»   » ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!

ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!

Posted By:
Subscribe to Filmibeat Kannada

''ತೆರೆ ಮೇಲೆ ಪ್ರಪೋಸ್ ಮಾಡುವಾಗ, ನಮ್ಮ ಮುಖ ಭಾವನೆ ಮತ್ತು ಆಂಗಿಕ ಅಭಿನಯದಲ್ಲಿ variation ಮಾಡಿಕೊಳ್ಳಬಹುದು. ಆದ್ರೆ, ನಿಜ ಜೀವನದಲ್ಲಿ ಪ್ರಪೋಸ್ ಮಾಡುವಾಗ ಆಡುವ ಮಾತುಗಳು ಹೃದಯದಿಂದ ಬರುತ್ತೆ'' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ಖುದ್ದು ರಾಕಿಂಗ್ ಸ್ಟಾರ್ ಯಶ್.!

ಬೆಳ್ಳಿತೆರೆ ಮೇಲೆ ಮಿನುಗಲು ಆರಂಭಿಸುವುದಕ್ಕಿಂತ ಮೊದಲು ಅಂದ್ರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ದಿನಗಳಿಂದಲೂ ನಟಿ ರಾಧಿಕಾ ಪಂಡಿತ್ ಗೆ ಯಶ್ ಪರಿಚಯ.

ಇಬ್ಬರ ಗೆಳೆತನ, ಪ್ರೀತಿ ರೂಪಕ್ಕೆ ತಿರುಗಿ ಐದು ವರ್ಷಗಳಾಗಿವೆ ಅಂತ ವರದಿ ಆಗುತ್ತಿದೆ. ರಾಧಿಕಾ ಪಂಡಿತ್ ಗೆ ಯಶ್ ಯಾವಾಗ ಮತ್ತು ಹೇಗೆ ಪ್ರಪೋಸ್ ಮಾಡಿದ್ರೋ ಬಲ್ಲವರು ಅವರಿಬ್ಬರೇ.! [ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!]

ಆದರೆ, ಯಶ್ ಹಾಗೂ ರಾಧಿಕಾ ಪಂಡಿತ್ ಲವ್ ಸ್ಟೋರಿ ಕಣ್ಣಿಗೆ ಕಟ್ಟುವ ಹಾಗೆ ರಿಯಲಿಸ್ಟಿಕ್ ಆಗಿ ತೆರೆಮೇಲೆ ತಂದಿದ್ದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ. ಅದರಲ್ಲಿ ಯಶ್ ಪ್ರಪೋಸ್ ಮಾಡುವ ರೀತಿಗೆ ರಾಧಿಕಾ ಅಲ್ಲ, ಯಾವ ಹುಡುಗಿ ಬೇಕಾದರೂ ಬೀಳ್ತಾರೆ.! ಮುಂದೆ ಓದಿ...

ಟೈಟಲ್ ಇಟ್ಟಾಗಲೇ ಅರ್ಥ ಮಾಡಿಕೊಳ್ಳಬೇಕಿತ್ತು.!

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಎನ್ನುವ ಶೀರ್ಷಿಕೆ ಇಟ್ಟು, ಚಿತ್ರಕ್ಕೆ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಅಂತ ಜಗಜ್ಜಾಹೀರಾದಾಗಲೇ ರೀಲ್ ನಲ್ಲಿ ಮಾತ್ರ ಅಲ್ಲ, ಈ ಜೋಡಿ ರಿಯಲ್ ನಲ್ಲೂ 'ಮಿಸ್ಟರ್ ಅಂಡ್ ಮಿಸಸ್' ಆಗಲಿದೆ ಅಂತ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿತ್ತು. [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

ಸಿನಿಮಾದಲ್ಲಿದೆ ವಾಸ್ತವಕ್ಕೆ ಹತ್ತಿರವಾದ ಡೈಲಾಗ್ಸ್.!

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ರಿಯಲ್ ಲವ್ ಸ್ಟೋರಿಗೆ ಸಿಂಕ್ ಆಗುವ ಕೆಲ ಡೈಲಾಗ್ ಗಳಿವೆ. ಅದರಲ್ಲಿ ಇದೂ ಒಂದು -

ರಾಧಿಕಾ ಫ್ರೆಂಡ್ಸ್ ಗೆ ಯಶ್ ಹೇಳ್ತಾರೆ - ''ನಾವಿಬ್ಬರು 'ಜಸ್ಟ್ ಫ್ರೆಂಡ್ಸ್', ನಮ್ಮ ನಡುವೆ ಏನಿಲ್ಲ!''

ಇದನ್ನ ನೋಡಿದ ರಾಧಿಕಾ, ಯಶ್ ಬಳಿ ಬಂದು - ''ನಾವಿಬ್ಬರು 'ಜಸ್ಟ್ ಫ್ರೆಂಡ್ಸ್' ಅಂತ ಒತ್ತಿ ಒತ್ತಿ ಹೇಳೋ ಅವಶ್ಯಕತೆ ಏನಿತ್ತು'' ಅಂತ ಪ್ರಶ್ನೆ ಮಾಡ್ತಾರೆ.

ಆಗ ಯಶ್ ಹೇಳ್ತಾರೆ - ''ನಾವಿಬ್ಬರು ಏನು ಅಂತ ಎಲ್ಲರಿಗೂ ಗೊತ್ತಿದೆ. ಅದನ್ನ ಅವರೂ ಕೇಳಬಾರದು, ನಾವೂ ಹೇಳಬಾರದು.''

