ಬಾಕ್ಸ್ ಆಫೀಸಲ್ಲಿ 'ರಾಜಾಹುಲಿ' ಲುಂಗಿ ಡಾನ್ಸ್

By Rajendra

ರಾಕಿಂಗ್ ಸ್ಟಾರ್ ಯಶ್ ಅಭಿನಯ 'ರಾಜಾಹುಲಿ' ಚಿತ್ರ ಬಾಕ್ಸ್ ಆಫೀಸಲ್ಲಿ ಲುಂಗಿ ಡಾನ್ಸ್, ಐಟಂ ಡಾನ್ಸ್ ಮಾಡುತ್ತಿದೆ. ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ರು.7 ಕೋಟಿ ಕಲೆಕ್ಷನ್ ಮಾಡಿ ನಿರ್ಮಾಪಕ ಕೆ ಮಂಜು ಅವರನ್ನು ಚಕಿತಗೊಳಿಸಿದೆ. [ರಾಜಾಹುಲಿ ಚಿತ್ರ ವಿಮರ್ಶೆ]

ರಾಜಾಹುಲಿ ಈ ಪಾಟಿ ದುಡ್ಡು ಮಾಡುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಎಂದಿದ್ದಾರೆ ಕೆ ಮಂಜು. ತಮಿಳಿನ ಆರಂಭ, ಹಿಂದಿಯ 'ಕ್ರಿಷ್ 3' ಚಿತ್ರಗಳು 'ರಾಜಾಹುಲಿ' ಕಲೆಕ್ಷನ್ ಗೆ ಸಾಕಷ್ಟು ಅಡೆತಡೆ ಒಡ್ಡಿದರೂ ಪ್ರಯೋಜನವಾಗಿಲ್ಲ.

ವಾರದ ಒಟ್ಟಾರೆ ಗಳಿಕೆ ಏಳು ಕೋಟಿಯಾದರೆ ಅದರಲ್ಲಿ ಕೆ ಮಂಜು ಅವರ ಪಾಲು 4.5 ಕೋಟಿ. ಬೆಂಗಳೂರಿನಲ್ಲಿ ಒಂದು ದಿನ ಕ್ರಿಕೆಟ್ ಮ್ಯಾಚ್ ನಡೆದ ಕಾರಣ ಕಲೆಕ್ಷನ್ ಒಂದು ಸ್ವಲ್ಪ ಹೊಡೆತ ಬಿತ್ತು. ಇಲ್ಲದಿದ್ದರೆ ಇನ್ನಷ್ಟು ಲಾಭ ಬರುತ್ತಿತ್ತು ಎನ್ನುತ್ತಾರೆ ನಿರ್ಮಾಪಕರು.

ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ತೆರೆಗೆ ಅಪ್ಪಳಿಸಿದ ರಾಜಾಹುಲಿ ಸುಮಾರು 148 ಚಿತ್ರಮಂದಿರಗಳಲ್ಲಿ ಬಿಡುಗಡೆ ಕಂಡಿದೆ. ಇದು ತಮಿಳಿನ 'ಸುಂದರ ಪಾಂಡ್ಯನ್' ಚಿತ್ರದ ರೀಮೇಕ್ ಆದರೂ ಇಲ್ಲಿ ಮಂಡ್ಯದ ಸೊಗಡಿದೆ. ಹಂಸಲೇಖ ಸಂಗೀತ ಸಂಯೋಜನೆಯ ಅಷ್ಟೂ ಹಾಡುಗಳೂ ಸ್ವಮೇಕ್. ಯಶ್ ಇಲ್ಲಿ ಊರಿನ ಹುಡುಗರ ಪ್ರೀತಿ ಪಾತ್ರದ ರಾಜನಾಗಿ ಗಮನಸೆಳೆಯುತ್ತಾರೆ. (ಏಜೆನ್ಸೀಸ್)

More from Filmibeat

English summary
Rocking Star Yash starrer 'Raja Huli' has collected more than Rs 7 crore at the box office in the first week. The comedy-drama film directed by Guru Deshpande and written by S. R. Prabhakaran. Produced by K. Manju's home production.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X