ನಿಶ್ಚಿತಾರ್ಥ ನೆನಪಿಸಿಕೊಂಡು ಫೋಟೋ ಹಂಚಿದ ರಾಧಿಕಾ ಪಂಡಿತ್, ಇಲ್ಲೊಂದು ವಿಶೇಷವಿದೆ!

ಚಂದನವನದ ಮುದ್ದಾದ ರಾಕಿಂಗ್ ಜೋಡಿ ಎಂದು ಕರೆಸಿಕೊಳ್ಳುವ ರಾಧಿಕಾ ಪಂಡಿತ್ ಮತ್ತು ಯಶ್ ಶನಿವಾರ (ಆಗಸ್ಟ್ 12) ತಮ್ಮ ಏಳನೇ ವರ್ಷದ ನಿಶ್ಚಿತಾರ್ಥ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ರಾಧಿಕಾ ಪಂಡಿತ್ ಈ ದಿನದ ವಿಶೇಷವನ್ನು ಒತ್ತಿ ಹೇಳುವ ಪೋಸ್ಟರ್ ಮತ್ತು ಸುಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು ವಿಶೇಷವಿದೆ.

ಹೌದು.... ರಾಧಿಕಾ ಪಂಡಿತ್ ತಮ್ಮ ಮಕ್ಕಳಾದ ಐರಾ ಮತ್ತು ಯಥರ್ವ್ ಅವರ ಚಿತ್ರಗಳನ್ನು ಆಗಾಗ್ಗೆ ಹಂಚಿಕೊಳ್ಳುವ ಅವರು, ತಮ್ಮ ಪತಿ ಯಶ್ ಅವರೊಂದಿಗೆ 7 ವರ್ಷಗಳ ನಿಶ್ಚಿತಾರ್ಥ ದಿನದ ನೆನಪಿಗಾಗಿ Instagram ಸ್ಟೋರಿಸ್‌ನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ 2016 ರಲ್ಲಿ ತಮ್ಮ ನಿಶ್ಚಿತಾರ್ಥ ದಿನದ ಆಮಂತ್ರಣ ಪತ್ರದ ಫೋಟೋವಿದೆ.

7-years-of-engagement-with-an-invitation

2016 ರಲ್ಲಿ ಎಂಗೇಜ್ ಆಗಿದ್ದ ಯಶ್- ರಾಧಿಕಾ

ಸ್ಯಾಂಡಲ್‌ವುಡ್‌ನ ಚೆಂದದ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ನಿಶ್ಚಿತಾರ್ಥ 2016 ರ ಆಗಸ್ಟ್ 12 ರಂದು ನಡೆದಿತ್ತು. ಈ ಜೋಡಿ ಡಿಸೆಂಬರ್ 2016 ರಲ್ಲಿ ಅದ್ಧೂರಿ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2018 ರಲ್ಲಿ ಮಗಳು ಐರಾ ಮತ್ತು 2019 ರಲ್ಲಿ ಮಗ ಯಥರ್ವ್ ಅವರನ್ನು ಬರಮಾಡಿಕೊಂಡಿದ್ದಾರೆ.

ನಟಿ ರಾಧಿಕಾ ಪಂಡಿತ್ ಮತ್ತು ನಟ ಯಶ್ ನಂದಗೋಕುಲ ಧಾರಾವಾಹಿಯ ಸೆಟ್‌ನಲ್ಲಿ ಭೇಟಿಯಾಗಿದ್ದರು. ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಬಹಿರಂಗಪಡಿಸದ ಇವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇಬ್ಬರು ಒಟ್ಟಿಗೆ ಮೊಗ್ಗಿನ ಮನಸು, ಡ್ರಾಮಾ, ಸಂತು ಸ್ಟ್ರೈಟ್ ಫಾರ್ವರ್ಡ್ ಮತ್ತು ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರಗಳಲ್ಲಿ ನಟಿಸಿದ್ದಾರೆ.

