'ಜೋಡೆತ್ತು' ಸಿನಿಮಾ ಬಗ್ಗೆ ನಟ ಯಶ್ ಪ್ರತಿಕ್ರಿಯೆ
Recommended Video
ಮಂಡ್ಯ ಚುನಾವಣಾ ಪ್ರಚಾರದ ವೇಳೆ ನಟ ದರ್ಶನ್ ತಮ್ಮ ಹಾಗೂ ಯಶ್ ಜೋಡಿಗೆ 'ಜೋಡೆತ್ತು' ಎಂಬ ಹೆಸರು ನೀಡಿದ್ದರು. ಬಳಿಕ ಆ ಪದ ಸಿಕ್ಕಾಪಟ್ಟೆ ಫೇಮಸ್ ಆಗಿ ಹೋಯ್ತು. ಯಾವ ಮಟ್ಟಿಗೆ ಅಂದರೆ, ಈಗ ಆ ಹೆಸರಿನಲ್ಲಿ ಸಿನಿಮಾ ಮಾಡುವ ತಯಾರಿ ಕೂಡ ನಡೆಯುತ್ತಿದೆ.
'ಜೋಡೆತ್ತು' ಟೈಟಲ್ ನಿರ್ಮಾಪಕ ರಾಮಮೂರ್ತಿ ಪಾಲಾಗಿದೆ. ಸದ್ಯ ಕಥೆ ಸಿದ್ಧವಾಗುತ್ತಿದ್ದು, ಈ ಟೈಟಲ್ ನಲ್ಲಿ ಸಿನಿಮಾ ಬರುವುದಾಗಿ ರಾಮಮೂರ್ತಿ ತಿಳಿಸಿದ್ದಾರೆ. ಹೀಗಿರುವಾಗ, ಆ ಸಿನಿಮಾದಲ್ಲಿ ದರ್ಶನ್ ಹಾಗೂ ಯಶ್ ನಟಿಸುತ್ತಾರಾ ಎನ್ನುವ ಕುತೂಹಲ ಹುಟ್ಟಿಕೊಂಡಿತ್ತು.

ಈ ಚಿತ್ರದ ಬಗ್ಗೆ ಇದೀಗ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ''ಜೋಡೆತ್ತು' ಎಂದು ದರ್ಶನ್ ಅವರು ಪ್ರೀತಿಯಿಂದ ಕರೆದಿದ್ದು. ಆದರೆ, ಈ ಹೆಸರಿನಲ್ಲಿ ಸಿನಿಮಾ ಮಾಡುವ ಬಗ್ಗೆ ಇನ್ನು ಯಾವ ಮಾತುಕತೆ ಆಗಿಲ್ಲ. ನಾವಿಬ್ಬರು ಸಿನಿಮಾ ಮಾಡುತ್ತಿದ್ದೇವೆ ಎಂದರೆ ಒಳ್ಳೆಯ ಕಥೆ ಬೇಕಾಗುತ್ತಿದೆ. ಸದ್ಯಕ್ಕೆ ಯಾವುದೇ ಪ್ಲಾನ್ ಇಲ್ಲ.'' ಎಂದು ಹೇಳಿದ್ದಾರೆ.
ಯಶ್ 'ಜೋಡೆತ್ತು' ಸಿನಿಮಾದ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಯಶ್ ಹೇಳುವ ಪ್ರಕಾರ ಒಳ್ಳೆಯ ಕಥೆ ಸಿಕ್ಕರೆ ಯಾವುದೇ ಸಿನಿಮಾ ಆಗಲಿ ದರ್ಶನ್ ಜೊತೆಗೆ ಯಶ್ ನಟಿಸೋಕ್ಕೆ ರೆಡಿ ಇದ್ದಾರೆ.
ಮಂಡ್ಯಗೆ ಬಂದಿದ್ದ ಯಶ್ ಚುನಾವಣಾ ಫಲಿತಾಂಶ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.


Click it and Unblock the Notifications











