ಟೀಸರ್ ಲೀಕ್ ಮಾಡಿದ ಪುಣ್ಯಾತ್ಮನಿಗೆ ದೇವರ ಒಳ್ಳೆಯದು ಮಾಡಲಿ- ಯಶ್

ನಿಗದಿ ಪಡಿಸಿದಂತೆ ಕೆಜಿಎಫ್ ಚಾಪ್ಟರ್ 2 ಟೀಸರ್ ಜನವರಿ 8 ರಂದು ಬೆಳಗ್ಗೆ 10.08 ನಿಮಿಷಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಜನವರಿ 7ರ ರಾತ್ರಿ ಟೀಸರ್ ಲೀಕ್ ಆಗಿದೆ. ಯಾರೋ ಅನಾಮಿಕರು ಟೀಸರ್ ಹ್ಯಾಕ್ ಮಾಡಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

Recommended Video

ನಿಮಗೆ ಅದೇನ್ ಖುಶಿ ಸಿಗತ್ತೋ ಗೊತ್ತಿಲ್ಲ ಎಂದು ಬೇಸರಗೊಂಡ Yash | Yash reaction to Teaser Leak

ಅಧಿಕೃತವಾಗಿ ಟೀಸರ್ ರಿಲೀಸ್ ಆಗುವುದಕ್ಕೆ ಮುಂಚೆಯೇ ಲೀಕ್ ಆದ ಪರಿಣಾಮ ಚಿತ್ರತಂಡವೂ ತಡ ಮಾಡದೇ ಜನವರಿ 7 ರ ರಾತ್ರಿ 9.29 ನಿಮಿಷಕ್ಕೆ ಟೀಸರ್ ಬಿಡುಗಡೆ ಮಾಡಿದೆ.

ಇದಕ್ಕೂ ಮುಂಚೆ ನಟ ಯಶ್ ಅವರು ಕೆಜಿಎಫ್ ಟೀಸರ್ ಲೀಕ್ ಮಾಡಿದವರ ಬಗ್ಗೆ ಮಾತನಾಡಿದರು. ''ಕೆಜಿಎಫ್ ಟೀಸರ್ ಜನವರಿ 8ಕ್ಕೆ ಬೆಳಗ್ಗೆ 10.08ಕ್ಕೆ ರಿಲೀಸ್ ಆಗಬೇಕಿತ್ತು. ಯಾರೂ ಪುಣ್ಯಾತ್ಮರು ಮಹಾನುಭಾವರು ಟೀಸರ್ ಲೀಕ್ ಮಾಡಿದ್ದಾರೆ. ಅವರಿಗೆ ಏನು ಸಂತೋಷ ಸಿಗುತ್ತೋ ಗೊತ್ತಿಲ್ಲ, ದೇವರು ಅವರಿಗೆ ಒಳ್ಳೆಯದು ಮಾಡಲಿ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Yash reaction about KGF Chapter 2 teaser leak

ಅಭಿಮಾನಿಗಳನ್ನು ಕುರಿತು ಮಾತನಾಡಿದ ರಾಕಿ ಭಾಯ್ ''ಬರ್ತಡೇ ದಿನ ಟೀಸರ್ ಬರುತ್ತೆ ಅಂತ ಕಾಯ್ತಿದ್ರಿ, ಆದರೆ ಒಂದು ದಿನ ಮುಂಚೆಯೇ ಬಂದಿದೆ. ನೋಡಿ, ಇದು ಬರಿ ಟೀಸರ್ ಮಾತ್ರ, ಸಿನಿಮಾ ಬಾಕಿ ಇದೆ'' ಎಂದಿದ್ದಾರೆ.

ಅಂತಿಮವಾಗಿ ಕೆಜಿಎಫ್ ಚಾಪ್ಟರ್ 2 ಟೀಸರ್ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ಬಿಡುಗಡೆಯಾಗಿದೆ. ಟೀಸರ್ ನೋಡಿ ಮೆಚ್ಚಿಕೊಂಡು ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳ ಸಹ ಟೀಸರ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
The teaser of Yash's KGF Chapter 2 leaked. Here are actor yash reaction about the teaser.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X