For Quick Alerts
  ALLOW NOTIFICATIONS  
  For Daily Alerts

  ಐರಾ- ಯಥರ್ವ್ ರಕ್ಷಾ ಬಂಧನ ಫೋಟೋ ವೈರಲ್!

  |

  ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸ್ಟಾರ್ ಮಕ್ಕಳುಗಳು ಹೆಚ್ಚಾಗಿ ಚರ್ಚೆಗೆ ಗ್ರಾಸವಾಗುತ್ತಾರೆ. ಮಕ್ಕಳ ಫೊಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಷಕರು ಹಂಚಿಕೊಳ್ಳುವುದಷ್ಟೇ ಅಲ್ಲದೆ ಹಲವರು, ತಮ್ಮ ಮಕ್ಕಳ ಹೆಸರಲ್ಲಿ ಸೋಷಿಯಾಲ್ ಮಿಡಿಯಾದಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಕನ್ನಡದಲ್ಲಿ ಹೆಚ್ಚು ಸದ್ದು ಮಾಡುವ ಸ್ಟಾರ್ ಕಿಡ್ಸ್ ಎಂದರೆ ಅದು ಯಶ್, ರಾಧಿಕಾ ಪಂಡಿತ್ ಮಕ್ಕಳು.

  ಇತ್ತೀಚಿಗೆ ಹೆಚ್ಚು ಸದ್ದು ಮಾಡುತ್ತಾ ಇರುವ ಸ್ಟಾರ್ ಕಿಡ್ಸ್ ಅಂದ್ರೆ ಅದು ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು. ರಾಧಿಕಾ ಮತ್ತು ಯಶ್ ಮಕ್ಕಳಾದ ಆಯ್ರಾ, ಯಥರ್ವ್ ಸದಾ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮುದ್ದು ಮಕ್ಕಳಿಗೆ ಅಭಿಮಾನಿ ಬಳಗವೇ ಇದೆ.

  ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!

  ಈಗ ಯಶ್, ರಾಧಿಕಾ ಮಕ್ಕಳ ಬಗ್ಗೆ ಮಾತನಾಡುವುದಕ್ಕೆ ಕಾರಣ ಅವರ ಹೊಸ ಫೋಟೋಗಳು ಮತ್ತಿ ಹಬ್ಬದ ಆಚರಣೆ. ಅಮ್ಮ ರಾಧಿಕಾ ಪಂಡಿತ್ ಐರಾ ಮತ್ತು ಯಥರ್ವ್ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ ರಾಧಿಕಾ ಪಂಡಿತ್.

  ಪುಟ್ಟ ಮಕ್ಕಳ ರಕ್ಷಾ ಬಂಧನ!

  ಪುಟ್ಟ ಮಕ್ಕಳ ರಕ್ಷಾ ಬಂಧನ!

  ರಕ್ಷಾ ಬಂಧನ ಹಬ್ಬವನ್ನು ಹಲವು ಸಿನಿಮಾ ತಾರೆಯರು ಆಚರಿಸಿದ್ದಾರೆ. ತಮ್ಮ ತಮ್ಮ ಸಹೋದರ, ಸಹೋದರಿಯರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. ಆದರೆ ಅತ್ಯಂತ ಮುದ್ದಾಗಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು. ಐರಾ ಮತ್ತು ಯಥರ್ವ್ ಕೂಡ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಐರಾ ತನ್ನ ಕಿರಿಯ ಸಹೋದರ ಯಥರ್ವ್‌ಗೆ ರಾಖಿ ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ.

  ಮೈಸೂರಿನಲ್ಲಿ ಯಶ್ ಹವಾ! ಭಾರತದ ರಾಕಿಂಗ್ ಸ್ಟಾರ್ ಎಂದ ಸಿಎಂ ಬೊಮ್ಮಾಯಿಮೈಸೂರಿನಲ್ಲಿ ಯಶ್ ಹವಾ! ಭಾರತದ ರಾಕಿಂಗ್ ಸ್ಟಾರ್ ಎಂದ ಸಿಎಂ ಬೊಮ್ಮಾಯಿ

  ತಮ್ಮನಿಗೆ ರಾಖಿ ಕಟ್ಟಿದ ಐರಾ!

  ತಮ್ಮನಿಗೆ ರಾಖಿ ಕಟ್ಟಿದ ಐರಾ!