ನಿಜ ಜೀವನದಲ್ಲೂ ಯಶ್ ಹಾಗೂ ರಾಧಿಕಾ ಅನುಸರಿಸಿದ್ದು ಇದನ್ನೇ.!

ಲವ್ ಅಟ್ ಫಸ್ಟ್ ಸೈಟ್ ಹೀಗೆ ಆಗಿರ್ಬಹುದಾ.?

ನಟಿ ರಾಧಿಕಾ ಪಂಡಿತ್ ರನ್ನ ಮೊಟ್ಟ ಮೊದಲ ಬಾರಿ ನೋಡಿದಾಗ ಯಶ್ ಹೃದಯದಲ್ಲಿ ಗಿಟಾರ್ ಬಾರಿಸಿತ್ತು. ಅದಕ್ಕೆ ತಕ್ಕ ಹಾಗೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಇರುವ ಈ ಸೀನ್ ನೋಡಿ....

ಇಷ್ಟ ಅಂತ ಹೀಗೂ ಹೇಳ್ಬಹುದು.!

ಒಂದೇ ಸಮ ಫೋನ್ ಮಾಡ್ತಿದ್ರೂ, ಪಿಕ್ ಮಾಡ್ಲಿಲ್ಲ ಎಂಬ ಕಾರಣಕ್ಕೆ ಮುಖ ಊದಿಸಿಕೊಂಡು ಯಶ್ ಗೆ ರಾಧಿಕಾ ಆವಾಝ್ ಹಾಕುವ ಈ ಸೀನ್ ಬೊಂಬಾಟ್. ಇದಾದ್ಮೇಲೆ ನೋಡಿ ಯಶ್ ಗೆ ರಾಧಿಕಾನೇ ಬೆಸ್ಟ್ ಅಂತ ಅನಿಸೋದು.

ಇದೇ ತರಹ ಪ್ರಪೋಸ್ ಮಾಡಿದ್ರಾ ಯಶ್.?

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಯಶ್ ಪ್ರಪೋಸ್ ಮಾಡುವ ರೀತಿ ನೋಡಿದ್ರೆ, ರಾಧಿಕಾ ಪಂಡಿತ್ ಮಾತ್ರ ಅಲ್ಲ. ಯಾವ ಹುಡುಗಿ ಬೇಕಾದರೂ ಬೀಳ್ತಾರೆ.! ಬಹುಶಃ ನಿಜ ಜೀವನದಲ್ಲೂ ಯಶ್ ಹೀಗೆ ರಾಧಿಕಾ ಪಂಡಿತ್ ಗೆ ಪ್ರಪೋಸ್ ಮಾಡಿದ್ರಾ.? ಯಾವುದಕ್ಕೂ ಒಮ್ಮೆ ವಿಡಿಯೋ ನೋಡಿ....

ರಿಯಲ್ ಕೆಮಿಸ್ಟ್ರಿ ಅನ್ನೋದು ಇದಕ್ಕೆ.!

ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ನಿಜವಾಗ್ಲೂ ಕೆಮಿಸ್ಟ್ರಿ ಇದೇ ಅನ್ನೋದಕ್ಕೆ ಇದೇ ಹಾಡು ಸಾಕ್ಷಿ....

ಇಬ್ಬರಿಗೂ ಕೋಪ-ಜಂಬ

ಪ್ರೀತಿ ಅಂದ್ಮೇಲೆ ಕಿತ್ತಾಟ, ಗಲಾಟೆ ಇದ್ದಿದ್ದೇ. ನಿಜ ಜೀವನದಲ್ಲಿ ಯಶ್ ಹಾಗೂ ರಾಧಿಕಾ ಮುನಿಸಿಕೊಂಡಿದ್ರಾ.? ನಾವಂತೂ ನೋಡಿಲ್ಲ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಇರುವ ಈ ಬ್ರೇಕಪ್ ಸೀನ್ ನೋಡ್ಕೊಂಡ್ ಬನ್ನಿ....

ಮಜವಾದ ಸೀನ್....

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದಲ್ಲಿ ಸಖತ್ ಮಜವಾಗಿರುವ ಶಾಪಿಂಗ್ ಸೀನ್ ಇಲ್ಲಿದೆ ನೋಡಿ....

ನಿಜವಾಗಲೂ ಮದುವೆ.!

ತೆರೆಮೇಲೆ ಯಶ್ ಹಾಗೂ ರಾಧಿಕಾ ಪಂಡಿತ್ ಲವ್ ಮಾಡಿ, ಕಿತ್ತಾಡಿ, ಮದುವೆ ಮಾಡಿಕೊಂಡು 'ಮಿಸ್ಟರ್ ಅಂಡ್ ಮಿಸಸ್' ಆಗಿದ್ದು ಆಯ್ತು. ಈಗ 'ರಿಯಲ್' ಆಗಿ ಆಗೋದು ಬಾಕಿ. ಅವರ ಜೀವನ ಸಿನಿಮಾದಷ್ಟೇ ಕಲರ್ ಫುಲ್ ಆಗಿರಲಿ ಅಂತ ನೀವೂ ಹಾರೈಸಿ...

English summary
Kannada Actor Yash and Kannada Actress Radhika Pandit are finally getting engaged tomorrow (August 12th, 2016) in Goa. On this occasion, here is the collection of Romantic Scenes of Couple in the movie 'Mr and Mrs Ramachari'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada