For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ವಿಚಾರದಲ್ಲಿ ಅಭಿಮಾನಿಗಳಿಗೆ ಯಶ್ ಕೊಟ್ಟ ಸಂದೇಶ

  By Naveen
  |

  ನಟಿ ರಶ್ಮಿಕಾ ಮಂದಣ್ಣ ಅವರನ್ನು ಯಶ್ ಅಭಿಮಾನಿಗಳು ಬಿಡುವ ಹಾಗೆ ಕಾಣುತ್ತಿಲ್ಲ. ಟಾಕ್ ಶೋ ಒಂದರಲ್ಲಿ ಯಶ್ ಅವರಿಗೆ 'ಮಿಸ್ಟರ್ ಶೋ ಆಫ್' ಎಂದು ಹೇಳಿದ ರಶ್ಮಿಕಾ ಈಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ನಟ ಯಶ್ ಈ ವಿಷಯದ ಬಗ್ಗೆ ಮೌನ ಮುರಿದಿದ್ದಾರೆ.

  ಯಶ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ರಶ್ಮಿಕಾ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ದೊಡ್ಡ ಸುದ್ದಿ ಮಾಡುತ್ತಿರುವ ಈ ವಿವಾದಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಯಶ್ ಸಂದೇಶ ಕೊಟ್ಟಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ 'ಶೋ ಆಫ್' ಅಲ್ಲಾ, 'ಶೋ ಮ್ಯಾನ್'.!

  ಅಂದಹಾಗೆ, ರಶ್ಮಿಕಾ ವಿವಾದದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಏನು ಹೇಳಿದ್ದಾರೆ ಅಂತ ನೀವೇ ಓದಿರಿ...

  ಯಶ್ ಪ್ರತಿಕ್ರಿಯೆ

  ಯಶ್ ಪ್ರತಿಕ್ರಿಯೆ

  ''ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ'' -ಯಶ್, ನಟ

  ರಶ್ಮಿಕಾ ಮಂದಣ್ಣ ಮಾತಿಗೆ ಕೆಂಡ ಕಾರುತ್ತಿರುವ ಯಶ್ ಅಣ್ತಮ್ಮಂದಿರು

  ನಿಮ್ಮ ಮನಸಿಗೆ ನೋವಾದಾಗ

  ನಿಮ್ಮ ಮನಸಿಗೆ ನೋವಾದಾಗ

  ''ನನ್ನನ್ನು ಪ್ರೀತಿಸುವ ನಿಮ್ಮ ಮನಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅದಕ್ಕೆ ನಾನೆಂದು ಚಿರಋಣಿ'' - ಯಶ್, ನಟ

  ಅವರ ಅಭಿಪ್ರಾಯ ಅವರದ್ದು

  ಅವರ ಅಭಿಪ್ರಾಯ ಅವರದ್ದು

  ''ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯೂ ಮಾಡಿಲ್ಲ. ಮಾತು ಸಹ ಆಡಿಲ್ಲ. ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಆಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದ್ದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು'' - ಯಶ್, ನಟ

  ಇಲ್ಲಿಗೆ ಬಿಟ್ಟು ಬಿಡಿ

  ಇಲ್ಲಿಗೆ ಬಿಟ್ಟು ಬಿಡಿ

  '''ಎಲ್ಲರ ಅಭಿಪ್ರಾಯವನ್ನು ನಾವು ಗೌರವಿಸೋಣ. ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ!'' - ಯಶ್, ನಟ

  ಏನಿದು ಯಶ್ - ರಶ್ಮಿಕಾ ಮಂದಣ್ಣ ವಿವಾದ

  ಏನಿದು ಯಶ್ - ರಶ್ಮಿಕಾ ಮಂದಣ್ಣ ವಿವಾದ

  ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರಿಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ 'ಶೋ ಆಫ್' ಅಂತ ನಿಮಗೆ ಅನಿಸುತ್ತದೆ ಅಂತ ಪ್ರಶ್ನೆ ಕೇಳಿದ್ದರು. ನಿರೂಪಕರ ಆ ಪ್ರಶ್ನೆಗೆ ರಶ್ಮಿಕಾ ಮೊದಲು 'ಯಾರು ಇಲ್ಲ.. ನಾನು ಸುಮ್ನೆ ಈ ಪ್ರಶ್ನೆಗೆ ಉತ್ತರಿಸಿ ತೊಂದರೆಗೆ ಸಿಕ್ಕಿ ಹಾಕಿ ಕೊಳ್ಳುವುದಿಲ್ಲ' ಅಂತ ಹೇಳಿದರು. ಕೊನೆಗೆ ಯಶ್ ಸರ್ ಅಂತ ಹೇಳಿದರು.

  ಅಭಿಮಾನಿಗಳು ತಿರುಗೇಟು ನೀಡಿದ್ದರು

  ಅಭಿಮಾನಿಗಳು ತಿರುಗೇಟು ನೀಡಿದ್ದರು

  ರಶ್ಮಿಕಾ ಉತ್ತರಕ್ಕೆ ಯಶ್ ಅಭಿಮಾನಿಗಳು ಕೋಪಗೊಂಡಿದ್ದರು. ''ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ Mr Show Off ಅಲ್ಲಾ, Mr Show Man. ಯಶ್ ಬಾಸ್ ಗೆ ಕ್ಷಮೆ ಕೇಳಬೇಕು'' ಅಂತ ಯಶ್ ಅಭಿಮಾನಿಗಳು ಕೇಳುತ್ತಿದ್ದರು.

  English summary
  Kananda Actor Rocking Star Yash has taken his Facebook account to react About his and Rashmika Mandanna Controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X