Don't Miss!
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶ್ಯಾನೇ ಟಾಪ್ ಆಗಿತ್ತು ಆರತಕ್ಷತೆ: ಅದಿತಿ ಪ್ರಭುದೇವ ನಮ್ಮ ಸಂಬಂಧಿಕರು ಎಂದ ಸಿಎಂ!
ಸ್ಯಾಂಡಲ್ವುಡ್ನಲ್ಲಿ ಹೀರೊಗಳು ಈ ವರ್ಷ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿದ್ದಾರೆ. ಹಾಗೇ ನಾಯಕಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಸದ್ದು ಮಾಡುತ್ತಿದ್ದಾರೆ. ಇದು ಸಿನಿಪ್ರಿಯರಿಗೆ ಡಬಲ್ ಖುಷಿ ಕೊಟ್ಟಿದೆ.
ನಿನ್ನೆ (ನವೆಂಬರ್ 27) ಅರಮನೆ ಮೈದಾನದಲ್ಲಿ ನಟಿ ಅದಿತಿ ಪ್ರಭುದೇವ ಹಾಗೂ ಯಶಸ್ ಆರತಕ್ಷತೆ ಸಮಾರಂಭ ನಡೆದಿತ್ತು. ಸ್ಯಾಂಡಲ್ವುಡ್ ಹಾಗೂ ರಾಜಕೀಯ ವಲಯದ ಗಣ್ಯರಿಗೆ ಆಹ್ಬಾನ ನೀಡಲಾಗಿತ್ತು. ಅದರಂತೆ ರಾತ್ರಿ ಅರಮನೆ ಮೈದಾನ ಸ್ಯಾಂಡಲ್ವುಡ್ ಹಾಗೂ ರಾಜಕೀಯ ಮುಖಂಡರ ಸಮಾಗಮದಿಂದ ರಂಗು ರಂಗಾಗಿತ್ತು.
ಅದಿತಿ ಪ್ರಭುದೇವ ಹಾಗೂ ಯಶಸ್ ರಿಸೆಪ್ಷನ್ಗೆ ಯಾರೆಲ್ಲಾ ಗಣ್ಯರು ಆಗಮಿಸಿದ್ದರು. ಅವರು ನವ ಜೋಡಿಗೆ ಏನೆಲ್ಲಾ ಹೇಳಿದ್ರು? ರಿಸೆಪ್ಷನ್ ವಿಶೇಷತೆಗಳು ಏನಿತ್ತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅದಿತಿ ರಿಸೆಪ್ಷನ್ನಲ್ಲಿ ಗಣ್ಯರೇ ಹೈಲೈಟ್
ಅದಿತಿ ಪ್ರಭುದೇವ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಇರುವ ನಟಿ. ಕೈಯಲ್ಲಿ ಹಲವು ಸಿನಿಮಾಗಳಿವೆ. ಬೇಡಿಕೆಯ ನಟಿಯಾಗಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಅದಿತಿ ಪ್ರಭುದೇವ ನಿರ್ಧರಿಸಿದ್ದರು. ಅದರಂತೆ, ನಿನ್ನೆ ( ನವೆಂಬರ್ 27) ಆರತಕ್ಷತೆ ನಡೆದಿದೆ. ಈ ಸಮಾರಂಭಕ್ಕೆ ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ ಪಂಡಿತ್, ಮೇಘಾ ಶೆಟ್ಟಿ, ರಜನಾ ಇಂದರ್, ವಿನಯ ಪ್ರಸಾದ್, ಶರಣ್, ಚಿಕ್ಕಣ್ಣ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು. ಹಾಗೇ ರಾಜಕೀಯ ವಲಯದಿಂದ ಸಿ ಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಸೋಮಣ್ಣ, ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು.

