For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?

  |

  ನಟ ಯಶ್ ಇತ್ತೀಚೆಗಷ್ಟೆ ಬಹುನಿರೀಕ್ಷಿತ ಕೆಜಿಎಫ್ 2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ದೊಡ್ಡ ಶೆಡ್ಯೂಲ್‌ನಲ್ಲಿ ಸತತವಾಗಿ ಭಾಗವಹಿಸಿ ಚಿತ್ರೀಕರಣ ಮುಗಿಸಿದ್ದಾರೆ ಯಶ್.

  ಚಿತ್ರೀಕರಣ ಮುಗಿಸಿದ ಕೂಡಲೆ ಎಲ್ಲರೂ ಮನೆಗೆ ವಾಪಸ್ಸಾಗಿದ್ದರೆ ಯಶ್ ಮಾತ್ರ ಬೆಂಗಳೂರಿಗೆ ಬಂದಿದ್ದಾದರೂ ಮನೆಗೆ ಹೋಗಿಲ್ಲ. ಬದಲಿಗೆ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

  ಹೌದು, ಮನೆಯಲ್ಲಿ ಇಬ್ಬರು ಮುದ್ದಾದ ಪುಟ್ಟ ಮಕ್ಕಳನ್ನು ಹೊಂದಿರುವ ಯಶ್, ಕೊರೊನಾ ಭೀತಿಯಿಂದ ಮನೆಗೆ ಹೋಗದೆ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

  ಚಿತ್ರೀಕರಣ, ಡಬ್ಬಿಂಗ್, ಕತೆ ಕೇಳುವುದು, ವಾಣಿಜ್ಯ ಕಾರ್ಯಕ್ರಮಗಳು ಹೀಗೆ ಸತತ ಬ್ಯುಸಿಯಾಗಿರುವ ಯಶ್‌ಗೆ ಕೊರೊನಾ ನಿಯಮಗಳನ್ನು ಪೂರ್ಣವಾಗಿ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಮನೆಗೆ ಹೋಗಿ ಸಣ್ಣ ಮಕ್ಕಳನ್ನು, ಪೋಷಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಹೆದರಿ ಮನೆಯಿಂದ ದೂರ ಉಳಿದಿದ್ದಾರೆ ಯಶ್.

  ಕೆಜಿಎಫ್ ಚಿತ್ರೀಕರಣದಿಂದ ವಾಪಸ್ ಬಂದಿರುವ ಯಶ್ ಹೋಟೆಲ್‌ನಲ್ಲಿ ಉಳಿದಿದ್ದು, ಅಲ್ಲಿಯೇ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ ಎನ್ನಲಾಗುತ್ತಿದೆ. ವರದಿ ನೆಗೆಟಿವ್ ಬಂದಿದ್ದರೂ ಸಹ ಕೆಜಿಎಫ್ ಕೆಲಸಗಳು ಪೂರ್ಣಗೊಳ್ಳುವವರೆಗೂ ಯಶ್ ಹೋಟೆಲ್‌ನಲ್ಲಿಯೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

  ಇದ್ದಕ್ಕಿದ್ದಂತೆ ಹೈದ್ರಾಬಾದ್ ಗೆ ಬಂದ ಧ್ರುವ ಸರ್ಜಾ, ನಂದಕಿಶೋರ್ | Filmibeat Kannada

  ಯಶ್ ಅವರು ಕೆಲವು ದಿನಗಳ ಹಿಂದಷ್ಟೆ ಕೆಜಿಎಫ್ 2 ಸಿನಿಮಾದ ಚಿತ್ರೀಕರಣವನ್ನು ಹೈದಬಾರಾದ್‌ನಲ್ಲಿ ಮುಗಿಸಿದ್ದಾರೆ. ಸಂಜಯ್ ದತ್-ಯಶ್ ನಟಿಸಿದ್ದ ಕ್ಲೈಮ್ಯಾಕ್ಸ್‌ ದೃಶ್ಯಗಳ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದ್ದು, ಅದೇ ಕೆಜಿಎಫ್ 2 ಸಿನಿಮಾದ ಕೊನೆಯ ಚಿತ್ರೀಕರಣ ಆಗಿತ್ತು. ಕೆಜಿಎಫ್ 2 ನ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಪ್ರಾರಂಭ ಆಗಲಿದೆ.

  English summary
  Yash is not going to home fir safety of his family. He his staying in hotel because he can not follow coronavirus guidelines.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X