'ಯಶಿಕಾ' ಬಾಳಲ್ಲಿ 'ದೇವತೆ' ಬಂದು ಒಂದು ವರ್ಷ: ಹ್ಯಾಪಿ ಬರ್ತಡೇ ಆಯ್ರಾ
Recommended Video
ಅದು ಡಿಸೆಂಬರ್ 2, 2018.. ಭಾನುವಾರ ಬೆಳಗ್ಗೆ.. ಹೆರಿಗೆ ನೋವು ಕಾಣಿಸಿಕೊಂಡ ಕೂಡಲೆ ನಟಿ ರಾಧಿಕಾ ಪಂಡಿತ್ ರನ್ನ ಅದಾಗಲೇ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6.30 ರ ಸುಮಾರಿಗೆ ರಾಧಿಕಾ ಪಂಡಿತ್ ಮಡಿಲೊಳಗೆ ಪುಟ್ಟ ಕಂದಮ್ಮ ನಲಿದಾಡುತ್ತಿತ್ತು. ಆ ಕ್ಷಣಕ್ಕೆ ಇಂದು ವರುಷದ ಸಂಭ್ರಮ.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ದೇವತೆ ಬಂದು ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಹೌದು, 'ಯಶಿರಾ' ದಂಪತಿಯ ಮೊದಲ ಮಗಳು ಆಯ್ರಾಗೆ ಇಂದು ಹುಟ್ಟುಹಬ್ಬ.
ಯಶ್-ರಾಧಿಕಾ ಪಂಡಿತ್ ಕುಟುಂಬದಲ್ಲಿ ಎರಡನೇ ಮಗುವಿನ ಸಂತಸ ನೆಲೆಸಿರುವಾಗಲೇ, ಮೊದಲ ಮಗಳ ಮೊದಲ ಹುಟ್ಟುಹಬ್ಬದ ಸಡಗರವೂ ಬಂದಿದೆ. ಮುಂದೆ ಓದಿರಿ...

ಮಗಳಿಗೆ ರಾಧಿಕಾ ವಿಶ್ ಮಾಡಿರುವುದು ಹೀಗೆ...
''ನನ್ನ ಹೃದಯ ಹಾಗೂ ಆತ್ಮದ ಒಂದು ಭಾಗ ನೀನು. ನನ್ನ ದೇವತೆ ನಿನಗೆ ಹುಟ್ಟುಹಬ್ಬದ ಶುಭಾಶಯಗಳು'' ಎನ್ನುತ್ತ ಮಗಳು ಆಯ್ರಾಗೆ ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ. ಜೊತೆಗೆ ಒಂದು ಮುದ್ದಾದ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಸ್ಪೆಷಲ್ ಫೋಟೋಶೂಟ್
ಮೊದಲ ಹುಟ್ಟುಹಬ್ಬಕ್ಕೂ ಮುನ್ನ ಯಶ್-ರಾಧಿಕಾ ಪಂಡಿತ್ ತಮ್ಮ ಮಗಳ ಫೋಟೋಶೂಟ್ ಮಾಡಿಸಿದ್ದರು. ನೀಲಿ, ಬಿಳಿ ಮತ್ತು ಕೆಂಪು ಬಣ್ಣ ಮಿಶ್ರಿತ ಫ್ರಾಕ್ ಧರಿಸಿ, ಕ್ಯಾಮರಾ ಮುಂದೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು ಆಯ್ರಾ.

ಬಿಸಿಲಲ್ಲಿ ನೋಡುವುದು ಹೇಗೆ.?
ಬಿಸಿಲಲ್ಲಿ ನೋಡುವುದು ಹೇಗೆ ಅಂತ ಕೇಳಿದರೆ, ಮೇಲೆ ನೋಡುತ್ತಾ ಮುದ್ದು ಮುದ್ದಾಗಿ ಎಕ್ಸ್ ಪ್ರೆಶನ್ ಕೊಟ್ಟಿದ್ದ ಆಯ್ರಾ ವಿಡಿಯೋನ ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಪುಟ್ಟ ಸಹೋದರನ ಜೊತೆಗೆ ಮೊದಲ ಬರ್ತಡೇ
ಆಯ್ರಾ ಮೊದಲ ಹುಟ್ಟುಹಬ್ಬ ತುಂಬಾನೇ ವಿಶೇಷ. ಯಾಕಂದ್ರೆ, ಆಯ್ರಾಳ ಮೊದಲ ಬರ್ತಡೇಗೆ ವಿಶ್ ಮಾಡಲು ಪುಟಾಣಿ ಸಹೋದರ ಎಂಟ್ರಿಕೊಟ್ಟಿದ್ದಾನೆ. ಕಳೆದ ಅಕ್ಟೋಬರ್ 30 ರಂದು ಗಂಡು ಮಗುವಿಗೆ ರಾಧಿಕಾ ಪಂಡಿತ್ ಜನ್ಮ ನೀಡಿದ್ದರು. ಒಂದು ತಿಂಗಳ ಕಂದಮ್ಮನ ಆರೈಕೆಯಲ್ಲಿ ರಾಧಿಕಾ ಪಂಡಿತ್ ತೊಡಗಿರುವಾಗಲೇ, ಒಂದು ವರ್ಷದ ಆಯ್ರಾ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾಳೆ. ಹ್ಯಾಪಿ ಬರ್ತಡೇ ಆಯ್ರಾ....


Click it and Unblock the Notifications