ಸಿಎಂಗೆ ಅದಿತಿ ಪ್ರಭುದೇವ ಸಂಬಂಧಿ
ಅದಿತಿ ಪ್ರಭುದೇವ ಹಾಗೂ ಯಶಸ್ ಮದುವೆ ಸಮಾರಂಭಕ್ಕೆ ಸಿ ಎಂ ಬಸವರಾಜ ಬೊಮ್ಮಾಯಿ ಮುಖ್ಯ ಅತಿಥಿಯಾಗಿ ಆಗಿಮಿಸಿದ್ದರು. ನವ ಜೋಡಿಗೆ ಶುಭಕೋರಿದ ಬಳಿಕ ಸಿ ಎಂ ಮಾಧ್ಯಮಗಳಿಗೆ ಅದಿತಿ ತಮ್ಮ ಸಂಬಂಧಿ ಅನ್ನೋ ಸಂಗತಿಯನ್ನು ರಿವೀಲ್ ಮಾಡಿದ್ದರು. " ಅದಿತಿ ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ನನಗೆ ಆತ್ಮೀಯವಾಗಿ ಕರೆದಿದ್ದರು. ಹೀಗಾಗಿ ಬಂದು ಅವರಿಗೆ ಶುಭಾಶಯಗಳನ್ನು ಹೇಳಿದ್ದೇನೆ. ನಮ್ಮ ತಾಯಿ ಕಡೆಯಿಂದಾನೂ ಸಂಬಂಧ ಆಗಬೇಕು. ಹೀಗಾಗಿ ಬಂದು ಹಾರೈಸಿದ್ದೇನೆ. ಅವರ ಬದುಕು ಒಳ್ಳೆಯದಾಗಲಿ ಅಂತ ನಿಮ್ಮ ಮೂಲಕನೂ ಹಾರೈಸುತ್ತೇನೆ." ಎಂದು ಸಿ ಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಯಶ್-ರಾಧಿಕಾರಿಂದ ಶುಭಾಶಯ
ರಾಕಿಂಗ್ ಸ್ಟಾರ್ ಯಶ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಆರತಕ್ಷತೆಯ ಪ್ರಮುಖ ಆಕರ್ಷಣೆಯಾಗಿದ್ದರು. ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ ಪ್ರಭುದೇವ ಹಾಗೂ ಯಶಸ್ ಇಬ್ಬರಿಗೂ ಯಶ್ ದಂಪತಿ ಶುಭ ಹಾರೈಸಿದ್ದಾರೆ. " ಗಂಡು-ಹೆಣ್ಣಿಗೆ ಒಳ್ಳೆಯದಾಗಲಿ.. ಆಲ್ ದಿ ಬೆಸ್ಟ್.. ನೂರು ವರ್ಷ ಚೆನ್ನಾಗಿರಲಿ." ಅಂತ ಹಾರೈಸಿದ್ರು. ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಪ್ರಯತ್ನ ಮಾಡಿದ್ರೂ, ಯಶ್ ಈ ಬಾರಿ ಕೂಡ ಸುಳಿವು ಬಿಟ್ಟು ಕೊಡಲಿಲ್ಲ.

'ನನ್ನ ಮದುವೆಗೆ ಯಾರನ್ನೂ ಕರೆಯೋಲ್ಲ'
"ಅದಿತಿಯವ್ರ ಮದುವೆ ಆಗುತ್ತಿದೆ. ಖುಷಿಯಾಗುತ್ತಿದೆ. ಹೋದ ವಾರ ಶರಣ್ ಸರ್ ಸಿನಿಮಾ ಚೂಮಂತರ್ ಅನ್ನೋ ಸಿನಿಮಾ ಮುಗಿಸಿ ಬಂದಿದ್ದಾರೆ. ಇಬ್ಬರಿಗೂ ದೇವರು ಒಳ್ಳೆಯದು ಮಾಡಲಿ. ಮದುವೆ ಆದ್ಮೆಲೂ ಸಿನಿಮಾಗಳನ್ನು ಮಾಡಲಿ. ನಾವು ಬೇರೆಯವರ ಮದುವೆ ಅಷ್ಟೇ ಬರೋದು. ನಮ್ಮ ಮದುವೆಗೆ ಯಾರನ್ನೂ ಕರೆಯೋದಿಲ್ಲ." ಅಂತ ಚಿಕ್ಕಣ್ಣ ಹಾಸ್ಯ ಚಟಾಕಿ ಹಾರಿಸಿ, ನವ ದಂಪತಿಗೆ ಶುಭ ಹಾರೈಸಿದ್ದಾರೆ.