»   » 'ಯಶ್-ರಾಧಿಕಾ' ಹನಿಮೂನ್ ಗೆ ಎಲ್ಲಿ ಹೋಗಿದ್ದಾರೆ ಗೊತ್ತಾ?

'ಯಶ್-ರಾಧಿಕಾ' ಹನಿಮೂನ್ ಗೆ ಎಲ್ಲಿ ಹೋಗಿದ್ದಾರೆ ಗೊತ್ತಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನವ ದಂಪತಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಸದ್ಯ ಹನಿಮೂನ್ ಗಾಗಿ ಫಾರೀನ್ ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಹೀಗಾಗಿ, ಯಶ್-ರಾಧಿಕಾ ಇಬ್ಬರ ಮೊಬೈಲ್ ವಾಟ್ಸಪ್ ಸ್ಟೇಟಸ್ ಕೂಡ 'ಡೂ ನಾಟ್ ಡಿಸ್ಟರ್ಬ್' ಅಂತ ಹಾಕಲಾಗಿದೆ.['ಮಿಸ್ಟರ್ ಅಂಡ್ ಮಿಸಸ್' ಆದ ಯಶ್-ರಾಧಿಕಾ ಪಂಡಿತ್ ]

ಆದ್ರೆ, 'ಮಿಸ್ಟರ್ ಅಂಡ್ ಮಿಸಸ್' ಆದ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಹನಿಮೂನ್ ಪ್ಲಾನ್ ಗಾಗಿ ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಒಂದು ಫೋಟೋ, ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಆದ್ರೀಗ, ಚಂದನವದನ ಕ್ಯೂಟ್ ಕಪಲ್ಸ್ ಎಲ್ಲೀದ್ದಾರೆ ಎಂಬುದನ್ನ ಸ್ವತಃ ಸ್ಟಾರ್ ದಂಪತಿಗಳೇ ಹೇಳಿದ್ದಾರೆ.[ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]

Yash Radhika Pandit's Honeymoon Pic

ಹೌದು, ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರು 'ಫೆಸಿಫಿಕ್ ಸಾಗರ'ದ ಬಳಿ ನಿಂತು ತೆಗೆದುಕೊಂಡಿರುವ ಸೆಲ್ಫಿಯನ್ನ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದು, ತಾವಿಬ್ಬರು ಅಮೇರಿಕಾದ ಸುತ್ತಾ ಮುತ್ತಾ ತಮ್ಮ ಹನಿಮೂನ್ ಎಂಜಾಯ್ ಮಾಡುತ್ತಿದ್ದೇವೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.[ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ ]

ಡಿಸೆಂಬರ್ 9ರಂದು ನಟ ಯಶ್ ಹಾಗೂ ರಾಧಿಕಾ ಪಂಡಿತ್ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

English summary
Sandalwood's New couple Yash and Radhika Pandit got married earlier this month. The couple is now enjoying wedded bliss, in the faraway shores of America, where they are on their honeymoon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada