ಅಂಬರೀಶ್ ನೀಡಿದ ಉಡುಗೊರೆ ಬಗ್ಗೆ ಯಶ್ ಭಾವುಕ ನುಡಿ

Recommended Video

ಯಶ್-ರಾಧಿಕಾ ಮುದ್ದು ಮಗಳಿಗೆ ಅಂಬಿ ಆರ್ಡರ್ ಕೊಟ್ಟಿದ್ದ ಉಡುಗೊರೆ ರೆಡಿ..! | FILMIBEAT KANNADA

ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗುವಿಗಾಗಿ ರೆಬೆಲ್ ಸ್ಟಾರ್ ಅಂಬರೀಶ್ ವಿಶೇಷವಾದ ಉಡುಗೊರೆಯೊಂದನ್ನ ಬುಕ್ ಮಾಡಿದ್ದರು. ಒಂದೂವರೆ ಲಕ್ಷದ ಬೆಲೆಯ ತೊಟ್ಟಿಲನ್ನ ಮಾಡಿಸಿದ್ದರು.

ಇದು ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಯಶ್ ಮತ್ತು ರಾಧಿಕಾ ದಂಪತಿಯ ಮೇಲೆ ಅಂಬಿ ಇಟ್ಟಿದ್ದ ಪ್ರೀತಿಗೆ ಇದು ಪ್ರೇತಿಕವಾಗಿತ್ತು. ಆದ್ರೆ, ಯಶ್ ಮಗುವಿಗೆ ಉಡುಗೊರೆ ನೀಡಲು ತೊಟ್ಟಿಲು ಬುಕ್ ಮಾಡಿದ್ದ ವಿಷ್ಯ ಯಾರಿಗೂ ಗೊತ್ತಿರಲಿಲ್ಲ.

ಸ್ವತಃ ಯಶ್, ರಾಧಿಕಾ, ಸುಮಲತಾ ಅವರಿಗೂ ಗೊತ್ತಿರಲಿಲ್ಲ. ಇದೀಗ, ಈ ಉಡುಗೊರೆ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ. ಅಂಬಿ ನೀಡಬೇಕೆಂದುಕೊಂಡಿದ್ದ ಗಿಫ್ಟ್ ವಿಷ್ಯ ಕೇಳಿದ ಯಶ್ ಆ ಕ್ಷಣ ಭಾವುಕರಾಗಿದ್ದರಂತೆ. ಅಷ್ಟಕ್ಕೂ, ಈ ಗಿಫ್ಟ್ ಬಗ್ಗೆ ಯಶ್ ಏನಂದ್ರು.? ಮುಂದೆ ಓದಿ....

ನಂಬೋಕೆ ಆಗ್ಲಿಲ್ಲ

ನಂಬೋಕೆ ಆಗ್ಲಿಲ್ಲ

ಅಂಬರೀಶ್ ಅವರ ನೀಡಿರುವ ತೊಟ್ಟಿಲಿನ ಬಗ್ಗೆ ಮಾತನಾಡಿದ ಯಶ್ ''ಇದಂತೂ ನಂಬೋಕೆ ಆಗ್ಲಿಲ್ಲ. ನಿಜಕ್ಕೂ ಈ ವಿಷ್ಯ ನನಗೆ ಗೊತ್ತಾದಾಗ ಒಂದು ಕ್ಷಣ ಭಾವುಕನಾದೆ'' ಎಂದು ಯಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಂಡ್ಯದಲ್ಲಿ ಒಬ್ಬರು ಹೇಳಿದ್ರು

ಮಂಡ್ಯದಲ್ಲಿ ಒಬ್ಬರು ಹೇಳಿದ್ರು

ಈ ವಿಷ್ಯವನ್ನ ಸುಮಲತಾ ಅವರು ಹೇಳುವುದಕ್ಕೂ ಮುಂಚೆ ಮಂಡ್ಯದಲ್ಲಿ ಒಬ್ಬ ವ್ಯಕ್ತಿ ಹೇಳಿದ್ರಂತೆ. ಆ ಕ್ಷಣವೇ ಭಾವುಕರಾದ ಯಶ್, ಮೂರನೇ ವ್ಯಕ್ತಿ ಹೇಳಿದ್ದರಿಂದ ಗಂಭೀರವಾಗಿ ಪರಿಗಣಿಸಲಿಲ್ಲವಂತೆ. ನಂತರ ಸುಮಲತಾ ಈ ವಿಷ್ಯ ತಿಳಿಸಿದರಂತೆ.

ಸ್ವರ್ಗದಿಂದ ಗಿಫ್ಟ್ ಬಂದಿದೆ

ಸ್ವರ್ಗದಿಂದ ಗಿಫ್ಟ್ ಬಂದಿದೆ

ನಂತರ ಈ ವಿಷ್ಯವನ್ನ ಸುಮಲತಾ ಅವರು ಫೋನ್ ಮಾಡಿದ ಹೇಳಿದ್ರು. 'ನಿನ್ನ ಮಗಳು ಏನು ಅದೃಷ್ಟ ಮಾಡಿರಬೇಕು, ಸ್ವರ್ಗದಿಂದ ತೊಟ್ಟಿಲು ಬಂದಿದೆ ನೋಡು' ಅಂದ್ರು. ನನಗೆ ನಂಬೋಕೆ ಆಗ್ಲಿಲ್ಲ. ಆಮೇಲೆ ಬುಕ್ ಮಾಡಿದ್ದನ್ನ ಹೇಳಿದ್ರು. ''ಬಹುಶಃ ಇದೇ ಅವರ ಕೊನೆ ಗಿಫ್ಟ್. ನಿನ್ನ ಮಗಳಿಗೆ ಸಿಕ್ಕಿದೆ'' ಎಂದರು. ನಿಜಕ್ಕೂ ಖುಷಿ ಆಯ್ತು ಎಂದು ಯಶ್ ಹೇಳಿಕೊಂಡರು.

ನಮ್ಮ ಜೊತೆ ಇರಬೇಕಿತ್ತು

ನಮ್ಮ ಜೊತೆ ಇರಬೇಕಿತ್ತು

ನನ್ನ ಮತ್ತು ರಾಧಿಕಾ ಮೇಲೆ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ನಮಗೂ ಅವರ ಮೇಲೆ ಅಷ್ಟೇ ಅಭಿಮಾನ, ಪ್ರೀತಿ ಇತ್ತು. ತಂದೆ ಸ್ಥಾನದಲ್ಲಿದ್ದರು. ಅವರು ಈಗ ಇದ್ದಿದ್ರೆ ಚೆನ್ನಾಗಿರ್ತಿತ್ತು. ನನ್ನ ಮಗಳನ್ನ ನೋಡಬಹುದಿತ್ತು. ಅವರು ಎಲ್ಲೇ ಇದ್ರೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತೆ. ಅದಕ್ಕೆ ಈ ತೊಟ್ಟಿಲು ಸಾಕ್ಷಿ'' ಎಂದು ಯಶ್ ಸಂತಸ ಹಂಚಿಕೊಂಡರು.

More from Filmibeat

English summary
Actor ambareesh has given a precious gift to Yash and Radhika Pandit, who are in joy over their newborn baby. now yash said thanks to ambareesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X