ತಂದೆಯಾಗಿ ಸಣ್ಣ ಜವಾಬ್ದಾರಿ ಪೂರೈಸಿದ ಯಶ್, ಪತಿಗೆ ರಾಧಿಕಾ ಸಾಥ್
ತಮ್ಮ ಸಿನಿಮಾಗಳಲ್ಲಿ ದುಷ್ಮನ್‌ಗಳನ್ನು ಚಚ್ಚಿ ಚೆಂಡಾಡುವ, ಸುಂದರ ಯುವತಿಯರೊಂದಿಗೆ ಹಾಡಿ ಕುಣಿಯುವ ಯಶ್, ನಿಜ ಜೀವನದಲ್ಲಿ ಪಕ್ಕಾ ಫ್ಯಾಮಿಲಿ ಮ್ಯಾನ್. ಸುಂದರ ಕುಟುಂಬ ಹೊಂದಿರುವ ಯಶ್‌ಗೆ ಕುಟುಂಬವೇ ಮೊದಲ ಆದ್ಯತೆ.
Recommended Video
ತೆರೆಯ ಮೇಲೆ ಬಿಂದಾಸ್ ಆಟಿಟ್ಯೂಡ್ ನ ನಾಯಕ ಪಾತ್ರ ಮಾಡುವ ಯಶ್, ನಿಜ ಜೀವನದಲ್ಲಿ ಮುದ್ದು ಮಕ್ಕಳಿಬ್ಬರ ಜವಾಬ್ದಾರಿಯುತ ತಂದೆ. ಸಿನಿಮಾ, ಸಾಮಾಜಿಕ ಕಾರ್ಯ ಸೇರಿ ಹಲವು ಜವಾಬ್ದಾರಿಗಳನ್ನು ಹೊತ್ತಿರುವ ಯಶ್, ತಂದೆಯಾಗಿ ಜವಾಬ್ದಾರಿಯೊಂದನ್ನು ಇಂದು ಶಾಸ್ತ್ರೋಪ್ತವಾಗಿ ಮುಗಿಸಿದ್ದಾರೆ.
ಹೌದು, ತಮ್ಮ ಮುದ್ದು ಮಗಳು ಆರ್ಯಾಳ 'ಮುಡಿ ತೆಗೆಸುವ' ಶಾಸ್ತ್ರವನ್ನು ಯಶ್ ಮತ್ತು ಕುಟುಂಬ ಪೂರೈಸಿದೆ. ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ನಂಜುಂಡೇಶ್ವರನ ಸನ್ನಿಧಿಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ್ದ ಯಶ್ ಮತ್ತು ರಾಧಿಕಾ ದಂಪತಿ ಮಗಳು ಆರ್ಯಾ ಳ ಮುಡಿ ನೀಡುವ ಶಾಸ್ತ್ರವನ್ನು ಪೂರೈಸಿದ್ದಾರೆ.

ಮಕ್ಕಳ ಒಳಿತಿಗಾಗಿ ಯಶ್ ದಂಪತಿ ಪ್ರಾರ್ಥನೆ
ದೇವಾಲಯಕ್ಕೆ ಭೇಟಿ ನೀಡಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ದೇವಾಲಯ ಆಡಳಿತ ಮಂಡಳಿ ರಾಜಾತಿಥ್ಯ ನೀಡಿದೆ. ದೇವಾಲಯದ ಗರ್ಭಗುಡಿಯ ಮುಂದೆ ಕೂತು ದಂಪತಿಗಳಿಬ್ಬರೂ ಮಕ್ಕಳ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಪೂಜೆ ಮಾಡಿಸಲು ಮುಗಿಬಿದ್ದ ಅರ್ಚಕರು
ಯಶ್ ಗೆ ಪೂಜೆ ಮಾಡಿ ಕೊಡಲು ದೇವಾಲಯದ ಅರ್ಚಕರು ಮುಗಿಬಿದ್ದ ಘಟನೆಯೂ ದೇವಾಲಯದಲ್ಲಿ ನಡೆದಿದೆ. ರಾಜಕಾರಣಿಗಳಿಗೆ ಇತರರಿಗೆ ಇಲ್ಲದ ರಾಜಾತಿಥ್ಯ ಯಶ್ ದಂಪತಿಗೆ ಸಿಕ್ಕಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದು ಚರ್ಚೆಗೂ ಗ್ರಾಸವಾಗಿದೆ.

ಯಶ್-ರಾಧಿಕಾ ನೋಡಲು ಮುಗಿಬಿದ್ದ ಜನ
ದೇವಾಲಯಕ್ಕೆ ಬಂದಿದ್ದ ಯಶ್ ಮತ್ತು ರಾಧಿಕಾ ಅವರನ್ನು ನೋಡಲು ಜನರು ಮುಗಿಬಿದ್ದಿದ್ದರು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತಂತೆ.

ಕೆಜಿಎಫ್ 2 ಚಿತ್ರೀಕರಣದಲ್ಲಿ ಯಶ್ ಬ್ಯುಸಿ
ಯಶ್ ಅವರ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ಚಿತ್ರೀಕರಣ ಬಹುತೇಕ ಮುಗಿಸಿದ್ದು, ಡಬ್ಬಿಂಗ್ ಮಾಡಬೇಕಿದೆ. ಕೆಜಿಎಫ್ 2 ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ತಮಿಳು ಭಾಷೆಗೆ ಯಶ್ ಅವರೇ ಧ್ವನಿ ನೀಡುವ ಸಾಧ್ಯತೆ ಇದೆ.


Click it and Unblock the Notifications











