ಯಶ್-ರಾಧಿಕಾ ಪಂಡಿತ್ ಪುತ್ರಿಯ ಹೆಸರೇನು.? ನಾಮಕರಣ ಯಾವಾಗ.?
Recommended Video

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬ ಸದ್ಯ ಸಡಗರ ಸಂಭ್ರಮದಲ್ಲಿದೆ. ಯಶ್-ರಾಧಿಕಾ ಸಂಸಾರದಲ್ಲಿ ಸಂತಸ ಮನೆ ಮಾಡಿದೆ.
ಕಳೆದ ವರ್ಷಾಂತ್ಯದಲ್ಲಿ ಯಶ್-ರಾಧಿಕಾ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿತ್ತು. ಒಂದು ಕಡೆ ಮಗಳು ಹುಟ್ಟಿದ ಸಂತೋಷ. ಇನ್ನೊಂದು ಕಡೆ ಕೆಜಿಎಫ್ ಬ್ಲಾಕ್ ಬಸ್ಟರ್ ಆದ ಹರ್ಷ. ಡಬ್ಕಿಡಬಲ್ ಖುಷಿಯಲ್ಲಿ ಯಶ್-ರಾಧಿಕಾ ಪಂಡಿತ್ ಇದ್ದರೆ, ಅಭಿಮಾನಿಗಳು ಮಾತ್ರ ಯಶ್ ಮುದ್ದು ಮಗಳ ಹೆಸರಿನ ಕುರಿತು ಚರ್ಚೆ ನಡೆಸುತ್ತಿದ್ದಾರೆ.
ಯಶ್-ರಾಧಿಕಾ ಪಂಡಿತ್ ಮಗಳಿಗೆ 'ಯಶಿಕಾ' (ಯಶ್ ಮತ್ತು ರಾಧಿಕಾ ಪಂಡಿತ್ ಹೆಸರಿನ ಮಿಶ್ರಣ) ಅಂತ ಹೆಸರಿಡಬೇಕು ಎಂದು ಕೆಲ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ ಮಗಳ ಹೆಸರಿನ ಬಗ್ಗೆ ಇನ್ನೂ ಆಯ್ಕೆ ಮಾಡಿಲ್ಲ ಎಂದು ನಟಿ ರಾಧಿಕಾ ಪಂಡಿತ್ ಸ್ಪಷ್ಟಪಡಿಸಿದ್ದಾರೆ.

''ಮಗಳಿಗೆ ಐದು ತಿಂಗಳು ತುಂಬಿದಾಗ ನಾಮಕರಣ ಮಾಡುತ್ತೇವೆ'' ಎಂದು ನಟಿ ರಾಧಿಕಾ ಪಂಡಿತ್ ಹೇಳಿದ್ದಾರೆ. ಡಿಸೆಂಬರ್ ನಲ್ಲಿ ಜನಿಸಿದ ಯಶ್-ರಾಧಿಕಾ ಪಂಡಿತ್ ಮಗಳಿಗೆ ಸದ್ಯ ಮೂರು ತಿಂಗಳು ತುಂಬಿದೆ. ಹೀಗಾಗಿ ಯಶ್-ರಾಧಿಕಾ ಪಂಡಿತ್ ಮಗಳ ನಾಮಧ್ಯೇಯವನ್ನು ತಿಳಿದುಕೊಳ್ಳಲು ಅಭಿಮಾನಿಗಳು ಇನ್ನೂ ಎರಡು ತಿಂಗಳು ಕಾಯಬೇಕು.


Click it and Unblock the Notifications











