'ಕನ್ನಡದ ಕೋಟ್ಯಾಧಿಪತಿ' ವೇದಿಕೆ ಏರಿದ ರಾಜಾಹುಲಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಜನಸಾಮಾನ್ಯರ ಜೊತೆಗೆ ಈಗ ಸ್ಟಾರ್ ನಟರು ಕೂಡ ಕಾರ್ಯಕ್ರಮದ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ನಟ ಯಶ್ ಈಗ 'ಕನ್ನಡದ ಕೋಟ್ಯಾಧಿಪತಿ' ವೇದಿಕೆ ಏರಿದ್ದಾರೆ. ಕಾರ್ಯಕ್ರಮಕ್ಕೆ ಯಶ್ ಆಗಮಿಸಿರುವ ಫೋಟೋ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದೆ. ಇನ್ನು 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮದಲ್ಲಿ ಯಶ್ ಎಷ್ಟು ಹಣ ಗೆದ್ದರು ಎಂಬ ನಿರೀಕ್ಷೆ ಎಲ್ಲರಿಗೂ ಮೂಡಿದೆ.
ಕೆಲ ದಿನಗಳ ಹಿಂದೆಯಷ್ಟೆ ನಟ ಗಣೇಶ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸಖತ್ ಆಗಿ ಆಟ ಆಡಿದ ಗಣೇಶ್ ಹನ್ನೆರಡು ಪ್ರಶ್ನೆಗೆ ಉತ್ತರ ಕೊಟ್ಟು ತಮ್ಮ ಚಾಣಕ್ಷತನದಿಂದ ಆಟವನ್ನ ಕ್ವಿಟ್ ಮಾಡಿದರು. 25 ಲಕ್ಷದ ಪ್ರಶ್ನೆಗೆ ಕ್ವಿಟ್ ಮಾಡಿದ ಗಣೇಶ್ 12.50 ಲಕ್ಷ ತಗೆದುಕೊಂಡು ಹೋದರು.

ಗಣೇಶ್ ಬಳಿಕ ಈಗ ಯಶ್ ಈಗ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಸದ್ಯದಲ್ಲಿಯೇ ಈ ಸಂಚಿಕೆ ಪ್ರಸಾರ ಆಗಲಿದೆ.
More from Filmibeat
English summary
Kannada actor Yash participate in Star Suvarna Channel popular show 'Kannadada Kotyadhipathi 3'.


Click it and Unblock the Notifications











