For Quick Alerts
  ALLOW NOTIFICATIONS  
  For Daily Alerts

  ''ನಾವೇನು ಪಾಕಿಸ್ತಾನದಿಂದ ಬಂದಿಲ್ಲ'' : ಟೀಕೆಗಳಿಗೆ ಅಣ್ತಮ್ಮ ಯಶ್ ತಿರುಗೇಟು!

  |

  ''ಯಾವುದೋ ಅಧಿಕಾರದ ಆಸೆಗೋ, ಲಾಭಕ್ಕೋ ಇಲ್ಲಿ ಬಂದು ನಾವು ನಿಂತಿಲ್ಲ. ನಾವು ಬಂದಿರುವುದು ತಪ್ಪು ಅಂತ ಕೆಲವರಿಗೆ ಅನಿಸಿರಬಹುದು. ಅಂತಹವರಿಗೆ ಹೇಳುತ್ತಾನೆ.. ನಾವು ತಪ್ಪೇ ಮಾಡುತ್ತೇವೆ.'' ಎಂದು ಗುಡುಗಿದರು ಯಶ್.

  ಬೇಸಿಗೆಯ ಬಿಸಿಲಿಗಿಂತ ಮಂಡ್ಯದಲ್ಲಿ ರಾಜಕೀಯದ ಬಿಸಿ ಜಾಸ್ತಿಯಾಗಿದೆ. ಇಂದು ಮಂಡ್ಯ ಅಖಾಡಕ್ಕೆ ಅಧಿಕೃತವಾಗಿ ಸುಮಲತಾ ಅಂಬರೀಶ್ ಇಳಿದಿದ್ದಾರೆ. ಸುಮಲತಾ ಅವರಿಗೆ ನಟ ಯಶ್ ಹಾಗೂ ದರ್ಶನ್ ಬಲ ಸಿಕ್ಕಿದೆ.

  'ಜೋಡಿ ಎತ್ತು'ಗಳ ಅಬ್ಬರದ ಪ್ರಚಾರ: ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ

  ಸುಮಲತಾ ಅವರ ಪರ ಪ್ರಚಾರದಲ್ಲಿ ಇಂದಿನಿಂದ ದರ್ಶನ್ ಹಾಗೂ ಯಶ್ ಭಾಗಿಯಾಗಿದ್ದಾರೆ. ಈ ಕಾರಣ ಅವರಿಬ್ಬರ ಮೇಲೆ ಕೆಲ ಟೀಕೆಗಳು ಕೇಳಿ ಬರುತ್ತಿವೆ. ಅದೆಲ್ಲದಕ್ಕೂ ಯಶ್ ತಿರುಗೇಟು ನೀಡಿದ್ದಾರೆ.

  ಮಂಡ್ಯದ ನೆಲದಲ್ಲಿ ನಿಂತು ಅಣ್ತಮ್ಮ ಯಶ್ ಆಡಿದ ಮಾತುಗಳು ಮುಂದಿವೆ ಓದಿ...

  ಅಕ್ಕನ ಕಣ್ಣಲ್ಲಿ ನೀರು ಬಂತು

  ಅಕ್ಕನ ಕಣ್ಣಲ್ಲಿ ನೀರು ಬಂತು

  ''ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅಕ್ಕನ (ಸುಮಲತಾ) ಕಣ್ಣಲ್ಲಿ ನೀರು ಬಂತು. ಅವರಿಗೆ ಸಣ್ಣ ನೋವಾಗಿತ್ತು. ದರ್ಶನ್ ಹಾಗೂ ನಿನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ನನಗೆ ಏನಾದರೂ ಹೇಳಿದರೂ ಪರವಾಗಿಲ್ಲ ಆದರೆ, ನಿಮಗೆ ಏನೇನೋ ಹೇಳುತ್ತಿದ್ದಾರೆ. ಎಂದರು. ಆದರೆ, ನಾವು ಮಾಡುತ್ತಿರುವುದು ತಪ್ಪಾಲ್ಲ ಎಂದು ಎಲ್ಲರಿಗೂ ತಿಳಿದಿದೆ.'' - ಯಶ್, ನಟ

  ನಾವು ತಪ್ಪೇ ಮಾಡುತ್ತೇವೆ

  ನಾವು ತಪ್ಪೇ ಮಾಡುತ್ತೇವೆ

  ''ಯಾವುದೋ ಅಧಿಕಾರದ ಆಸೆಗೋ, ಲಾಭಕ್ಕೋ ಇಲ್ಲಿ ಬಂದು ನಾವು ನಿಂತಿಲ್ಲ. ನಾವು ಬಂದಿರುವುದು ತಪ್ಪು ಅಂತ ಕೆಲವರಿಗೆ ಅನಿಸಬಹುದು. ಅಂತಹವರಿಗೆ ಹೇಳುತ್ತಾನೆ ನಾವು ತಪ್ಪೇ ಮಾಡುತ್ತೇವೆ. ಆ ತಪ್ಪು ಸಾಯುವವರೆಗೆ ಮಾಡುತ್ತೇವೆ. ನಾವು ಇಲ್ಲಿ ನಾಟಕ ಮಾಡಲು ಬಂದಿಲ್ಲ. ಅಂಬರೀಶಣ್ಣ ನಮಗೆ ತುಂಬ ಮಾಡಿದ್ದಾರೆ.'' - ಯಶ್, ನಟ

  ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್?

  ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿದ್ದೇವಾ

  ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿದ್ದೇವಾ

  ''ಸಿನಿಮಾದವರು.. ಸಿನಿಮಾದವರು.. ಅಂತ ನಮ್ಮ ಬಗ್ಗೆ ಏನೇನೋ ಕೇಳುತ್ತಾರೆ. ನಾವೇನು ಅಂಟಾರ್ಟಿಕಾ, ಪಾಕಿಸ್ತಾನದಿಂದ ಬಂದಿದ್ದೇವಾ ನಾವು ಕೂಡ ಇದೇ ಮೈಸೂರಿನಿಂದ ಮಂಡ್ಯ ರಸ್ತೆ ದಾಟಿಕೊಂಡೆ ಬೆಂಗಳೂರಿನಲ್ಲಿ ಹೋಗಿ ಬದುಕು ಕಟ್ಟಿಕೊಂಡಿದ್ದೇವೆ. ಮಂಡ್ಯದಲ್ಲಿ ಕಬ್ಬಿನ ಹಾಲು ಕುಡಿದಿದ್ದೇವೆ. ಬೆಲ್ಲನೂ ತಿಂದಿದ್ದೇವೆ. ಮಂಡ್ಯ ಜನ ನಮ್ಮನ್ನು ಪ್ರೀತಿಸಿ ಒಳ್ಳೆಯ ಸ್ಥಾನದಲ್ಲಿ ಇಟ್ಟಿದ್ದಾರೆ.'' - ಯಶ್, ನಟ

  ಮಂಡ್ಯದ ಮೇಲೆ ನಮ್ಮ ಋಣ ಇದೆ

  ಮಂಡ್ಯದ ಮೇಲೆ ನಮ್ಮ ಋಣ ಇದೆ

  ''ಇಡೀ ಕರ್ನಾಟಕಕ್ಕೆ ನಮ್ಮ ಋಣ ಇದೆ. ಆದರೆ, ಮಂಡ್ಯದಲ್ಲಿ ಸ್ವಲ್ಪ ಜಾಸ್ತಿ ಇದೆ. ಮಂಡ್ಯವರು ನಮ್ಮನ್ನು ಸ್ವಂತವಾಗಿ ತೆಗೆದುಕೊಂಡಿದ್ದಾರೆ. ನನಗಿಂತ ಹೆಚ್ಚಾಗಿ ದರ್ಶನ್ ರನ್ನು ತೆಗೆದುಕೊಂಡಿದ್ದಾರೆ. ಎಲ್ಲೋ ಕೇಳಿದೆ ಏನೋ ಇವರಿಬ್ಬರು ಹಾವು ಮುಂಗುಸಿ ತರ ಇದ್ದರು ಈಗ ಒಂದಾಗಿದ್ದಾರೆ ಅಂತ. ನಮ್ಮ ನಮ್ಮ ಹೋಟೆಪಾಡು ನಾವು ನೋಡುತ್ತಿದ್ದೆವು. ಅನುಕೂಲಕ್ಕಾಗಿ ನಾವು ಹಗಲು ರಾತ್ರಿ ಬದಲಾಗುವವರಲ್ಲ.'' - ಯಶ್, ನಟ

  ಅಂಬಿ ಅಭಿಮಾನಿಗಳ ಬಲದೊಂದಿಗೆ ನಾಮಪತ್ರ ಸಲ್ಲಿಸಿದ ಸುಮಲತಾ

  ಒಳ್ಳೆತನಕ್ಕೆ ಬೆಲೆ ನೀಡಿ

  ಒಳ್ಳೆತನಕ್ಕೆ ಬೆಲೆ ನೀಡಿ

  ''ಸಿನಿಮಾದವರು ಎಂದು ಕೆಟ್ಟದಾಗಿ ಮಾತನಾಡಬೇಡಿ. ಸುಮ್ ಸುಮ್ಮನೆ ಈ ನಾಡಿನ ಜನತೆ ಯಾರನ್ನು ಎದೆ ಮೇಲೆ ಇಟ್ಟುಕೊಳ್ಳುವುದಿಲ್ಲ. ಕೆಲವರನ್ನು ಮೆರೆಸುತ್ತಾರೆ ಎಂದರೆ ನಮ್ಮಲ್ಲೂ ಏನೋ ಸಣ್ಣ ಯೋಗ್ಯತೆ ಇದೆ ಅಂತ. ಅದನ್ನು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಮಂಡ್ಯ ಜನ ಒಳ್ಳೆತನಕ್ಕೆ ಬೆಲೆ ನೀಡಿ. ಅಕ್ಕನ ಕಡೆಯಿಂದ ನಾನು ಭರವಸೆ ನೀಡುತ್ತೇನೆ. ಅವರು ಗೆದ್ದರೂ ಸೋತ್ತಾರೂ ಮಂಡ್ಯದಲ್ಲಿ ಇದ್ದು ನಿಮ್ಮ ಪ್ರೀತಿಯನ್ನು ಬೆಳೆಸಿಕೊಂಡು ಹೋಗುತ್ತಾರೆ. ಗೆದ್ದರೆ ದೆಹಲಿಯವರೆಗೆ ಮಂಡ್ಯದ ಬಗ್ಗೆ ಸೌಂಡ್ ಮಾಡುತ್ತಾರೆ.'' - ಯಶ್, ನಟ

  English summary
  Kannada actor Yash and Darshan participated in Sumalatha Ambarish election roadshow in Mandya Today (March 20th). Yash supporting sumalatha in mandya lok sabha election.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X