ಯಶ್-ರಾಧಿಕಾ 'ಮೊಗ್ಗಿನ ಮನಸು' ಚಿತ್ರಕ್ಕೆ 13ರ ಸಂಭ್ರಮ
ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಇಂಡಸ್ಟ್ರಿಗೆ ಬಂದು 13 ವರ್ಷ ಕಳೆದಿದೆ. ರಾಕಿ ಅಭಿಮಾನಿಗಳು 'Yashism' ಎನ್ನುವ ಹೆಸರಿನಲ್ಲಿ ಸಂಭ್ರಮಿಸುತ್ತಿದ್ದಾರೆ. 2008ರಲ್ಲಿ ತೆರೆಗೆ ಬಂದ 'ಮೊಗ್ಗಿನ ಮನಸು' ಚಿತ್ರದ ಮೂಲಕ ನಾಯಕನಟನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್.
ರಾಹುಲ್ ಎಂಬ ಯುವಕನ ಪಾತ್ರದಲ್ಲಿ ಜನರ ಮನಸ್ಸು ಕದ್ದಿದ್ದ ಯಶ್ ಈಗ ರಾಕಿ ಭಾಯ್ ಆಗಿ ರಾರಾಜಿಸುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್‌ಗೂ 'ಮೊಗ್ಗಿನ ಮನಸು' ಚೊಚ್ಚಲ ಸಿನಿಮಾ. ಈ ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿದ ಚಿತ್ರ ಇದು. ಸಿನಿಮಾ 13 ವರ್ಷ ಪೂರೈಸಿದ ಹಿನ್ನೆಲೆ ನಿರ್ದೇಶಕ ಶಶಾಂಕ್ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಯಶ್-ರಾಧಿಕಾಗೆ ಅದೃಷ್ಟ ತಂದಿಟ್ಟ ಚಿತ್ರ
2007ರಲ್ಲಿ 'ಜಂಭದ ಹುಡುಗಿ' ಸಿನಿಮಾದಲ್ಲಿ ಯಶ್ ಸಣ್ಣ ಪಾತ್ರವೊಂದನ್ನು ಮಾಡಿದ್ದರು. 2008ರಲ್ಲಿ ರಿಲೀಸ್ ಆದ 'ಮೊಗ್ಗಿನ ಮನಸು' ಚಿತ್ರದಲ್ಲಿ ನಾಯಕನಟನಾಗಿ ಪರಿಚಯ ಆದರು. ರಾಧಿಕಾ ಪಂಡಿತ್‌ಗೆ ಇದು ಚೊಚ್ಚಲ ಸಿನಿಮಾ. ಕಿರುತೆರೆಯಲ್ಲಿ 'ನಂದಗೋಕುಲ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್-ರಾಧಿಕಾ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಒಟ್ಟಿಗೆ ಸಿನಿ ಜರ್ನಿ ಆರಂಭಿಸಿದರು. 'ಸಿಕ್ಸರ್' ನಿರ್ದೇಶಿಸಿದ್ದ ಶಶಾಂಕ್‌ಗೆ ಇದು ಎರಡನೇ ಚಿತ್ರ. ಶುಭಾ ಪೂಂಜಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, 'ಮೊಗ್ಗಿನ ಮನಸು' ಬ್ರೇಕ್ ಕೊಡ್ತು.

ಫಿಲಂ ಫೇರ್ ಪ್ರಶಸ್ತಿ ಬಾಚಿದ ಚಿತ್ರ
'ಮೊಗ್ಗಿನ ಮನಸು' ಸಿನಿಮಾಗೆ ಐದು ಫಿಲಂ ಫೇರ್ ಪ್ರಶಸ್ತಿ ಲಭಿಸಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ (ರಾಧಿಕಾ ಪಂಡಿತ್), ಅತ್ಯುತ್ತಮ ಪೋಷಕ ನಟ (ಯಶ್), ಅತ್ಯುತ್ತಮ ಪೋಷಕ ನಟಿ (ಶುಭಾ ಪೂಂಜಾ) ಫಿಲಂ ಫೇರ್ ಅವಾರ್ಡ್ ಲಭಿಸಿತ್ತು.

ರಾಧಿಕಾಗೆ ರಾಜ್ಯ ಪ್ರಶಸ್ತಿ
2008-09ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ನಟಿ ರಾಧಿಕಾ ಪಂಡಿತ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರತಿದೆ. ಚೊಚ್ಚಲ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಹಗ್ಗೆಳಿಕೆಗೆ ರಾಧಿಕಾ ಪಾತ್ರರಾದರು.
Recommended Video

ರಾಕಿ ಭಾಯ್ ಜರ್ನಿ
'ಮೊಗ್ಗಿನ ಮನಸು' ಸಿನಿಮಾ ನಂತರ ಯಶ್ ಹಿಂದೆ ತಿರುಗಿ ನೋಡಲಿಲ್ಲ. ಆರಂಭದಲ್ಲಿ ಲವರ್ ಬಾಯ್ ಪಾತ್ರಗಳಲ್ಲಿ ಹೆಚ್ಚು ಮಿಂಚಿದ ಯಶ್ ನಂತರ ಮಾಸ್ ಹೀರೋ ಆಗಿ ಅಬ್ಬರಿಸಿದರು. ರಾಕಿ, ಮೊದಲ ಸಲಾ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್‌ಪೀಸ್, ಸಂತು ಸ್ಟ್ರೈಟ್ ಫಾರ್ವಡ್ ಹಾಗೂ ಕೆಜಿಎಫ್ ವರೆಗೂ ಯಶ್ ಜರ್ನಿ ಸ್ಫೂರ್ತಿದಾಯಕವಾಗಿದೆ. ನಿರ್ದೇಶಕ ಶಶಾಂಕ್ ಸಹ ಈ ಜರ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.


Click it and Unblock the Notifications











