'ನಮ್ಮನ್ನ ಟಾರ್ಗೆಟ್ ಮಾಡೋರು ಹುಷಾರಾಗಿರಿ': ಯಶ್ ಎಚ್ಚರಿಕೆ
Recommended Video
ಮಂಡ್ಯದಲ್ಲಿ ಮುಖ್ಯಮಂತ್ರಿ ಮಗ ನಿಖಿಲ್ ಕುಮಾರ್ ಅವರ ವಿರುದ್ಧವಾಗಿ ಪ್ರಚಾರ ಮಾಡಿದವರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ವಿಚಾರದಲ್ಲಿ ನಟ ದರ್ಶನ್ ಮತ್ತು ಯಶ್ ಅವರನ್ನ ಕೂಡ ಟಾರ್ಗೆಟ್ ಮಾಡಲಾಗುತ್ತೆ ಎಂಬ ಮಾತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ನಟ ಯಶ್ ''ನಮ್ಮನ್ನ ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನಾವು ಮನೆ ಮಕ್ಕಳಂತೆ ಕೆಲಸ ಮಾಡಿದ್ದೀವಿ. ನಮಗೆ ನೂರರಷ್ಟು ನಂಬಿಕೆ ವಿಶ್ವಾಸವಿದೆ. ಸ್ವಾಭಿಮಾನಕ್ಕಾಗಿ ಸುಮಲತಾ ಅವರಿಗೆ ಮತ ನೀಡಿದ್ದಾರೆ. ನಾವು ಗೆಲ್ಲುತ್ತೇವೆ'' ಎಂದು ಯಶ್ ತಿಳಿಸಿದ್ದಾರೆ.
'ನಮ್ಮನ್ನ ಟಾರ್ಗೆಟ್ ಮಾಡೋರು ಹುಷಾರಾಗಿರಬೇಕು, ನಾವು ಜನಗಳ ಆಸ್ತಿ. ನಮ್ಮನ್ನ ಏನೂ ಮಾಡೋಕೆ ಆಗಲ್ಲ. ಯಾರಾದರೂ ನನ್ನ ವಿಷ್ಯಕ್ಕೆ ಬಂದ್ರೆ ನಾನಂತೂ ಸುಮ್ಮನೆ ಬಿಡಲ್ಲ'' ಎಂದು ರಾಕಿಂಗ್ ಸ್ಟಾರ್ ಯಶ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗಷ್ಟೆ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ''ನನ್ನ ಪರವಾಗಿ ಬೆಂಬಲ ನೀಡಿದವರಿಗೆ, ಪ್ರಚಾರ ಮಾಡಿದವರಿಗೆ ತೊಂದರೆ ನೀಡಲಾಗುತ್ತಿದೆ. ಟಾರ್ಗೆಟ್ ಮಾಡುತ್ತಿದ್ದಾರೆ'' ಎಂದು ಆರೋಪಿಸಿದ್ದರು.


Click it and Unblock the Notifications











