಪರಭಾಷೆಯಿಂದ ಹೆಚ್ಚು ಬೇಡಿಕೆ!

ಕೆಜಿಎಫ್ ಹಿಟ್ ಆದ್ಮೇಲೆನೇ ಯಶ್ ಜೊತೆ ಸಿನಿಮಾ ಮಾಡಲು ಪ್ರಯತ್ನ ಪಡುತ್ತಿರುವ ಕೆಲವು ನಿರ್ದೇಶಕರು, ಕಥೆ ಸಿದ್ಧ ಮಾಡ್ಕೊಂಡು ಕಾಯುತ್ತಿದ್ದಾರೆ. ಯಶ್ ಕಾಲ್‌ಶೀಟ್‌ ಪಡೆಯುವುದಕ್ಕಾಗಿ ಎಲ್ಲ ಪ್ರಯತ್ನ ಮಾಡ್ತಿದ್ದು, ಕೆಜಿಎಫ್ ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಳ್ಳಲಿ ಎಂದು ಇದ್ದರು. ಈಗ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಯಶ್ ಡೇಟ್ ಪಡೆಯಲು ಮುಂದಾಗಬಹುದು.

ಚಾಪ್ಟರ್ 2 ಬಿಡುಗಡೆ ಆದ್ಮೇಲೆ......

ಚಾಪ್ಟರ್ 2 ಬಿಡುಗಡೆ ಆದ್ಮೇಲೆ......

ನಟ ಯಶ್ ಅವರಿಗೆ ಸದ್ಯ ಚಾಪ್ಟರ್ 2 ಬಿಡುಗಡೆ ಮೇಲೆ ಮಾತ್ರ ಗಮನ ಇರುವಂತಿದೆ. ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕಂಡ ಮೇಲಷ್ಟೇ ಹೊಸ ಸಿನಿಮಾದ ಮಾತುಕತೆ ಅಥವಾ ಚರ್ಚೆಗೆ ಮುಂದಾಗಬಹುದು. ಏಕಂದ್ರೆ, ಈ ಹಿಂದೆ ಚಾಪ್ಟರ್ 1 ಸಮಯದಲ್ಲೂ ಯಶ್ ಅದೇ ಹೇಳಿದ್ದರು. ಸದ್ಯಕ್ಕೆ ಕೆಜಿಎಫ್ ಆಮೇಲೆ ಹೊಸ ಸಿನಿಮಾ ಎಂದಿದ್ದರು. ಹಾಗಾಗಿ, ಇನ್ನು ಕೆಲವು ದಿನಗಳ ಕಾಲ ಯಶ್ ಮುಂದಿನ ಪ್ರಾಜೆಕ್ಟ್ ಯಾವುದು ಎಂಬುದರ ಬಗ್ಗೆ ಸ್ಪಷ್ಟತೆ ಸಿಗುವುದು ಕಷ್ಟ.

More from Filmibeat

English summary
Which is the Next project of Rocking star Yash, after release of Kgf chapter 2?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X