ಎಕ್ಸ್ ಕ್ಲೂಸಿವ್: ತಾಜ್ ವೆಸ್ಟ್ಎಂಡ್ ನಲ್ಲಿ ಯಶ್-ರಾಧಿಕಾ 'ಧಾರೆ'ಗೆ ಶಿವಾಲಯ ನಿರ್ಮಾಣ
ಸ್ಯಾಂಡಲ್ ವುಡ್ ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಗೆ ಕ್ಷಣಗಣನೆ ಶುರುವಾಗಿದ್ದು, ನಾಳೆ ಇವರಿಬ್ಬರ ವಿವಾಹ ಮಹೋತ್ಸವ ಅದ್ದೂರಿಯಾಗಿ ಶಾಸ್ತ್ರ-ಸಂಪ್ರದಾಯವಾಗಿ ನೆರವೇರಲಿದೆ.
ಈಗಾಗಲೇ ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆಗಾಗಿ ಭರ್ಜರಿ ಸೆಟ್ ನಿರ್ಮಾಣವಾಗುತ್ತಿದ್ದರೇ, ಮತ್ತೊಂದೆಡೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ 'ಶಿವಾಲಯ' ನಿರ್ಮಾಣವಾಗುತ್ತಿದೆ.['ಯಶ್-ರಾಧಿಕಾ' ಮೆಹಂದಿ ಶಾಸ್ತ್ರದ ಕಂಪ್ಲೀಟ್ ವಿಶೇಷತೆಗಳು!]
ಹೌದು, ರಾಧಿಕಾ ಹಾಗೂ ಯಶ್ ಮದುವೆಯ ಮುಹೂರ್ತ ಕಾರ್ಯಕ್ರಮ ತಾಜ್ ವೆಸ್ಟ್ ನಲ್ಲಿ ನಡೆಯಲಿದ್ದು, ಭರ್ಜರಿ ಸೆಟ್ ಹಾಕಲಾಗಿದೆ.

'ಧಾರೆ'ಗೆ ನಿರ್ಮಾಣವಾಗಿದೆ ಶಿವಾಲಯ
'ರಾಧಿಕಾ-ಯಶ್' ಅವರ ಮದುವೆ ನಾಳೆ (ಡಿಸೆಂಬರ್ 9) ನಡೆಯಲಿದ್ದು, 'ಧಾರೆ'ಗಾಗಿ ಶಿವನ ದೇವಾಲಯವನ್ನ ನಿರ್ಮಾಣ ಮಾಡಲಾಗಿದೆ. ಶಿವನ ಆರ್ಶೀವಾದದಲ್ಲಿ, ಶಿವನ ಸಮ್ಮುಖದಲ್ಲಿ ಯಶ್, ರಾಧಿಕಾ ಅವರಿಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ.['ಯಶ್-ರಾಧಿಕಾ ಪಂಡಿತ್' ಮದುವೆ ಸಂಭ್ರಮ ಭಲೇ ಜೋರು]

ತಾಜ್ ವೆಸ್ಟ್ಎಂಡ್ ನಲ್ಲಿ ತಲೆ ಎತ್ತಿದೆ ದೇವಸ್ಥಾನ
ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಗೆ, ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಹಸಿರು ಉದ್ಯಾನವನದಲ್ಲಿ ಸೋಮೇಶ್ವರ ದೇವಾಲಯವನ್ನ ಹೋಲುವಂತಹ ದೇವಾಸ್ಥಾನದ ಸೆಟ್ ಹಾಕಲಾಗಿದೆ.[ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?]

ರಾಧಿಕಾ ಪಂಡಿತ್ ಆಸೆಯಂತೆ ನಿರ್ಮಾಣ !
ರಾಧಿಕಾ ಪಂಡಿತ್ ಅವರ ಆಸೆಯಂತೆ, ತಾಜ್ ವೆಸ್ಟ್ ಎಂಡ್ ನಲ್ಲಿ ಶಿವನ ದೇವಾಲಯವನ್ನ ನಿರ್ಮಾಣ ಮಾಡಲಾಗುತ್ತಿದೆ.['ಯಶ್-ರಾಧಿಕಾ' ಮದುವೆ: ಸಂಗೀತ ಕಾರ್ಯಕ್ರಮದಲ್ಲಿ ತಾರೆಯರ ಮಿಂಚು]

ಶಿವ-ಪಾರ್ವತಿ ಥೀಮ್.!
ಯಶ್-ರಾಧಿಕಾ ಪಂಡಿತ್ ಧಾರೆಗೆ 'ಶಿವ-ಪಾರ್ವತಿ' ಥೀಮ್ ಹಾಗೂ ರಿಸೆಪ್ಷನ್ ಗೆ 'ರಾಯಲ್' ಸೆಟ್ ಇರಲಿದೆ.[ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು ? ]

ರೆಡಿ ಮಾಡುತ್ತಿರುವವರು ಯಾರು?
ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮದುವೆಗೆ ವಿಭಿನ್ನ ವಿಶೇಷ ಸೆಟ್ ತಯಾರಿ ಮಾಡುತ್ತಿರುವವರು ಖ್ಯಾತ ಕಲಾ ನಿರ್ದೇಶಕ ಅರುಣ್ ಸಾಗರ್.

ಮಂಜು, ಚಂದ್ರು ಹೂವಾಲಂಕಾರ
ಸೋಮನಾಥ ದೇವಾಲಯ ಮಾದರಿಯ ಮಂಟಪ್ಪಕ್ಕೆ ಬಿಸಲೆ ಖ್ಯಾತಿಯ ಚಂದ್ರು ಹಾಗೂ ಮಂಜು ಹೂವಿನ ಅಲಂಕಾರ ಮಾಡಲಿದ್ದಾರೆ.

ಗೌಡ-ಕೊಂಕಣಿ ಸಂಪ್ರದಾಯ
ಯಶ್ ರವರು ಒಕ್ಕಲಿಗ ಗೌಡ. ರಾಧಿಕಾ ಪಂಡಿತ್ ಕೊಂಕಣಿ. ಹೀಗಾಗಿ ಎರಡೂ ಸಂಸ್ಕೃತಿ, ಸಂಪ್ರದಾಯದಂತೆ ಮದುವೆ ನಡೆಯಲಿದೆ.[ವಿಡಿಯೋ: 'ಯಶ್-ರಾಧಿಕಾ ಪಂಡಿತ್' ನಿಶ್ಚಿತಾರ್ಥದ ಝಲಕ್]

ಕಾಸ್ಟ್ಯೂಮ್ ಡಿಸೈನರ್ ಯಾರು ಗೊತ್ತಾ?
ಯಶ್ ರವರ ಉಡುಪುಗಳನ್ನ ಬಾಲಿವುಡ್ ನ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರ ಡಿಸೈನ್ ಮಾಡುತ್ತಿದ್ದಾರೆ. ರಾಧಿಕಾ ಉಡುಪುಗಳಿಗೆ ಸಭ್ಯಸಾಚಿ ವಿನ್ಯಾಸ ಹೊಂದಿದೆ.

ಮುಹೂರ್ತ ಯಾವಾಗ?
ಯಶ್-ರಾಧಿಕಾ 'ಧಾರೆ'ಯಲ್ಲಿ ಕುಟುಂಬಸ್ಥರು, ಆಪ್ತ ಸ್ನೇಹಿತರು, ಹಾಗೂ ಕೆಲವೇ ಕೆಲವೂ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ.[ಮದುವೆಗೂ ಮುಂಚೆ ರಾಧಿಕಾ ಪಂಡಿತ್ ಕೊನೆ ಪಾರ್ಟಿ ! ]

ಆರತಕ್ಷತೆ
ಡಿಸೆಂಬರ್ 10 ರಂದು ಅರಮನೆ ಮೈದಾನದಲ್ಲಿ ಆರತಕ್ಷತೆ ನಡೆಯಲಿದ್ದು ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಆಗಮಿಸಲಿದ್ದಾರೆ. ಇನ್ನೂ 11 ರಂದು ಅಭಿಮಾನಿಗಳಿಗೆ ಮತ್ತು ಚಿತ್ರರಂಗದ ಎಲ್ಲ ಕಾರ್ಮಿಕರ ಒಕ್ಕೂಟಕ್ಕೆ ಔತಣ ಕೂಟ ಏರ್ಪಡಿಸಲಾಗಿದೆ.


Click it and Unblock the Notifications











