For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾ 'ಮೊಗ್ಗಿನ ಮನಸು' ಚಿತ್ರಕ್ಕೆ 13ರ ಸಂಭ್ರಮ

  |

  ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಇಂಡಸ್ಟ್ರಿಗೆ ಬಂದು 13 ವರ್ಷ ಕಳೆದಿದೆ. ರಾಕಿ ಅಭಿಮಾನಿಗಳು 'Yashism' ಎನ್ನುವ ಹೆಸರಿನಲ್ಲಿ ಸಂಭ್ರಮಿಸುತ್ತಿದ್ದಾರೆ. 2008ರಲ್ಲಿ ತೆರೆಗೆ ಬಂದ 'ಮೊಗ್ಗಿನ ಮನಸು' ಚಿತ್ರದ ಮೂಲಕ ನಾಯಕನಟನಾಗಿ ಸ್ಯಾಂಡಲ್‌ವುಡ್ ಪ್ರವೇಶಿಸಿದ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್.

  ರಾಹುಲ್ ಎಂಬ ಯುವಕನ ಪಾತ್ರದಲ್ಲಿ ಜನರ ಮನಸ್ಸು ಕದ್ದಿದ್ದ ಯಶ್ ಈಗ ರಾಕಿ ಭಾಯ್ ಆಗಿ ರಾರಾಜಿಸುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್‌ಗೂ 'ಮೊಗ್ಗಿನ ಮನಸು' ಚೊಚ್ಚಲ ಸಿನಿಮಾ. ಈ ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ರೂಪಿಸಿದ ಚಿತ್ರ ಇದು. ಸಿನಿಮಾ 13 ವರ್ಷ ಪೂರೈಸಿದ ಹಿನ್ನೆಲೆ ನಿರ್ದೇಶಕ ಶಶಾಂಕ್ ಟ್ವಿಟ್ಟರ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಯಶ್-ರಾಧಿಕಾಗೆ ಅದೃಷ್ಟ ತಂದಿಟ್ಟ ಚಿತ್ರ

  ಯಶ್-ರಾಧಿಕಾಗೆ ಅದೃಷ್ಟ ತಂದಿಟ್ಟ ಚಿತ್ರ

  2007ರಲ್ಲಿ 'ಜಂಭದ ಹುಡುಗಿ' ಸಿನಿಮಾದಲ್ಲಿ ಯಶ್ ಸಣ್ಣ ಪಾತ್ರವೊಂದನ್ನು ಮಾಡಿದ್ದರು. 2008ರಲ್ಲಿ ರಿಲೀಸ್ ಆದ 'ಮೊಗ್ಗಿನ ಮನಸು' ಚಿತ್ರದಲ್ಲಿ ನಾಯಕನಟನಾಗಿ ಪರಿಚಯ ಆದರು. ರಾಧಿಕಾ ಪಂಡಿತ್‌ಗೆ ಇದು ಚೊಚ್ಚಲ ಸಿನಿಮಾ. ಕಿರುತೆರೆಯಲ್ಲಿ 'ನಂದಗೋಕುಲ' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದ ಯಶ್-ರಾಧಿಕಾ 'ಮೊಗ್ಗಿನ ಮನಸು' ಸಿನಿಮಾ ಮೂಲಕ ಒಟ್ಟಿಗೆ ಸಿನಿ ಜರ್ನಿ ಆರಂಭಿಸಿದರು. 'ಸಿಕ್ಸರ್' ನಿರ್ದೇಶಿಸಿದ್ದ ಶಶಾಂಕ್‌ಗೆ ಇದು ಎರಡನೇ ಚಿತ್ರ. ಶುಭಾ ಪೂಂಜಾ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, 'ಮೊಗ್ಗಿನ ಮನಸು' ಬ್ರೇಕ್ ಕೊಡ್ತು.

  ಕೆಜಿಎಫ್ 2 ಬಗ್ಗೆ ತೆಲುಗು ಡಬ್ಬಿಂಗ್ ಕಲಾವಿದೆ ಬಿಚ್ಚಿಟ್ಟ ಥ್ರಿಲ್ಲಿಂಗ್ ವಿಷಯಕೆಜಿಎಫ್ 2 ಬಗ್ಗೆ ತೆಲುಗು ಡಬ್ಬಿಂಗ್ ಕಲಾವಿದೆ ಬಿಚ್ಚಿಟ್ಟ ಥ್ರಿಲ್ಲಿಂಗ್ ವಿಷಯ

  ಫಿಲಂ ಫೇರ್ ಪ್ರಶಸ್ತಿ ಬಾಚಿದ ಚಿತ್ರ

  ಫಿಲಂ ಫೇರ್ ಪ್ರಶಸ್ತಿ ಬಾಚಿದ ಚಿತ್ರ

  'ಮೊಗ್ಗಿನ ಮನಸು' ಸಿನಿಮಾಗೆ ಐದು ಫಿಲಂ ಫೇರ್ ಪ್ರಶಸ್ತಿ ಲಭಿಸಿತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟಿ (ರಾಧಿಕಾ ಪಂಡಿತ್), ಅತ್ಯುತ್ತಮ ಪೋಷಕ ನಟ (ಯಶ್), ಅತ್ಯುತ್ತಮ ಪೋಷಕ ನಟಿ (ಶುಭಾ ಪೂಂಜಾ) ಫಿಲಂ ಫೇರ್ ಅವಾರ್ಡ್ ಲಭಿಸಿತ್ತು.

  ರಾಧಿಕಾಗೆ ರಾಜ್ಯ ಪ್ರಶಸ್ತಿ

  ರಾಧಿಕಾಗೆ ರಾಜ್ಯ ಪ್ರಶಸ್ತಿ

  2008-09ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯಲ್ಲಿ ನಟಿ ರಾಧಿಕಾ ಪಂಡಿತ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರತಿದೆ. ಚೊಚ್ಚಲ ಸಿನಿಮಾದಲ್ಲೇ ರಾಜ್ಯ ಪ್ರಶಸ್ತಿ ಪಡೆದ ಹಗ್ಗೆಳಿಕೆಗೆ ರಾಧಿಕಾ ಪಾತ್ರರಾದರು.

  ಯಶ್ ಹೊಸ ಮನೆ ಗೃಹಪ್ರವೇಶ; ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿಯಶ್ ಹೊಸ ಮನೆ ಗೃಹಪ್ರವೇಶ; ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿ

  ಡಾ.ರಾಜ್ ಬರೆದ ಒಂದೇ ಪತ್ರಕ್ಕೆ ರವಿಚಂದ್ರನ್ ವಿರುದ್ಧ ಪ್ರತಿಭಟನೆ ಕೈಬಿಟ್ಟ ಕನ್ನಡಿಗರು | Filmibeat Kannada
  ರಾಕಿ ಭಾಯ್ ಜರ್ನಿ

  ರಾಕಿ ಭಾಯ್ ಜರ್ನಿ

  'ಮೊಗ್ಗಿನ ಮನಸು' ಸಿನಿಮಾ ನಂತರ ಯಶ್ ಹಿಂದೆ ತಿರುಗಿ ನೋಡಲಿಲ್ಲ. ಆರಂಭದಲ್ಲಿ ಲವರ್ ಬಾಯ್ ಪಾತ್ರಗಳಲ್ಲಿ ಹೆಚ್ಚು ಮಿಂಚಿದ ಯಶ್ ನಂತರ ಮಾಸ್ ಹೀರೋ ಆಗಿ ಅಬ್ಬರಿಸಿದರು. ರಾಕಿ, ಮೊದಲ ಸಲಾ, ರಾಜಧಾನಿ, ಕಿರಾತಕ, ಲಕ್ಕಿ, ಜಾನು, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಮಾಸ್ಟರ್‌ಪೀಸ್, ಸಂತು ಸ್ಟ್ರೈಟ್ ಫಾರ್ವಡ್ ಹಾಗೂ ಕೆಜಿಎಫ್ ವರೆಗೂ ಯಶ್ ಜರ್ನಿ ಸ್ಫೂರ್ತಿದಾಯಕವಾಗಿದೆ. ನಿರ್ದೇಶಕ ಶಶಾಂಕ್ ಸಹ ಈ ಜರ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Kannada actor Yash and Radhika Pandit Starrer Moggina Manasu movie completes 13 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X