  ರಾಧಿಕಾ ಮಕ್ಕಳು ಕೂಡ ರಕ್ಷಾ ಬಂಧನ ಹಬ್ಬವನ್ನು ಆಚರಿಸುವಂತೆ ಆಗಿದ್ದಾರೆ. ಐರಾ ನನ್ನ ಸಹೋದರ ಯಥರ್ವ್‌ಗೆ ಆರತಿ ಬೆಳಗಿ ರಾಖಿಯನ್ನು ಕಟ್ಟಿ ಸಂಭ್ರಮಿಸಿದ್ದಾಳೆ ಈ ಫೋಟೋಗಳನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಕ್ಕಳ ಮುದ್ದಾದ ಫೋಟೋ ಶೂಟ್ ಕೂಡ ಮಾಡಿಸಲಾಗಿದೆ. ಮಕ್ಕಳ ಹಲವು ಫೋಟೋಗಳನ್ನ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ವಿಭಿನ್ನವಾಗಿ ಕಂಗೊಳಿಸಿದ್ದಾರೆ.

  ಮಕ್ಕಳ ಮುದ್ದಾದ ಫೊಟೋ ಶೂಟ್!

  ಮಕ್ಕಳ ಮುದ್ದಾದ ಫೊಟೋ ಶೂಟ್!

  ಮಕ್ಕಳ ಫೋಟೋಗಳನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಹಬ್ಬದ ಪ್ರಯುಕ್ತ ವಿಶೇಷ ಸಂದೇಶವನ್ನು ಕೂಡ ಬರೆದುಕೊಂಡಿದ್ದಾರೆ. "ರಾಖಿ ಹಬ್ಬವು ಸಹೋದರ ಸಹೋದರಿಯರ ಸುಂದರ ಬಂಧವಾಗಿದೆ. ಅವರು ಒಟ್ಟಿಗೆ ನಗುತ್ತಾರೆ, ಒಟ್ಟಿಗೆ ಅಳುತ್ತಾರೆ, ಜಗಳವಾಡುತ್ತಾರೆ. ಪರಸ್ಪರ ಆಡುತ್ತಾರೆ. ಅವರಿಬ್ಬರು ಪರಸ್ಪರ ಹತ್ತಿರವಾಗಿದ್ದಾರೆ ಅಷ್ಟೇ ಸಾಕು. ಎಲ್ಲಾ ಆತ್ಮೀಯ ಸಹೋದರ ಸಹೋದರಿಯರಿಗೆ ರಕ್ಷಾ ಬಂಧನದ ಶುಭಾಶಯಗಳು" ಎಂದು ಬರೆದಿದ್ದಾರೆ.

  ಸೋದರನ ಬಗ್ಗೆ ರಾಧಿಕಾ ಪೋಸ್ಟ್!

  ಸೋದರನ ಬಗ್ಗೆ ರಾಧಿಕಾ ಪೋಸ್ಟ್!

  ನಟ ಯಶ್ ಕೂಡ ತಮ್ಮ ಸಹೋದರಿ ನಂದಿನಿ ಅವರಿಂದ ರಾಖಿಯನ್ನು ಕಟ್ಟಿಸಿಕೊಂಡು ಫೋಟೋವನ್ನು ಹಂಚಿಕೊಂಡು ಸಂದೇಶವನ್ನು ಬರೆದುಕೊಂಡಿದ್ದರು. ಇನ್ನೂ ರಾಧಿಕಾ ಪಂಡಿತ್ ತಮ್ಮ ಸಹೋದರನ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡು ಮೊದಲಿನಿಂದಲೂ "ನಾನು ರಾಖಿಯನ್ನು ಕಟ್ಟುವುದಿಲ್ಲ ಆದರೆ, ಪ್ರೀತಿ ಮತ್ತು ಕಾಳಜಿ ಸದಾ ನಮ್ಮ ನಡುವೆ ಇದ್ದೇ ಇದೆ. ಅದು ನೀನು ನನ್ನ ಬದುಕಿನಲ್ಲಿ ಬಂದಾಗಿನಿಂದಲೂ ಇದೆ. ನನ್ನ ಪುಟ್ಟ ಸಹೋದರ." ಎಂದು ರಾಧಿಕಪಂಡಿತ ಬರೆದುಕೊಂಡು ತಮ್ಮ ಸಹೋದರನ ಫೋಟೋವನ್ನು ಹಂಚಿಕೊಂಡಿದ್ದಾರೆ.

  English summary
  Yash, Radhika Pandith Children Raksha Bandhan Photos Viral, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X