7-years-of-engagement-with-an-invitation

ಮಿಸಸ್ ರಾಮಾಚಾರಿ ನೈಲ್ ಆರ್ಟ್ ನೋಡಿದಿರಾ??

ಶನಿವಾರ ಮಿಸಸ್ ರಾಮಾಚಾರಿ Instagram ಸ್ಟೋರಿಸ್‌ನಲ್ಲಿ ಹಂಚಿಕೊಂಡಿರುವ ಮತ್ತೊಂದು ಪೋಟೋದಲ್ಲಿ ಅವರ ಹಸ್ತ ಮಾತ್ರ ಕಾಣಿಸುತ್ತಿದ್ದು, ಅದರಲ್ಲಿ ವಜ್ರದ ದೊಡ್ಡ ಉಂಗುರವಿದೆ. ಯಾರಾದರೂ ಸರಿ ಅದು ಮಿಸ್ಟರ್ ರಾಮಾಚಾರಿಯ ಉಡುಗೊರೆ ಎಂದು ಕಂಡು ಹಿಡಿಯುತ್ತಾರೆ. ಆದರೆ, ಇಲ್ಲಿ ಉಂಗುರಕ್ಕಿಂತ ಹೆಚ್ಚು ವಿಶೇಷವಿರುವುದು ರಾಧಿಕಾ ಅವರ ನೈಲ್ ಪಾಲಿಶ್‌ನಲ್ಲಿ.

ಎಸ್..ಹೊಸ ನೈಲ್ ಆರ್ಟ್ ಮಾಡಿಸಿರುವ ಅವರು, ವಾಟರ್ ಕಲರ್ ನೈಲ್ ಪಾಲಿಶ್ ಮೇಲೆ ಗೋಲ್ಡನ್ ಕಲರ್‌ನಲ್ಲಿ ಗೆರೆಗಳನ್ನು ಹಾಕಿಸಿದ್ದಾರೆ. ಏನೋ ಗೆರೆಗಳು ಬಿಡು ಎಂದು ಅಂದುಕೊಂಡರೇ ಅಲ್ಲಿರುವ ಅಸಲಿ ವಿಷಯ ತಿಳಿಯುವುದೇ ಇಲ್ಲ. ಅದು ಬರಿ ಗೆರೆಗಳಲ್ಲ ಎಂಬುದನ್ನು ತಿಳಿಯಲು ಚಿತ್ರವನ್ನು ಸ್ವಲ್ಪ ಓರೆಮಾಡಿ ನೋಡಬೇಕು. ಆಗ ನಿಜ ವಿಷಯ ತಿಳಿಯಲಿದೆ.

ರಾಧಿಕಾ ಪಂಡಿತ್ ಹಂಚಿಕೊಂಡಿರುವ ಎರಡನೇ ಫೋಟೋವನ್ನು ತಿರುಗಿಸಿ ನೋಡಿದರೇ ಗೋಲ್ಡನ್ ಕಲರ್ ನೈಲ್ ಪಾಲಿಶ್‌ನಲ್ಲಿ ವೈ (Y) ಎಂಬ ಅಕ್ಷರ ಕಾಣಿಸಲಿದೆ. ಅಂದರೆ ಯಶ್ ಅವರ ಹೆಸರನ್ನು ಸೂಚಕವಾಗಿ ವೈ ಎಂದು ಬರೆಸಿಕೊಂಡಿದ್ದಾರೆ. ಇದಕ್ಕೆ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಪ್ರತಿ ವರ್ಷವೂ ಒಂದೊಂದು ರೀತಿಯ ವಿಭಿನ್ನ ಪೋಸ್ಟ್‌ಗಳ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸುವ ರಾಧಿಕಾ ಪಂಡಿತ್ ಈ ಬಾರಿ ಉಗುರುಗಳ ಮೇಲೆ ಹೆಸರು ಹಾಕಿಸಿಕೊಂಡಿದ್ದಾರೆ.

More from Filmibeat

English summary
Actor Radhika Pandit celebrates 7 years of engagement with husband Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X