ಅಜೇಯ್ ರಾವ್ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್
Recommended Video
ಸ್ಯಾಂಡಲ್ ವುಡ್ ಕೃಷ್ಣ ಅಂತಾನೇ ಖ್ಯಾತಿಗಳಿಸಿರುವ ನಟ ಅಜೇಯ್ ಮನೆಯಲ್ಲಿ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮ ಜೋರಾಗಿತ್ತು. ಅಜೇಯ್ ಮತ್ತು ಪತ್ನಿ ಸ್ವಪ್ನ ರಾವ್ ಮುದ್ದಿನ ಮಗಳು ಚರಿಷ್ಮಾಗೆ ಒಂದು ವರ್ಷ ತುಂಬಿದೆ. ವರುಷ ತುಂಬಿದ ಹರುಷದ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ ಅಜೇಯ್ ದಂಪತಿ.
ನಿನ್ನೆ ನಡೆದ ಚರಿಷ್ಮಾ ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದು ವಿಶೇಷ. ಮುದ್ದು ಕಂದಮ್ಮನಿಗೆ ರಾಕಿ ಭಾಯ್ ಗಿಫ್ಟ್ ನೀಡಿ ಮಗುವನ್ನು ಮುದ್ದಾಡಿದ್ದಾರೆ. ಚರಿಷ್ಮಾಗೆ ಕೇಕ್ ತಿನ್ನಿಸಿ ಯಶ್ ಸಂತಸ ಪಟ್ಟಿದ್ದಾರೆ. ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಚರಿಷ್ಮಾ ಕೆಂಪು ಬಣ್ಣ ಫ್ರಾಕ್ ನಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿದ್ದಳು.
ಇನ್ನು ವಿಶೇಷ ಅಂದರೆ ಅಜೇಯ್ ರಾವ್ ಮತ್ತು ಪತ್ನಿ ಸ್ವಪ್ನ ರಾವ್ ಕೂಡ ಕೆಂಪು ಬಣ್ಣದ ಕಾಸ್ಟ್ಯೂಮ್ ನಲ್ಲಿ ಮಿಂಚುತ್ತಿದ್ದರು. ಚರಿಷ್ಮಾ ಹುಟ್ಟುಹಬ್ಬಕ್ಕೆ ರಾಕ್ ಭಾಯ್ ಸೇರಿದಂತೆ ಸಾಕಷ್ಟು ಜನ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ನಟಿ ಆಶಿ ರಂಗನಾಥ್ ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.

ಇನ್ನು ರಾಕಿ ಭಾಯಿ ಪುತ್ರಿ ಐರಾದೂ ಒಂದು ವರ್ಷ ತುಂಬುತ್ತ ಬಂದು. ಯಶ್ ಮನೆಯಲ್ಲೂ ಮೊದಲ ವರ್ಷದ ಮಗಳ ಹುಟ್ಟುಹಬ್ಬ ಜೋರಾಗಿ ಮಾಡುವ ಸಾಧ್ಯತೆ ಇದೆ. ಜೊತೆಗೆ ಮಗ ಕೂಡ ಆಗಮಿಸಿರುವುದರಿಂದ ಐರಾ ಬರ್ತಡೇ ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.

ಅಂದ್ಹಾಗೆ ಅಜೇಯ್ ರಾವ್ 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಂಬಾ ಸರಳ ಸಮಾರಂಭದಲ್ಲಿ ಸ್ವಪ್ನಾ ಜೊತೆ ಹಸೆಮಣೆ ಏರಿದ್ದರು ಅಜೇಯ್ ರಾವ್. ನಾಲ್ಕು ವರ್ಷಗಳ ಬಳಿಕಾ ಮುದ್ದಾದ ಮಗಳು ಜನಿಸಿದ್ದಾಳೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಮುದ್ದು ಮಗಳಿಗೆ ಚರಿಷ್ಮಾ ಅಂತ ನಾಮಕರಣ ಮಾಡಿದ್ದರು.


Click it and Unblock the Notifications











