'ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು

By Bharath Kumar

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಎರಡು ಕುಟುಂಬಗಳು ಶಾಸ್ತ್ರ, ಸಂಪ್ರದಾಯಗಳಿಗೆ ಚಾಲನೆ ನೀಡಿವೆ.

ಈ ಮಧ್ಯೆ ಯಶ್-ರಾಧಿಕಾ ಮದುವೆ ವಿಶೇಷವಾಗಿ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮವನ್ನ ಅಯೋಜಿಸಲಾಗುವುದು ಎಂದು ಫಿಲ್ಮಿಬೀಟ್ ನಲ್ಲಿ ನಾವೇ ಹೇಳಿದ್ವಿ. ಇದೀಗ, ಸಂಗೀತ ಹಾಗೂ ಮೆಹಂದಿ ಕಾರ್ಯಕ್ರಮ ಅದ್ದೂರಿಯಾಗಿ ನೆರೆವೇರಿದ್ದು, ಕಲರ್ ಫುಲ್ ಫೋಟೋಸ್ ನಿಮ್ಮ ಫಿಲ್ಮಿ ಬೀಟ್ ಕನ್ನಡಗೆ ಲಭ್ಯವಾಗಿದೆ.[ಮದುವೆಗೂ ಮುಂಚೆ ರಾಧಿಕಾ ಪಂಡಿತ್ ಕೊನೆ ಪಾರ್ಟಿ !]

ಖಾಸಗಿ ಹೋಟೆಲ್ ನಲ್ಲಿ ನಡೆದ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮದಲ್ಲಿ, ಸ್ಯಾಂಡಲ್ ವುಡ್ ನ ನಟ-ನಟಿಯರು, ಅತಿಥಿಗಳಾಗಿ ಭಾಗವಹಿಸಿ, ಸಖತ್ ಎಂಜಾಯ್ ಮಾಡಿದ್ದಾರೆ.

'ಸಂಗೀತ-ಮೆಹಂದಿ' ಕಾರ್ಯಕ್ರಮ

'ಸಂಗೀತ-ಮೆಹಂದಿ' ಕಾರ್ಯಕ್ರಮ

ನಿನ್ನೆ (ಡಿಸೆಂಬರ್ 6) ಬೆಂಗಳೂರಿನ ಹೊರವಲಯದ ಖಾಸಗಿ ಹೋಟೆಲ್ ನಲ್ಲಿ ಯಶ್-ರಾಧಿಕಾ ಅವರ ಮದುವೆಗೆ ವಿಶೇಷವಾಗಿ 'ಸಂಗೀತ-ಮೆಹಂದಿ' ಕಾರ್ಯಕ್ರಮವನ್ನ ಅಯೋಜಿಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಕೆಲ ಸಿನಿತಾರೆಯರು ಭಾಗಿವಹಿಸಿ, ಸಖತ್ ಮೋಜು ಮಸ್ತಿ ಮಾಡಿದ್ದಾರೆ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?]

ಪ್ರಜ್ವಲ್ ದೇವರಾಜ್ ದಂಪತಿ ಭಾಗಿ

ಪ್ರಜ್ವಲ್ ದೇವರಾಜ್ ದಂಪತಿ ಭಾಗಿ

ಯಶ್-ರಾಧಿಕಾ ಪಂಡಿತ್ ಅವರು ಅಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಪತ್ನಿ ರಾಗಿಣಿ ಚಂದ್ರನ್ ಭಾಗಿಯಾಗಿದ್ದರು.['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ಪ್ರಿಯಾಂಕ ಉಪೇಂದ್ರ ಭಾಗಿ

ಪ್ರಿಯಾಂಕ ಉಪೇಂದ್ರ ಭಾಗಿ

ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿಯ ಸಂಗೀತ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಪಾಲ್ಗೊಂಡು ವಧು-ವರರಿಗೆ ಶುಭ ಹಾರೈಸಿದರು.

ಪ್ರೇಮ್-ವಿಜಯ ರಾಘವೇಂದ್ರ ದಂಪತಿ

ಪ್ರೇಮ್-ವಿಜಯ ರಾಘವೇಂದ್ರ ದಂಪತಿ

ನೆನಪಿರಲಿ ಪ್ರೇಮ್ ದಂಪತಿ ಹಾಗೂ ವಿಜಯ ರಾಘವೇಂದ್ರ ದಂಪತಿ ಕೂಡ 'ಯಶ್-ರಾಧಿಕಾ' ಅವರು ಸಂಗೀತ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದರು.

ಯಶ್-ರಾಧಿಕಾ ಪೋಸ್

ಯಶ್-ರಾಧಿಕಾ ಪೋಸ್

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ನೂತನ ವಧು-ವರರಾದ ಯಶ್ ಹಾಗೂ ರಾಧಿಕಾ ಅವರು, ಸಖತ್ ಕಲರ್ ಫುಲ್ ಆಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ವೈಟ್ ಕುರ್ತಾ ತೊಟ್ಟಿದ್ದ ಯಶ್ ಜೊತೆ ಹಳದಿ ಬಣ್ಣದ ಸೀರೆಯುಟ್ಟು ರಾಧಿಕಾ ಮಿಂಚಿದರು.

ರಾಧಿಕಾ ಕೈಯಲ್ಲಿ ಮದರಂಗಿ

ರಾಧಿಕಾ ಕೈಯಲ್ಲಿ ಮದರಂಗಿ

ನಿನ್ನೆ ನಡೆದ ಮೆಹಂದಿ ಶಾಸ್ತ್ರದಲ್ಲಿ ಮದುವೆ ಹುಡುಗಿ ರಾಧಿಕಾ ಪಂಡಿತ್, ತನ್ನ ಎರಡು ಕೈಗಳಿಗೆ ಮೆಹಂದಿ ಹಾಕಿಸಿಕೊಂಡು ನಗು ಬೀರಿದರು

'ಯಶ್-ರಾಧಿಕಾ' ಡ್ಯಾನ್ಸ್

'ಯಶ್-ರಾಧಿಕಾ' ಡ್ಯಾನ್ಸ್

ಇನ್ನೂ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು ಸ್ಟೇಜ್ ಮೇಲೆ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ತಮ್ಮದೇ ಸಿನಿಮಾ ಹಾಡುಗಳ ಜೊತೆ, ಇತರೆ ಸಿನಿಮಾ ಹಾಡುಗಳಿಗೂ ತಾರಾಜೋಡಿ ಹೆಜ್ಜೆ ಹಾಕಿದ್ದಾರೆ. (ಡ್ಯಾನ್ಸ್ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ)

More from Filmibeat

English summary
Rocking Star Yash and Radhika Pandit wedding is scheduled on December 9th, 10th and 11th at Tripura Vasini, Bengaluru Palace Ground. Here the Music Programme of Yash Radhika Pandit Marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X