ರಾಕಿಂಗ್ ಸ್ಟಾರ್ 'ರಾಮಾಚಾರಿ' ಲೇಟ್ ಅಂತೆ ಕಣ್ಲಾ
ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಯಾವಾಗ ಥೀಯೇಟರ್ ಗೆ ಬರುತ್ತೆ ಅಂಥ ಕಾದಿರೋ ದೊಡ್ಡ ಅಭಿಮಾನಿ ಬಳಗವೇ ಇದೆ. ಇದು ಯಶ್ ಅಭಿಮಾನಿಗಳ ಸಿನಿಮಾ ಮಾತ್ರ ಅಲ್ಲ. ರಾಮಚಾರಿ ಅಂದ್ರೆ ವಿಷ್ಣು ಅಭಿಮಾನಿಗಳ ನಿರೀಕ್ಷೆಯ ಚಿತ್ರ ಕೂಡ.
ಇನ್ನು ವಿಷ್ಣುದಾದಾ ಹುಟ್ಟುಹಬ್ಬಕ್ಕೆ ರಿಲೀಸಾದ ಟೀಸರ್ ಸಖತ್ ಕ್ರೇಜ್ ಹುಟ್ಟಿಸಿದೆ. ನಿರ್ಮಾಪಕರ ಪ್ರಕಾರ ಚಿತ್ರ ದೀಪಾವಳಿಗೇ ತೆರೆಗೆ ಬರಬೇಕಿತ್ತು. ಆದರೆ ಯಾವುದೇ ಕಾರಣಕ್ಕೂ 'ರಾಜಾಹುಲಿ' ಕಳೆದ ವರ್ಷ ನವೆಂಬರ್ 1ಕ್ಕೆ ಬಂದ ಹಾಗೆ ನಾವೂ ಬರೋಣ ಅಂತ ನಿರ್ಧಾರವಾಗಿತ್ತು. ["ಲೋ ರಾಮಾಚಾರಿ ಎಲ್ಲಿದ್ದೀಯೋ" ಟೀಸರ್ ಸೂಪರ್]

ಆದ್ರೆ ದಿಪಾವಳಿಗೆ ಅಲ್ಲದಿದ್ದರೂ ರಾಜಾಹುಲಿ ಬಂದಂಗೆ ನವೆಂಬರ್ 1ಕ್ಕಾದ್ರೂ ಬರುತ್ತಾ ಅಂದುಕೊಂಡ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾಗ್ತಿದೆ. ಆದರೂ ನಾವು ಪ್ರೀತಿಸದ್ದಕ್ಕಾಗಿ ಸ್ವಲ್ಪ ಕಾಯೋದ್ರಲ್ಲೂ ಏನೋ ಒಂಥರಾ ಸಂತೋಷ ಇರುತ್ತಲ್ವಾ.
ಸತತ ನಾಲ್ಕು ಯಶಸ್ವಿ ಸಿನಿಮಾಗಳನ್ನ ಕೊಟ್ಟಿರೋ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮತ್ಯಾವಾಗ ಬರುತ್ತೆ ಅಂತ ಚಿತ್ರಪ್ರೇಮಿಗಳು ಕಾತುರದಿಂದ ಕಾದಿದ್ದಾರೆ. ಗೂಗ್ಲಿ, ರಾಜಾಹುಲಿ, ಗಜಕೇಸರಿ, ಡ್ರಾಮಾ ಚಿತ್ರಗಳ ಗೆಲುವಿನಿಂದ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸ್ಟಾರ್ ಆಗಿ ಮಿಂಚ್ತಿರೋ ಯಶ್ ಮುಂದಿನ ಸಿನಿಮಾ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ.
ರಾಧಿಕಾ ಪಂಡಿತ್ ಹಾಗೂ ಯಶ್ ಮತ್ತೆ ಜೋಡಿಯಾಗಿರೋ ಸಿನಿಮಾ ಇದು. ಎರಡೆರೆಡು ಯಶಸ್ವಿ ಸಿನಿಮಾ ಕೊಟ್ಟು ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಅನ್ನಿಸಿಕೊಂಡಿರೋ ಯಶ್-ರಾಧಿಕಾ ಪಂಡಿತ್ ಜೋಡಿಯಾಗ್ತಿರೋ ಮುಂದಿನ ಸಿನಿಮಾ ಇದು.


Click it and Unblock the Notifications











