»   » ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ

ಟ್ವೀಟ್ಸ್ : ಯಶ್ -ರಾಧಿಕಾ ರಾಕಿಂಗ್ ಜೋಡಿ ನೂರ್ಕಾಲ ಬಾಳಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

'ನಂದಗೋಕುಲ'ದಂತೆ ಕಂಗೊಳಿಸುತ್ತಿರುವ ಗೋವಾದ ತಾಜ್ ವಿವಾಂತದಲ್ಲಿ ನೀಲಿ ಬಣ್ಣದ ಆಕರ್ಷಕ ಉಡುಗೆ ತೊಟ್ಟ ಯಶ್ -ರಾಧಿಕಾ ಅವರ 'ರಾಕಿಂಗ್' ಜೋಡಿಗೆ ಸಾಮಾಜಿಕ ಜಾಲ ತಾಣಗಳಲ್ಲೂ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

ಗೋವಾದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ರಾಜಕುಮಾರಿ ರಾಧಿಕಾ ಪಂಡಿತ್ ಅವರ ವಿವಾಹ ನಿಶ್ಚಿತಾರ್ಥ ಮಹೋತ್ಸವ ಸಾಂಗವಾಗಿ ಸಂಪನ್ನವಾಗಿದೆ. [ಉಂಗುರ ಬದಲಾಯಿಸಿಕೊಂಡ ಯಶ್-ರಾಧಿಕಾ]

ಚಂದನನವನದ ಈ ಚೆಂದದ ಜೋಡಿಗೆ ಶುಭ ಹಾರೈಸಲು ಈಗಾಗಳೇ ಹಿರಿಯ ನಟ ಅಂಬರೀಶ್ ಹಾಗೂ ಪತ್ನಿ ಸುಮಲತಾ ಸೇರಿದಂತೆ ಅನೇಕ ನಟ ನಟಿಯರು ಗೋವಾದಲ್ಲಿದ್ದಾರೆ. [ಯಶ್-ರಾಧಿಕಾ ನಿಶ್ಚಿತಾರ್ಥಕ್ಕೆ ಕೋಟಿ ವೆಚ್ಚದಲ್ಲಿ ರೆಡಿಯಾದ ವೇದಿಕೆ]

ಗೋವಾಕ್ಕೆ ತೆರಳಲು ಆಗದವರು ಡಿಸೆಂಬರ್ ನಲ್ಲಿ ನಡೆಯುವ ಮೂರು ದಿನಗಳ ಮದುವೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದಲೇ ತಯಾರಿ ನಡೆಸಿದ್ದಾರೆ.ಅಭಿಮಾನಿಗಳ ಶುಭ ಹಾರೈಕೆಗಳ ಟ್ವೀಟ್ ಗಳ ಸಂಗ್ರಹ ಇಲ್ಲಿದೆ...

ಅಭಿಮಾನಿಗಳ ಶುಭ ಹಾರೈಕೆಗಳ ಟ್ವೀಟ್ ಗಳ ಸಂಗ್ರಹ

ವರಮಹಾಲಕ್ಷ್ಮಿ ಹಬ್ಬದ ಪವಿತ್ರ ದಿನವಾದ ಇಂದು ಯಶ್ ಮತ್ತು ರಾಧಿಕಾ ಪಂಡಿತ್ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ. ಚಿತ್ರಕೃಪೆ: ನಟ ಅನೀಶ್

ನಿರಂತರವಾಗಿ ಅಪ್ಡೇಟ್ಸ್ ನೀಡುತ್ತಿರುವ ಯಶ್ ಫ್ಯಾನ್ಸ್

ನಿರಂತರವಾಗಿ ಅಪ್ಡೇಟ್ಸ್ ನೀಡುತ್ತಿರುವ ಯಶ್ ಫ್ಯಾನ್ಸ್ ಕ್ಲಬ್ ಸದಸ್ಯರು

ರಾಜ್ ಕುಟುಂಬದ ಪ್ರತಿನಿಧಿಯಾಗಿ ಅಪ್ಪು

ರಾಜ್ ಕುಟುಂಬದ ಪ್ರತಿನಿಧಿಯಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆಗಮಿಸಿದ್ದಾರೆ

ರಾಧಿಕಾ ಪಂಡಿತ್ ಫ್ಯಾನ್ ಕ್ಲಬ್ ನಿಂದ

ರಾಧಿಕಾ ಪಂಡಿತ್ ಫ್ಯಾನ್ ಕ್ಲಬ್ ನಿಂದಲೂ ನಿಶ್ಚಿತಾರ್ಥದ ಚಿತ್ರಗಳಿರುವ ಟ್ವೀಟ್ ಬರುತ್ತಿವೆ

ಅಂಬರೀಶ್ ದಂಪತಿಯಿಂದ ಶುಭ ಹಾರೈಕೆ

ಯಶ್ ಹಾಗೂ ರಾಧಿಕಾಗೆ ಅಂಬರೀಶ್ ದಂಪತಿಯಿಂದ ಶುಭ ಹಾರೈಕೆ.

ನಟ ಶರಣ್ ಅವರಿಂದ ಟ್ವೀಟ್

ನಟ ಶರಣ್ ಅವರು ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ.

English summary
Rocking Actor Yash and Sandalwood princess Radhika Pandit got engaged Today (August 12th, 2016) in Goa. Here the twitter reaction from fans, celbrities.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada