»   » 'ಕಟಕ' ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಗೆ ಇಷ್ಟವಾಗಿದ್ದೇನು?

'ಕಟಕ' ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಗೆ ಇಷ್ಟವಾಗಿದ್ದೇನು?

Posted By:
Subscribe to Filmibeat Kannada

'ಉಗ್ರಂ' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ನಿರ್ದೇಶನದ 'ಕಟಕ' ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಆದ್ರೆ, ಬಿಡುಗಡೆಗೂ ಮುಂಚೆಯೇ 'ಕಟಕ' ಚಿತ್ರವನ್ನ ನೋಡಿ ರಾಕಿಂಗ್ ಸ್ಟಾರ್ ಯಶ್ ಮೆಚ್ಚಿಕೊಂಡಿದ್ದಾರೆ.

'ಕಟಕ' ಚಿತ್ರದ ಟ್ರೈಲರ್ ನೋಡಿದ್ದ ಯಶ್, ಸಿನಿಮಾ ನೋಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕೆ ನಿರ್ದೇಶಕ ರವಿ ಬಸ್ರೂರು ಅವರು ಯಶ್ ಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.

ಅಷ್ಟಕ್ಕೂ, 'ಕಟಕ' ಟ್ರೈಲರ್ ನೋಡಿದ ಯಶ್ ಗೆ ಸಿನಿಮಾ ನೋಡ್ಬೇಕು ಎನಿಸಿದ್ದೇಕೆ? 'ಕಟಕ' ಚಿತ್ರದಲ್ಲಿ ಏನು ಇಷ್ಟವಾಯಿತು ಎಂದು ಹಂಚಿಕೊಂಡಿದ್ದಾರೆ. ಮುಂದೆ ಓದಿ.....

'ಕಟಕ' ಸಖತ್ ಥ್ರಿಲ್ಲ್ ಆಗಿತ್ತು

''ಸಿನಿಮಾ ನೋಡಿ ತುಂಬಾ ಖುಷಿ ಆಯ್ತು. ಫಸ್ಟ್ ಹಾಫ್ ನಲ್ಲಿ ಹಲವು ಅನುಮಾನ, ಗೊಂದಲ ಕಾಡುತ್ತೆ. ಏನಾಯಿತು, ಏನಾಗ್ತಿದೆ ಅಂತ. ಆದ್ರೆ, ಸೆಕೆಂಡ್ ಹಾಫ್ ನಲ್ಲಿ ಅದಕ್ಕೆಲ್ಲಾ ಅದ್ಭುತವಾಗಿ ಕಥೆ ಜೋಡಿಸಿದ್ದಾರೆ'' - ಯಶ್, ನಟ

ಥ್ರಿಲ್ ಇದೆ, ಭಯವೂ ಆಗುತ್ತೆ

''ನಾನು ಸಾಮಾನ್ಯವಾಗಿ ಹಾರರ್ ಸಿನಿಮಾ ನೋಡಲ್ಲ. ಆದ್ರು, ಈ ಸಿನಿಮಾ ನೋಡ್ಬೇಕು ಅಂತ ನೋಡಿದೆ. ಥ್ರಿಲ್ಲಿಂಗ್ ಇದೆ, ಭಯನೂ ಆಗುತ್ತೆ, ಎಮೋಷನ್ ಕೂಡ ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ'' - ಯಶ್, ನಟ

ಮೇಕಿಂಗ್ ಗೆ ಫುಲ್ ಮಾರ್ಕ್ಸ್

''ಚಿತ್ರದ ಮೇಕಿಂಗ್, ಗ್ರಾಫಿಕ್ಸ್, ಕಾನ್ಸೆಪ್ಟ್ ಎಲ್ಲವೂ ಅದ್ಭುತವಾಗಿ ಬಂದಿದೆ. ಅಶೋಕ್ ನಟನೆ, ಅವರ ಪತ್ನಿ ಪಾತ್ರದಲ್ಲಿ ನಟಿಸಿರುವ ಸ್ಪಂದನ ಅವರ ನಟನೆ ತುಂಬಾ ಚೆನ್ನಾಗಿದೆ'' - ಯಶ್, ನಟ

ಪುಟ್ಟ ಬಾಲಕಿ ಹೈಲೆಟ್

''ಇಡೀ ಚಿತ್ರದಲ್ಲಿ ಶ್ಲಾಘ ಸಾಲಿಗ್ರಾಮ ಎಂಬ ಪುಟ್ಟ ಬಾಲಕಿಯ ನಟನೆ, ಅಬ್ಬರ ಜೋರು. ತುಂಬ ಇಷ್ಟ ಆಯಿತು. ನನ್ನ ದೃಷ್ಟಿನೇ ಆಗಿರುತ್ತೆ. ಇಂತಹ ಒಳ್ಳೆ ಸಿನಿಮಾ. ತುಂಬ ಚೆನ್ನಾಗಿ ಬಂದಿದೆ. ನೀವು ನೋಡ್ಬೇಕು ಎನ್ನುವುದು ನನ್ನ ಆಸೆ. ಇಂತಹ ಚಿತ್ರವನ್ನ ನೀವು ಪ್ರೋತ್ಸಾಹಿಸುತ್ತೀರಾ. ದಯವಿಟ್ಟು ಮನವಿ ಮಾಡಿಕೊಳ್ಳುತ್ತಿದ್ದೇನೆ'' - ಯಶ್, ನಟ

ನಿರ್ದೇಶಕ ರವಿ ಒಳ್ಳೆ ಸಿನಿಮಾ ಮಾಡಿದ್ದಾರೆ

''ನಿರ್ದೇಶಕ ರವಿ ಅವರ ಬಗ್ಗೆ ಹೇಳಲೇಬೇಕು. ಮೂರನೇ ಸಿನಿಮಾ ಇದು. ಚೆನ್ನಾಗಿ ಮಾಡಿದ್ದಾರೆ. ಅದರಲ್ಲೂ ಸೆಕೆಂಡ್ ಹಾಫ್ ಅಂತೂ ಅದ್ಭುತ'' - ಯಶ್, ನಟ

'ಕಟಕ' ಚಿತ್ರದ ಬಗ್ಗೆ....

ಅಂದ್ಹಾಗೆ, 'ಕಟಕ' ವಾಮಾಚಾರದ ಸುತ್ತ ನಡೆಯುವ ಕಥೆಯಾಗಿದ್ದು, ಪಕ್ಕಾ ಹಾರರ್ ಥ್ರಿಲ್ಲರ್ ಚಿತ್ರವಾಗಿದೆ. ಐದು ವರ್ಷದ ಬಾಲಕಿ ಮೇಲೆ ವಾಮಾಚಾರ ಪ್ರಯೋಗವಾಗಿ ಮುಂದೆ ಅದು ಏನೆಲ್ಲ ಆಗುತ್ತದೆ ಎನ್ನುವುದು ಸಿನಿಮಾದ ಚಿತ್ರಕಥೆ. ಚಿತ್ರದಲ್ಲಿ ನಟ ಅಶೋಕ್ ಮತ್ತು ಬಾಲ ನಟಿ ಶ್ಲಾಘ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

English summary
Kannada Actor, Rocking Star Yash Praised to 'Kataka' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada