twitter
    For Quick Alerts
    ALLOW NOTIFICATIONS  
    For Daily Alerts

    'ಇದು ಜಸ್ಟ್ ಬಿಗಿನಿಂಗ್': 2015ರಲ್ಲಿ ಯಶ್ ಹೇಳಿದ್ದ ಮಾತು ನೆನಪಿದೆಯೇ?

    |

    Recommended Video

    ಅಂದು ಹೇಳಿದ್ದ ಮಾತನ್ನು ಸಾಧಿಸಿ ತೋರಿಸಿದ ಯಶ್..? | Yash SIIMA

    ಅದು 2015....'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಅಭಿನಯಕ್ಕಾಗಿ ಸೈಮಾ ಅತ್ಯುತ್ತಮ ನಟ ವಿಭಾಗದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಮಿನೇಟ್ ಆಗಿದ್ದರು. ನಿರೀಕ್ಷೆಯಂತೆ ಯಶ್ ಆ ಪ್ರಶಸ್ತಿ ಪಡೆದುಕೊಂಡರು.

    ವೇದಿಕೆಯ ಮುಂಭಾಗದಲ್ಲಿ ಬಾಲಕೃಷ್ಣ, ವೆಂಕಟೇಶ್, ಶರತ್ ಕುಮಾರ್, ನಾಗಚೈತನ್ಯ, ಖುಷ್ಬೂ ಸೇರಿದಂತೆ ಇಡೀ ಸೌತ್ ಇಂಡಿಯಾ ಭಾಗಿಯಾಗಿತ್ತು. ಆ ಪ್ರಶಸ್ತಿ ಸ್ವೀಕರಿಸಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಯಶ್ 'ಕನ್ನಡ ಚಿತ್ರರಂಗ ಇನ್ನೊಂದು ಲೆವಲ್ ಗೆ ಹೋಗುತ್ತೆ. ಇದು ಜಸ್ಟ್ ಬಿಗಿನಿಂಗ್' ಎಂದು ಹೇಳಿದ್ದರು.

    ಸೈಮಾ ಪ್ರಶಸ್ತಿ ಪಡೆದ ರಾಕಿ ಭಾಯ್ ಅದನ್ನ ಅರ್ಪಿಸಿದ್ದು ಯಾರಿಗೆ? ಸೈಮಾ ಪ್ರಶಸ್ತಿ ಪಡೆದ ರಾಕಿ ಭಾಯ್ ಅದನ್ನ ಅರ್ಪಿಸಿದ್ದು ಯಾರಿಗೆ?

    ಅಂದು ಯಶ್ ಅವರು ಆ ಮಾತನ್ನ ಕೇಳಿ ಇದು ಸಾಧ್ಯನಾ ಎಂದು ಅಂದುಕೊಂಡವರು ಇದ್ದಾರೆ. 2015ರಲ್ಲಿ ಹೇಳಿದ ಆ ಮಾತನ್ನ ಮತ್ತೆ ಅದೇ ವೇದಿಕೆಯಲ್ಲಿ ಸಾಧಿಸಿ ತೋರಿಸಿದ್ದಾರೆ ಯಶ್. ಮುಂದೆ ಓದಿ....

    ಯಶ್ ಅಂದು ಹೇಳಿದ್ದೇನು?

    ಯಶ್ ಅಂದು ಹೇಳಿದ್ದೇನು?

    ''ಒಂದು ಸಿನಿಮಾ ಹಿಟ್ ಮಾಡಬೇಕು ಎಂದು ಕೆಲಸ ಮಾಡಲಿಲ್ಲ. ಕನ್ನಡ ಇಂಡಸ್ಟ್ರಿಗೆ ಕೆಲಸ ಮಾಡಿದ್ದು. ಕನ್ನಡ ಇಂಡಸ್ಟ್ರಿಯನ್ನ ನೆಕ್ಸ್ಟ್ ಲೆವಲ್ ಗೆ ತೆಗೆದುಕೊಂಡು ಹೋಗ್ಬೇಕು ಎಂದು ಕೆಲಸ ಮಾಡಿದ್ವಿ. ಇದು ಜಸ್ಟ್ ಬಿಗಿನಿಂಗ್. ಕಾದು ನೋಡಿ ಕನ್ನಡ ಸಿನಿಮಾ ಇನ್ನೊಂದು ಮಟ್ಟಕ್ಕೆ ಹೋಗುತ್ತೆ'' ಎಂದು ಹೆಮ್ಮೆಯಿಂದ ಹೇಳಿದ್ದರು.

    ಕನ್ನಡ ಇಂಡಸ್ಟ್ರಿಗೆ ಹಿರಿಮೆ ಹೆಚ್ಚಿಸಿದ ಕೆಜಿಎಫ್

    ಕನ್ನಡ ಇಂಡಸ್ಟ್ರಿಗೆ ಹಿರಿಮೆ ಹೆಚ್ಚಿಸಿದ ಕೆಜಿಎಫ್

    ಕೆಜಿಎಫ್ ಸಿನಿಮಾ ಆರಂಭವಾದಾಗಲೇ ಇದು ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸುತ್ತೆ ಎಂದು ಹೇಳಲಾಗ್ತಿತ್ತು. ಕನ್ನಡ, ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ಹೇಳಿದಂತೆ ಸ್ಯಾಂಡಲ್ ವುಡ್ ಭಾವುಟವನ್ನ ವಿಶ್ವಾದ್ಯಂತ ಪಸರಿಸಿತು. ನೂರು ಕೋಟಿ ಗಳಿಸುವ ಮೂಲಕ ಕನ್ನಡದ ಮೊದಲ ಚಿತ್ರ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಕೆಜಿಎಫ್ ಪಾತ್ರವಾಯಿತು. ಕನ್ನಡ ಚಿತ್ರಗಳು ಅಂದ್ರೆ ವಾಹ್ ಎನ್ನುವ ಮಟ್ಟಕ್ಕೆ ಬಂತು.

    Siima Awards 2019: ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿSiima Awards 2019: ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳ ಪಟ್ಟಿ

    2019ರ ಸೈಮಾದಲ್ಲಿ ಕೆಜಿಎಫ್ ಅಬ್ಬರ

    2019ರ ಸೈಮಾದಲ್ಲಿ ಕೆಜಿಎಫ್ ಅಬ್ಬರ

    ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರಕ್ಕೆ ಯಶ್ ಪಡೆದಿದ್ದು ಮೊದಲ ಸೈಮಾ ಪ್ರಶಸ್ತಿ. ಈಗ ಕೆಜಿಎಫ್ ಚಿತ್ರಕ್ಕಾಗಿ ಎರಡನೇ ಬಾರಿ ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಕೇವಲ ನಟ ಮಾತ್ರವಲ್ಲ, ಚಿತ್ರ, ನಿರ್ದೇಶಕ, ಸಂಗೀತ, ಛಾಯಾಗ್ರಹಣ ಸೇರಿದಂತೆ 6 ವಿಭಾಗದಲ್ಲಿ ಸೈಮಾ ಪ್ರಶಸ್ತಿ ಬಾಚಿಕೊಂಡಿದೆ.

    ಕೆಜಿಎಫ್ ಚಿತ್ರದಿಂದ ಮಾರುಕಟ್ಟೆ ವಿಸ್ತರಣೆ

    ಕೆಜಿಎಫ್ ಚಿತ್ರದಿಂದ ಮಾರುಕಟ್ಟೆ ವಿಸ್ತರಣೆ

    ಕನ್ನಡ ಸಿನಿಮಾಗಳು ಕರ್ನಾಟಕ ಮತ್ತು ವಿದೇಶದ ಕೆಲವು ಸ್ಕ್ರೀನ್ ಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿತ್ತು. ಕೆಜಿಎಫ್ ಬಳಿಕ ಬಹುತೇಕ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿದೆ. ಕುರುಕ್ಷೇತ್ರ, ಪೈಲ್ವಾನ್, ಅವನೇ ಶ್ರೀಮನ್ನಾರಾಯಣ, ರಾಬರ್ಟ್ ಹೀಗೆ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತರಿಸಿದೆ. ಇದಕ್ಕೆ ಕೆಜಿಎಫ್ ಚಿತ್ರವೂ ಕಾರಣ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ.

    ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಕಿ ಬಾಯ್ಸೈಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಕಿ ಬಾಯ್

    ಕೆಜಿಎಫ್ 2 ಬಂದ್ಮೇಲೆ ಅದೇನ್ ಆಗುತ್ತೋ

    ಕೆಜಿಎಫ್ 2 ಬಂದ್ಮೇಲೆ ಅದೇನ್ ಆಗುತ್ತೋ

    ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿಯೇ ಬೇರೆ ಇಂಡಸ್ಟ್ರಿಯವರು ಅಚ್ಚರಿಯಾಗಿದ್ದಾರೆ. ಕನ್ನಡ ಇಂಡಸ್ಟ್ರಿಯೂ ಅದ್ಭುತ ಸಿನಿಮಾಗಳನ್ನ ಮಾಡುತ್ತೆ ಎಂಬುದು ಮನವರಿಕೆಯಾಗಿದೆ. ಕೆಜಿಎಫ್ 2 ಚಿತ್ರಕ್ಕಾಗಿ ಇಡೀ ಭಾರತ ಕಾಯುತ್ತಿದೆ. ಒಂದು ವೇಳೆ ಚಾಪ್ಟರ್ 2 ಹಿಟ್ ಆದ್ರೆ ಯಶ್ ಅವರ ಕಾಲ್ ಶೀಟ್ ಸಿಗೋದೇ ಕಷ್ಟವಾಗಬಹುದು. ಅಂದು ಕನ್ನಡ ನಟನಾಗಿ ಗುರುತಿಸಿಕೊಂಡಿದ್ದ ಯಶ್, ಈಗ ಇಡೀ ಭಾರತಕ್ಕೆ ಪರಿಚಯವಾಗಿರುವ ನ್ಯಾಷನಲ್ ಸ್ಟಾರ್.

    English summary
    Kannada actor Yash proved himself what he told in 2015 Siima awards event.
    Monday, August 19, 2019, 17:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X